ಮಡಿಕೇರಿ, ನ. ೨೯: ಯುವ ಪೀಳಿಗೆಯಲ್ಲಿ ಹೆಚ್ಚಾಗುತ್ತಿರುವ ಮಾದಕ ವ್ಯಸನಗಳ ವಿರುದ್ಧ ಪೋಷಕರು ಮತ್ತು ಸಮಾಜವನ್ನು ಜಾಗೃತಿ ಗೊಳಿಸುವ ನಿಟ್ಟಿನಲ್ಲಿ ರೋಟರಿ ಸದಸ್ಯರು ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ರೋಟರಿ ಜಿಲ್ಲೆ ೩೧೮೧ನ ಗವರ್ನರ್ ಪಿ.ಕೆ. ರಾಮಕೃಷ್ಣ ಕರೆ ನೀಡಿದ್ದಾರೆ.
ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ರೋಟರಿ ವುಡ್ಸ್ಗೆ ಅಧಿಕೃತ ಭೇಟಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ದವಾಗಿರುವ ಮೈಸೂರಿನಲ್ಲಿಯೇ ೪೦೦ ಕೋಟಿ ಮೌಲ್ಯದ ಮಾದಕ ಪದಾರ್ಥಗಳು ದೊರಕಿರುವುದು ಕಳವಳಕಾರಿ ಸಂಗತಿಯಾಗಿದೆ.
ಶಾಲಾ, ಕಾಲೇಜುಗಳಲ್ಲಿ ಚಾಕೋಲೇಟ್ ಸೇರಿದಂತೆ ವಿವಿಧ ರೂಪಗಳಲ್ಲಿ ಮಾದಕ ದ್ರವ್ಯ ವಿತರಿಸುವ ಜಾಲ ಬೃಹದಾಕಾರದಲ್ಲಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಮಾದಕ ವ್ಯಸನದ ಅಪಾಯವನ್ನು ವಿದ್ಯಾರ್ಥಿಗಳು, ಪೋಷಕರಿಗೆ ತಿಳಿಸಿ, ಜಾಗೃತಿ ಉಂಟು ಮಾಡುವ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜಿತವಾಗಬೇಕೆಂದು ಅವರು ಕರೆ ನೀಡಿದರು. ಮನೆ ಮತ್ತು ಶಾಲೆಯಲ್ಲಿ ಮಕ್ಕಳ ವಿಚಿತ್ರ ಅಥವಾ ಅತಿರೇಕದ ವರ್ತನೆ ಕಂಡುಬAದಾಗ ಸೂಕ್ಷ್ಯವಾಗಿ ಇಂಥ ವರ್ತನೆಗಳನ್ನು ಶಿಕ್ಷಕರು, ಪೋಷಕರು ಗಮನಿಸಿ ಎಚ್ಚೆತ್ತುಕೊಂಡು ಸೂಕ್ತ ಚಿಕಿತ್ಸೆ ನೀಡುವತ್ತ ಗಮನ ನೀಡಬೇಕೆಂದೂ ಅವರು ಸಲಹೆ ನೀಡಿದರು.
ಮಕ್ಕಳಿಗೆ ಗೆಲುವಿನ ಪಾಠಕ್ಕಿಂತ ಮೊದಲು ಜೀವನದಲ್ಲಿ ಸೋತಾಗ ಹೇಗೆ ಅದರಿಂದ ಹೊರಬರಬೇಕೆಂಬ ಆತ್ಮಸ್ಥೆರ್ಯದ ಪಾಠವನ್ನು ಮಕ್ಕಳಲ್ಲಿ ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ ರಾಮಕೃಷ್ಣ, ಈ ನಿಟ್ಟಿನಲ್ಲಿ ರೋಟರಿಯಂಥ ಸಮಾಜಸೇವಾ ಸಂಘಟನೆಗಳು ಕಾರ್ಯಕ್ರಮಗಳನ್ನು ರೂಪಸುವಂತೆ ಕರೆ ನೀಡಿದರು.
ಸಾಮಾನ್ಯ ಜೀವನ ವನ್ನು ಬದುಕಲಾಗದ ಸ್ಥಿತಿಯಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ, ಅಂಥವರಿಗೆ ದಾನಿಗಳ ಮೂಲಕ ನೆರವು ನೀಡಿ ಅಂಥವರ ಬದುಕನ್ನು ಬದಲಾಯಿಸುವ ನಿಟ್ಟಿನಲ್ಲಿ ರೋಟರಿ ಸದಸ್ಯರು ಹೊಸಚಿಂತನೆಯೊAದಿಗೆ ಕಾರ್ಯೋನ್ಮುಖರಾಗುವಂತೆಯೂ ಸಲಹೆ ನೀಡಿದರು.
ರೋಟರಿ ವಲಯ ೬ ರ ಸಹಾಯಕ ಗವರ್ನರ್ ಧಿಲನ್ ಚಂಗಪ್ಪ ಮಾತನಾಡಿ, ರೋಟರಿ ಮಡಿಕೇರಿ ವುಡ್ಸ್ ಕೇವಲ ೪ ವರ್ಷಗಳ ಸಂಸ್ಥೆಯಾಗಿದ್ದರೂ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ವರ್ಷದಲ್ಲಿ ೭ ಹೊಸ ಸದಸ್ಯರ ಸೇರ್ಪಡೆಯೊಂದಿಗೆ ಆರೋಗ್ಯ ಜಾಗೃತಿ ಸಂಬAಧಿತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಮಾತನಾಡಿ, ಕಳೆದ ಐದು ತಿಂಗಳಲ್ಲಿ ೩೦ಕ್ಕೂ ಅಧಿಕ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದರು.
ರೋಟರಿ ವಲಯ ಸೇನಾನಿ ಕೆ.ಸಿ. ಕಾರ್ಯಪ್ಪ, ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ವೇದಿಕೆಯಲ್ಲಿದ್ದರು. ಇದೇ ಸಂದರ್ಭ ಚೇಂದ್ರಿಮಾಡ ವಿನು ಸಂಪಾದಕತ್ವದಲ್ಲಿ ಪ್ರಕಟಿತ ರೋಟರಿ ವುಡ್ಸ್ ನ ವಾರ್ತಾಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.
ರೋಟರಿ ಜಿಲ್ಲಾ ಸಮಿತಿಯ ಪ್ರಮುಖರಾದ ಬಿ.ಜಿ. ಅನಂತಶಯನ, ಅನಿಲ್ ಹೆಚ್.ಟಿ. ಡಾ. ಸಿ.ಆರ್. ಪ್ರಶಾಂತ್, ಎ.ಕೆ. ಜೀವನ್, ರಂಗಸ್ವಾಮಿ, ಅನಿತಾ ಪೂವಯ್ಯ, ರೋಟರಿ ವುಡ್ಸ್ ಮಾಜಿ ಅಧ್ಯಕ್ಷರಾದ ಎಸ್.ಎಸ್. ಸಂಪತ್ ಕುಮಾರ್, ವಸಂತ್ ಕುಮಾರ್, ಹರೀಶ್ ಕಿಗ್ಗಾಲು ಸೇರಿದಂತೆ ಅನೇಕ ಸದಸ್ಯರು ಪಾಲ್ಗೊಂಡಿದ್ದರು.