ಮಡಿಕೇರಿ, ನ. ೨೯: ಕೊಡಗಿನ ಯುವತಿ ಖ್ಯಾತ ಸ್ಕೀಯಿಂಗ್ ಕ್ರೀಡಾಪಟು ತೆಕ್ಕಡ ಭವಾನಿ ನಂಜುAಡ ಅವರು ಸ್ಕೀಯಿಂಗ್ ವಿಶ್ವಕಪ್‌ನಲ್ಲಿ ಸ್ಪರ್ಧಿಸಿರುವ ಚೊಚ್ಚಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಭಾರತದ ನಂಬರ್ ೧ ಕ್ರಾಸ್ ಕಂಟ್ರಿ ಸ್ಕೀಯರ್ ಮತ್ತು ಭಾರತೀಯ ಚಳಿಗಾಲದ ಕ್ರೀಡೆಗಳಲ್ಲಿ ಪ್ರಮುಖ ತಾರೆಯಾಗಿ ಭವಾನಿ ಗುರುತಿಲ್ಪಟ್ಟಿದ್ದಾರೆ. ಇದೀಗ ನವೆಂಬರ್ ೨೮ರಿಂದ ೩೦ರತನಕ ಫಿನ್‌ಲ್ಯಾಂಡ್ ರಾಷ್ಟçದ ರುಕಾದಲ್ಲಿ ಜರುಗುತ್ತಿರುವ ೧೦ ಕಿ.ಮೀ. ಕ್ಲಾಸಿಕ್ ಮತ್ತು ೧.೪ ಕಿ.ಮೀ. ಸ್ಟಿçಂಟ್ ಕ್ಲಾಸಿಕ್ ರೇಸ್‌ಗಳಲ್ಲಿ ಭವಾನಿ ಸ್ಪರ್ಧಿಸಿದ್ದು, ಭಾರತದಿಂದ ಸ್ಕೀಯಿಂಗ್ ವಿಶ್ವಕಪ್‌ನಲ್ಲಿ ಸ್ಪರ್ಧಿಸಿದ ಮೊದಲ ಕ್ರೀಡಾಪಟು ಎಂಬ ಸಾಧನೆ ಮಾಡಿದ್ದಾರೆ. ವಿವಿಧ ರೀತಿಯ ಕ್ರೀಡೆಗಳಲ್ಲಿ ಕೊಡಗಿನ ಹಲವು ಕ್ರೀಡಾಪಟುಗಳು ಗುರುತಿಲ್ಪಟ್ಟಿದ್ದು, ಇದೀಗ ಭವಾನಿ ನಂಜುAಡ ಅವರು ಈ ಸಾಧನೆಯಿಂದಾಗಿ ಕೊಡಗಿಗೆ ಮತ್ತೊಂದು ಕೀರ್ತಿ ತಂದಿದ್ದಾರೆ. ಈ ಹಿಂದೆ ವಿವಿಧೆಡೆಗಳಲ್ಲಿ ನಡೆದ ಸ್ಕೀಯಿಂಗ್ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ತೋರಿದ್ದ ಭವಾನಿ ಮೊದಲ ಬಾರಿಗೆ ಕಠಿಣವಾದ ವಿಶ್ವಕಪ್‌ನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ೪ಏಳನೇ ಪುಟಕ್ಕೆ