ಮಡಿಕೇರಿ, ನ. ೩೦: ಮಡಿಕೇರಿ ಕೊಡವ ಸಮಾಜದ ವತಿಯಿಂದ ವರ್ಷಂಪ್ರತಿಯAತೆ ಮೂರು ದಿನಗಳ ಪುತ್ತರಿ ಈಡ್ ಕಾರ್ಯಕ್ರಮಕ್ಕೆ ಇಂದು ಸಂಜೆ ಪುತ್ತರಿ ಕೋಲ್ ಮಂದ್‌ನಲ್ಲಿ ಚಾಲನೆ ನೀಡಲಾಯಿತು.
ಮಡಿಕೇರಿ ಕೊಡವ ಸಮಾಜದ ಅಧೀನದಲ್ಲಿ ಜಿಲ್ಲಾ ಕ್ರೀಡಾಂಗಣದ ಸನಿಹದಲ್ಲಿರುವ ಮಂದ್ ಈ ಬಾರಿ ನವೀಕರಣಗೊಂಡಿದ್ದು, ಮೊನ್ನೆಯಷ್ಟೇ ಹೊಸದಾಗಿ ಆಲ್ ಮರ ನೆಡುವ ಕಾರ್ಯವನ್ನು ನಡೆಸಲಾಗಿತ್ತು. ಪುತ್ತರಿ ಹಬ್ಬಕ್ಕೂ ಮುನ್ನ ಕೊಡವ ಜನಪದ ಕಲೆಗಳನ್ನು ಯುವಕ ಪೀಳಿಗೆಗೂ ಕಲಿಸುವ ಮೂಲಕ ಈಡ್ ಹೆಸರಿನಲ್ಲಿ ತಾಲೀಮು ನಡೆಸುವುದು ಸಂಪ್ರದಾಯಬದ್ದವಾದ ವಾಡಿಕೆಯಾಗಿದೆ.
ಡಿ.೨ರ ವರೆಗೆ ಈಡ್ ಕಾರ್ಯ ನೆರವೇರಲಿದೆ. ಆರಂಭಿಕ ದಿನದಂದು ನಗರ ವ್ಯಾಪ್ತಿಯ ಹಲವಷ್ಟು ಕೊಡವ ಬಾಂಧವರು ಪಾಲ್ಗೊಂಡಿದರು.
ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ನವೀಕೃತಗೊಂಡಿರುವ ಮಂದ್ ತೆರೆಯುವ ಕಾರ್ಯಕ್ರಮದೊಂದಿಗೆ ಪುತ್ತರಿ ಈಡ್‌ಗೆ ಚಾಲನೆ ನೀಡಿ ಮಾತನಾಡಿದರು. ಮಂದ್ ನೆಲೆಯ ಬೃಹತ್ ಮರ ಮುರಿದು ಬಿದ್ದು ಅದೇ ನೆಲೆಯಲ್ಲಿ ಅರಳಿ ಗಿಡವನ್ನು ಸಂಪ್ರದಾಯವಾಗಿ ನೆಡಲಾಯಿತು. ಹಿಂದಿನ ಸಂಪ್ರದಾಯದAತೆ ಪುತ್ತರಿ ನಮ್ಮೆಯ ಮೂರು ದಿನ ಮುಂಚಿತವಾಗಿ ಈ ಮಂದ್‌ನಲ್ಲಿ ಪುತ್ತರಿ ಈಡನ್ನು ನಡೆಸಲಾಗುತಿದೆಂದರು. ೪ಐದನೇ ಪುಟಕ್ಕೆ(ಮೊದಲ ಪುಟದಿಂದ)
ದೇವರ ನೆಲೆಯಲ್ಲಿ ಎಲ್ಲರು ಅಕ್ಕಿಹಾಕಿ ನಮಿಸಿ ಕೋಲಾಟ್, ಬೊಳಕಾಟ್ ಪರೆಕಳಿ ನಡೆಸಲಾಯಿತು. ಮಡಿಕೇರಿ ಕೊಡವ ಸಮಾಜದ ಪದಾಧಿಕಾರಿಗಳು, ಕೊಡವ ಕೇರಿ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.