ಸೋಮವಾರಪೇಟೆ, ಡಿ. ೧: ಮೂಲತಃ ಮಡಿಕೇರಿ ತಾಲೂಕು ಬೇತ್ರಿ ನಿವಾಸಿ, ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪೆನಿಯೊAದರಲ್ಲಿ ಉದ್ಯೋಗದಲ್ಲಿರುವ ಪೊಂಜಾAಡ ಸವಿತಾ ಮಾದಪ್ಪ ಅವರು ಯುನೈಟೆಡ್ ಸ್ಟೇಟ್ಸ್ನಿಂದ ಪೇಟೆಂಟ್‌ಗೆ ಭಾಜನರಾಗಿದ್ದಾರೆ.

ವಯರ್‌ಲೆಸ್ ಡಿವೈಸ್‌ಗಳ ಬಳಕೆಯ ಸಂದರ್ಭ ಹೆಚ್ಚಿನ ಸುರಕ್ಷತೆ ಖಾತ್ರಿಗೊಳಿಸುವ ನಿಟ್ಟಿನಲ್ಲಿ ನಡೆಸಿದ ನೂತನ ಆವಿಷ್ಕಾರಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ವಾಣಿಜ್ಯ ಇಲಾಖೆಯಿಂದ ಈ ಪೇಟೆಂಟ್ ಲಭಿಸಿದೆ. ‘ಔಃಖಿಂIಓIಓಉ Pಖಇ-Sಊಂಖಇಆ ಏಇಙS ಈಔಖ WIಖಇಐಇSS ಆಇಗಿIಅಇS USIಓಉ ಂ ಖಇಈಇಖಇಓಅಇ Sಊಂಖಇಆ WIಖಿಊ ಖಿಊಇ WIಖಇಐಇSS ಆಇಗಿIಅಇS’ ವಿಷಯದ ಬಗ್ಗೆ ಸವಿತಾ ಮಾದಪ್ಪ ಅವರು ಆವಿಷ್ಕಾರ ಪೂರ್ಣಗೊಳಿಸಿದ್ದು, ಇವರು ಬೇತ್ರಿ ಗ್ರಾಮದ ಪೊಂಜಾAಡ ಮಾದಪ್ಪ ಹಾಗೂ ಬಿ.ಎ. ಕಾವೇರಿ ಅವರ ಪುತ್ರಿ.