ಕೂಡಿಗೆ, ಡಿ.೧: ತೊರೆನೂರು ಸಹಕಾರ ಸಂಘದ ನಿರ್ದೇಶಕರು ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಚುನಾವಣೆಯಲ್ಲಿ ವಿಜೇತರಾದ ಹೆಚ್.ಬಿ. ಚಂದ್ರಪ್ಪರವರಿಗೆ ತೊರೆನೂರು ಸಹಕಾರ ಸಂಘದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್. ಜಗದೀಶ್, ಉಪಾಧ್ಯಕ್ಷೆ ಗೌರಮಣಿ, ನಿರ್ದೇಶಕರುಗಳಾದ ಕೆ.ಎಸ್. ಕೃಷ್ಣಗೌಡ, ರವಿಚಂದ್ರ, ಮೂರ್ತಿ, ಉದಯಕುಮಾರ್, ದೇವರಾಜ್, ಕುಶಾಲಪ್ಪ, ಸೇರಿದಂತೆ ಎಲ್ಲಾ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರೀತುಪ್ರಸಾದ್, ಸಿಬ್ಬಂದಿ ವರ್ಗದವರು ಹಾಜರಿದ್ದರು.