ಚೆಯ್ಯಡಾಣೆ, ನ. ೨೯: ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ವತಿಯಿಂದ ತೃತೀಯ ವರ್ಷದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟದಲ್ಲಿ ಚೇಲಾವರ ಹಾಗೂ ಕೈಕಾಡು ತಂಡಗಳು ಫೈನಲ್‌ಗೆ ಲಗ್ಗೆ ಇಟ್ಟಿದೆ.

ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಾವಲಿ ತಂಡವನ್ನು ಕಿರುಂದಾಡು ತಂಡ ೭-೨ ಗೋಲುಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿತು.

ಕಿರುಂದಾಡು ತಂಡದ ಅತಿಥಿ ಆಟಗಾರ ನಾಚಪ್ಪ ೪, ಅಪ್ಪನೆರವಂಡ ನಾಚಪ್ಪ ೨, ದೀಕ್ಷಿತ್ ೧ ಗೋಲುಗಳಿಸಿದರೆ, ಬಾವಲಿ ತಂಡದ ಸಫಾಸ್ ೧, ಪ್ರಜ್ವಲ್ ೧ ಗೋಲು ದಾಖಲಿಸಿದರು.

೨ನೇ ಪಂದ್ಯದಲ್ಲಿ ಬಲಂಬೇರಿ ತಂಡವನ್ನು ಚೇಲಾವರ ತಂಡ ೨-೧ ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ಗೆ ಪ್ರವೇಶ ಪಡೆದುಕೊಂಡಿತು. ಚೇಲಾವರ ತಂಡದ ಗಗನ್, ಬ್ರಿಜೇಶ್ ಗಣಪತಿ ಗೊಲುಗಳಿಸಿದರೆ, ಬಲಂಬೇರಿ ತಂಡದ ಆಟಗಾರ ಅಪ್ಪಚ್ಚು ಏಕೈಕ ಗೋಲು ಬಾರಿಸಿದರು.

ಸೆಮಿಫೈನಲ್

ಮೊದಲ ಸೆಮಿಫೈನಲ್ ಕೈಕಾಡು ಹಾಗೂ ಕಿರುಂದಾಡು ನಡುವೆ ನಡೆದು ಪ್ರಥಮಾರ್ದ ಹಾಗೂ ದ್ವಿತೀಯಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ನಂತರ ಟ್ರೈಬ್ರೇಕರ್‌ನಲ್ಲಿ ಕಿರುಂದಾಡು ತಂಡವನ್ನು ಕೈಕಾಡು ತಂಡ ೫-೪ ಗೋಲುಗಳಿಂದ ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.

೨ನೇ ಸೆಮಿಫೈನಲ್‌ನಲ್ಲಿ ಚೇಲಾವರ ಹಾಗೂ ಪಾಲಂಗಾಲ ಬಿರುಸಿನ ಪ್ರದರ್ಶನ ನೀಡಿ ಸಮಬಲದ ಹೋರಾಟ ನಡೆದು ೧೯ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಸ್ಟೊçÃಕ್ ಅನ್ನು ಚೇಲಾವರ ತಂಡದ ಆಟಗಾರ ಗಣಪತಿ ಗೋಲಾಗಿ ಪರಿವರ್ತಿಸಿದರು.

ಪಾಲಂಗಾಲ ತಂಡದ ಆಟಗಾರ ಯತೀಶ್ ೨೨ನೇ ನಿಮಿಷದಲ್ಲಿ ಆಕರ್ಷಕ ಗೋಲು ಬಾರಿಸಿ ೧-೧ ಸಮನಾಗಿಸಿದರು. ನಂತರ ಟ್ರೆöÊಬ್ರೇಕರ್ ನಲ್ಲಿ ೫-೪ ಗೋಲಿನಿಂದ ಚೇಲಾವರ ಗೆಲುವು ಸಾಧಿಸಿ ಫೈನಲ್‌ಗೆ ಅರ್ಹತೆ ಪಡೆಯಿತು. ನಿನ್ನೆ ಕೈಕಾಡು ತಂಡದ ಪರವಾಗಿ ಅತಿಥಿ ಆಟಗಾರನಾಗಿ ಪಂಜಾಬಿನ ಕುಶ್ಮನ್ ಸಿಂಗ್ ಮೈದಾನದಲ್ಲಿ ಆಡಿ ಗಮನ ಸೆಳೆದರು.

ಸೆಮಿಫೈನಲ್ ಪಂದ್ಯಾಟವನ್ನು ಮುಖ್ಯ ಅತಿಥಿ ಪಟ್ರಪಂಡ ಜಗದೀಶ್ ಹಾಗೂ ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಸ್ಟಿಕ್‌ನಿಂದ ಬಾಲ್ ದೂಡುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಿದ್ದೇರಿಯಂಡ ಕಾವೇರಪ್ಪ ಪಾಲ್ಗೊಂಡಿದರು.

ಈ ಸಂದರ್ಭ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ಅಪ್ಪಚ್ಚೆಟೋಳಂಡ ಮನು ಮುತ್ತಪ್ಪ, ಅರಪಟ್ಟು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ನಡಿಕೇರಿಯಂಡ ಶೀಲಾ, ಕ್ಲಬ್ ಅಧ್ಯಕ್ಷ ಬೇಪಡಿಯಂಡ ಬಿದ್ದಪ್ಪ, ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಮೇದುರ ಗಣು ಕುಶಾಲಪ್ಪ, ಉಪಾಧ್ಯಕ್ಷ ಐತಿಚಂಡ ಭೀಮಯ್ಯ, ಕಾರ್ಯದರ್ಶಿ ಬೇಪಡಿಯಂಡ ವಿಲಿನ್, ಕೋಶಾಧಿಕಾರಿ ಐತಿಚಂಡ ಪ್ರಕಾಶ್ ಕಾರ್ಯಪ್ಪ, ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

ತೀರ್ಪುಗಾರರಾಗಿ ಕರವಂಡ ಅಪ್ಪಣ್ಣ, ಪಟ್ರಪಂಡ ಸಚಿನ್ ಮಂದಣ್ಣ, ಚಂದಪAಡ ಆಕಾಶ್, ಕೋಳುವಂಡ ಚಂಗಪ್ಪ, ಪಂದ್ಯಾಟದ ನಿರ್ದೇಶಕರಾಗಿ ಚೆಯ್ಯಂಡ ಲವ ಅಪ್ಪಚ್ಚು ಕಾರ್ಯನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ಬೇಪಡಿಯಂಡ ವಿಲಿನ್ ನಿರ್ವಹಿಸಿದರು. ತಾ. ೩೦ ರಂದು (ಇಂದು) ಫೈನಲ್ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.

ಕರಡ ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬೇಪಡಿಯಂಡ ಎಸ್. ಬಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಅಂತರರಾಷ್ಟಿçÃಯ ಹಾಕಿ ತೀರ್ಪುಗಾರ ಅಚ್ಚಕಾಳೆರ ಪಳಂಗಪ್ಪ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪ್ಪಣ್ಣ, ಕೊಡವ ಕಲ್ಚರಲ್ ಅಂಡ್ ರಿಕ್ರಿಯೇಷನ್ ಕ್ಲಬ್ ಕ್ರೀಡಾ ಸಮಿತಿಯ ಅಧ್ಯಕ್ಷ ಮೇದುರ ಗಣು ಕುಶಾಲಪ್ಪ, ನೆರಪಂಡ ಸತೀಶ, ಮುಕ್ಕಾಟಿರ ಕಿರಣ್ ಮತ್ತಿತರರು ಭಾಗವಹಿಸಲಿದ್ದಾರೆ.

-ಅಶ್ರಫ್