ನಾಪೋಕ್ಲು, ನ. ೨೯: ಇಲ್ಲಿನ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಲಯನ್ಸ್ ಕ್ಲಬ್ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ನ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಸ್ಥಳೀಯ ಲಯನ್ಸ್ ಕ್ಲಬ್ ಹಾಗೂ ಇತರ ಸಂಘ ಸಂಸ್ಥೆಗಳಲ್ಲಿ ಹಲವಾರು ವರ್ಷ ಗಳಿಂದ ಕಾರ್ಯನಿರ್ವಹಿಸಿ ಸಮಾಜ ಸೇವೆ ಮಾಡಿರುವ ನಾಪೋಕ್ಲು ಲಯನ್ಸ್ ಕ್ಲಬ್ನ ಹಿರಿಯ ಸದಸ್ಯರುಗಳಾದ ಅಪ್ಪಾರಂಡ ಸಮ್ಮಿ ಅಪ್ಪಣ್ಣ, ಕುಂಡ್ಯೋಳAಡ ಗಣೇಶ್ ಮುತ್ತಪ್ಪ , ಅಪ್ಪಾರಂಡ ಸುಭಾಷ್ ತಿಮ್ಮಯ್ಯ ಅವರುಗಳನ್ನು ಲಯನ್ಸ್ ಪರವಾಗಿ ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿ ಗೌರವಿಸಿದರು.
ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೆಯಂಡ ಬಿ ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಾಂತೀಯ ಅಧ್ಯಕ್ಷೆ ಭೇಟಿ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಮಾರಂಭದಲ್ಲಿ ಲಯನ್ಸ್ ಕ್ಲಬ್ನ ಪ್ರಾಂತೀಯ ಅಧ್ಯಕ್ಷೆ ಬಿಂದು ಗಣಪತಿ, ಲಯನ್ಸ್ ವಲಯ ಅಧ್ಯಕ್ಷ ಡಾ ಕೋಟೆರ ಪಂಚಮ್ ತಿಮ್ಮಯ್ಯ, ಸ್ಥಳೀಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ಬನ್ಸಿ ಭೀಮಯ್ಯ , ಖಜಾಂಚಿ ಅಪ್ಪಚೆಟೋಳಂಡ ವಸಂತ ಮುತ್ತಪ್ಪ, ಲಿಯೋ ಕ್ಲಬ್ ಅಧ್ಯಕ್ಷೆ ಕನ್ನಿಕಾ, ಕಾರ್ಯದರ್ಶಿ ಧೃವ್ ದೇವಯ್ಯ, ಖಜಾಂಚಿ ಅನನ್ಯ ಹಾಗೂ ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.