ಸೋಮವಾರಪೇಟೆ, ನ. ೨೯: ರೋಟರಿ ಸಂಸ್ಥೆ ವತಿಯಿಂದ ರೋಟರಿ ಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲೇಖಕಿ ಹಾಗೂ ಕವಯತ್ರಿ ಆಗಿರುವ ಶಿಕ್ಷಕಿ ಸುನಿತಾ ಲೋಕೇಶ್ ಸಾಗರ್ ಅವರನ್ನು ಸನ್ಮಾನಿಸಲಾಯಿತು.
ಸುನಿತಾ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ರೋಟರಿ ಹಿಲ್ಸ್ ಅಧ್ಯಕ್ಷೆ ವೀಣಾ ಮನೋಹರ್ ಹೇಳಿದರು.
ಈ ಸಂದರ್ಭ ಕಾರ್ಯದರ್ಶಿ ಡಿ.ಪಿ. ರಮೇಶ್, ಪ್ರಮುಖರಾದ ಎ.ಪಿ. ವೀರರಾಜು ಹಾಗೂ ಬೆಂಗಳೂರು ರೋಟರಿ ಸಂಸ್ಥೆಯ ಸದಸ್ಯೆ ಮಧುರ ಉಜ್ಜಿನಿ ಉಪಸ್ಥಿತರಿದ್ದರು.