ಸಿದ್ದಾಪುರ, ನ. ೩೦ : ವಿವಾಹಿತ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ ಲ್ದಾರೆ ಗ್ರಾಮದ ಹಂಚಿತ್ತಿಟ್ಟು ಹಾಡಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಹಂಚಿತಿಟ್ಟು ಹಾಡಿಯ ನಿವಾಸಿ ದೇವಯ್ಯ ಎಂಬವರ ಪುತ್ರ ದಿಲೀಪ್ (೨೬) ತಡರಾತ್ರಿ ಮನೆಯ ಸಮೀಪದ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿಲೀಪ್ ರಾತ್ರಿ ಮನೆಗೆ ಬಾರದ ಕಾರಣ ಮನೆಯ ಮಂದಿ ಹುಡುಕಾಡಿದ್ದಾನೆ. ಆದರೆ ದಿಲೀಪ್ ಕಂಡು ಬರಲಿಲ್ಲ. ಭಾನುವಾರದಂದು ಬೆಳಿಗ್ಗೆ ಈತನನ್ನು ಹುಡುಕಿಕೊಂಡು ಹೋಗುವ ಸಂದರ್ಭದಲ್ಲಿ ಮನೆಯ ಸಮೀಪದ ಕಾಫಿ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೋಚರಿಸಿದೆ. ದಿಲೀಪ್ ಈ ಹಿಂದೆ ಆನೆ ಕಾರ್ಯಪಡೆ ತಂಡದಲ್ಲಿ ಕೆಲಸ ಮಾಡುತ್ತಿದ್ದು ಬಳಿಕ ಆಟೋ ಚಾಲಕನಾಗಿ ಇದೀಗ ಕೂಲಿ ಕೆಲಸವನ್ನು ಮಾಡಿಕೊಂಡಿದ್ದ ಕೌಟುಂಬಿಕ ಕಲಹ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ದಿಲೀಪ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ನೇಣಿಗೆ ಶರಣಾದ ಯುವಕ

ಸಿದ್ದಾಪುರ, ನ. ೩೦ : ವಿವಾಹಿತ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ ಲ್ದಾರೆ ಗ್ರಾಮದ ಹಂಚಿತ್ತಿಟ್ಟು ಹಾಡಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಹಂಚಿತಿಟ್ಟು ಹಾಡಿಯ ನಿವಾಸಿ ದೇವಯ್ಯ ಎಂಬವರ ಪುತ್ರ ದಿಲೀಪ್ (೨೬) ತಡರಾತ್ರಿ ಮನೆಯ ಸಮೀಪದ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿಲೀಪ್ ರಾತ್ರಿ ಮನೆಗೆ ಬಾರದ ಕಾರಣ ಮನೆಯ ಮಂದಿ ಹುಡುಕಾಡಿದ್ದಾನೆ. ಆದರೆ ದಿಲೀಪ್ ಕಂಡು ಬರಲಿಲ್ಲ. ಭಾನುವಾರದಂದು ಬೆಳಿಗ್ಗೆ ಈತನನ್ನು ಹುಡುಕಿಕೊಂಡು ಹೋಗುವ ಸಂದರ್ಭದಲ್ಲಿ ಮನೆಯ ಸಮೀಪದ ಕಾಫಿ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೋಚರಿಸಿದೆ. ದಿಲೀಪ್ ಈ ಹಿಂದೆ ಆನೆ ಕಾರ್ಯಪಡೆ ತಂಡದಲ್ಲಿ ಕೆಲಸ ಮಾಡುತ್ತಿದ್ದು ಬಳಿಕ ಆಟೋ ಚಾಲಕನಾಗಿ ಇದೀಗ ಕೂಲಿ ಕೆಲಸವನ್ನು ಮಾಡಿಕೊಂಡಿದ್ದ ಕೌಟುಂಬಿಕ ಕಲಹ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ದಿಲೀಪ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.