ಮಡಿಕೇರಿ, ನ. ೨೯: ಸಮಸ್ತ ಸಂಘಟನೆಯು ಈ ದೇಶದ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ಕಾರ್ಯವನ್ನು ಮಾಡುತ್ತಿಲ್ಲ. ಬದಲಿಗೆ ಧಾರ್ಮಿಕ ಸೌಹಾರ್ದತೆಗಾಗಿ, ಭಾವೈಕ್ಯತೆಗಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಪ್ರವಾದಿ (ಸ) ರವರ ಜೀವನದ ಮೌಲ್ಯಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಸಮಸ್ತ ಕೇಂದ್ರೀಯ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದ್ ಸಯ್ಯದ್ ಮುಹಮ್ಮದ್ ಜೆಫ್ರಿ ಮುತ್ತುಕೋಯ ತಂಙಲ್ ಹೇಳಿದರು.
ಕಾಸರಗೋಡಿನ ಕುಣಿಯ ಎಂಬಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಸಮಸ್ತ ಉಲಮಾ ಸಂಘಟನೆಯ ಶತಮಾನೋತ್ಸವ ನಡೆಯಲಿದ್ದು, ಇದರ ಭಾಗವಾಗಿ ಮಡಿಕೇರಿ ಗಾಂಧಿ ಮೈದಾನದಲ್ಲಿ ಏರ್ಪಡಿಸಿದ್ದ ಕೊಡಗು ಜಿಲ್ಲಾ ಪ್ರಚಾರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಉಲಮಾ ಒಕ್ಕೂಟದ ಅಧ್ಯಕ್ಷ ಎಂ.ಎA. ಅಬ್ದುಲ್ಲಾ ಪೈಝಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಅಬ್ದುಲ್ ಸಲಾಮ್ ದಾರಿಮಿ ಆಲಂಬಾಡಿ, ಉಸ್ಮಾನುಲ್, ಫೈಜಿ ತೋಡಾರು, ಅಬ್ದುಲ್ ರೆಹಮಾನ್ ಮುಸ್ಲಿಯಾರ್, ಮಾಜಿ ಶಾಸಕ ಕೆ.ಎಂ ಇಬ್ರಾಹಿಂ ಮಾಸ್ಟರ್ ಮಾತನಾಡಿದರು.
ಅಬ್ದುಲ್ ಫೈಜಿ ಅಂಬಲ ಕಡವು, ಹೈದರ್ ದಾರಿಮಿ ಕರಾಯ, ಸತ್ತಾರ್ ಪಂದಲ್ಲೂರು, ಇಬ್ರಾಹಿಂ ಪೈಝಿ ಪೆರಾಳ್ ಮುಹಿಯುದ್ದೀನ್ ಫೈಝಿ ಎಡಪಾಲ, ಹುಸೈನ್ ಮುಸ್ಲಿಯಾರ್ ಕುಂಜಿಲ, ಲತೀಫ್ ಹಾಜಿ ಬೆಂಗಳೂರು ಪಿ.ಬಿ. ಇಸ್ಮಾಯಿಲ್ ಮುಸ್ಲಿಯಾರ್, ವೈ.ಎಂ. ಪೈಝಿ, ನಗರಸಭಾ ಸದಸ್ಯ ಅಮೀನ್ ಮೊಯ್ಸಿನ್, ಟಿ.ಎಂ. ಶಹೀದ್ ಸುಳ್ಯ, ಸಿ.ಪಿ. ಬಶೀರ್ ಹಾಜಿ, ಹಮೀದ್ ಹಾಜಿ ಬೆಟ್ಟಗೇರಿ, ರಹೂಫ್ ಹಾಜಿ ಸಿದ್ದಾಪುರ, ಸಲೀಮ್ ಕೋಳುಹಳ್ಳ ಸಕಲೇಶಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಬೆಳಿಗ್ಗೆ ೯ ಗಂಟೆಗೆ ಪಿ.ಬಿ. ಇಸ್ಮಾಯಿಲ್ ಮುಸ್ಲಿಯಾರ್ ಧ್ವಜಾರೋಹಣ ಮಾಡುವುದರೊಂದಿಗೆ ಸಮ್ಮೇಳನಕ್ಕೆ ಚಾಲನೆ ನೀಡಿದರು.
ನಂತರ ಕೊಡಗು ಜಿಲ್ಲಾ ಕಾರ್ಯಕರ್ತರಿಗಾಗಿ ಸಮ್ಮೇಳನದ ಅಧ್ಯಯನ ಶಿಬಿರ ನಡೆಯಿತು.