ಮಡಿಕೇರಿ, ನ. ೨೮: ಪ್ರಧಾನ ಮಂತ್ರಿಯವರ ಫಸಲ್‌ಭಿಮಾ ಯೋಜನೆಯಡಿಯಲ್ಲಿ ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ಅಡಿಕೆ ಬೆಳೆಗಳಿಗೆ ಹವಾಮಾನಾಧಾರಿತ ಬೆಳೆ ವಿಮೆಯಲ್ಲಿ ಪ್ರೀಮಿಯಂ ಪಾವತಿಸಿರುವ ಬೆಳೆಗಾರರಿಗೆ ವಿಮಾ ಕಂಪನಿಯು ಅತ್ಯಲ್ಪ ಪ್ರಮಾಣದಲ್ಲಿ ಅವೈಜ್ಞಾನಿಕವಾಗಿ ಪೇಔಟ್ ನೀಡಿದ್ದು ಗೊಂದಲಕ್ಕೆ ಎಡೆಮಾಡಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಅಸಮಧಾನ ವ್ಯಕ್ತಪಡಿಸಿದೆ.

ಕೊಡಗು, ಹಾಸನ, ಚಿಕ್ಕಮಗಳೂರು, ಜಿಲ್ಲೆಗಳಲ್ಲಿ ಕಳೆದ ವರ್ಷದ ಅತಿಯಾದ ಗಾಳಿ ಮಳೆಯಿಂದ ಅತಿವೃಷ್ಟಿ ಸಂಭವಿಸಿ ಕಾಳುಮೆಣಸು, ಅಡಿಕೆ ಬೆಳೆಗಳಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಆದರೂ ಕೂಡ ವಿಮಾ ಕಂಪನಿಗಳು ಯಾವ ಮಾನದಂಡವನ್ನು ಆಧರಿಸಿ ವಿಮೆಯ ಪೇಔಟ್ ನೀಡಿದ್ದಾರೆಂಬುದೇ ಸಂಶಯಕ್ಕೆ ಎಡೆಮಾಡಿದೆ. ಪ್ರಕೃತಿ ವಿಕೋಪದಿಂದ ಉಂಟಾಗುವ ಬೆಳೆನಷ್ಟದ ಅಂದಾಜು ಪ್ರಕ್ರಿಯೆ ಹಾಗೂ ನಷ್ಟಕ್ಕೆ ನೀಡಲಾಗುವ ವಿಮೆ ಯಾವ ಮಾನದಂಡವನ್ನಾಧರಿಸಿ ಲೆಕ್ಕಾಚಾರ ಮಾಡುತ್ತಾರೆಂಬುದೇ ಯಕ್ಷಪ್ರಶ್ನೆಯಾಗಿದೆ. ಬ್ಯಾಂಕ್‌ಗಳು ವಿಮೆಯ ಪ್ರೀಮಿಯಂ ಕಟ್ಟಿಸಿಕೊಳ್ಳುವುದನ್ನು ಹೊರತುಪಡಿಸಿ ವಿಮೆಗೆ ಸಂಬAಧಿಸಿದAತೆ ಇನ್ನಿತರ ಯಾವುದೇ ಮಾಹಿತಿಗಳು ಅವರ ಬಳಿ ಇರುವುದಿಲ್ಲ. ವಿಮೆಯ ಪ್ರೀಮಿಯಂ ಕಟ್ಟುವಾಗ ವಿಮೆಯ ಕಂಪನಿಯ ಯಾವುದೇ ಸಂಪರ್ಕವು ಬೆಳೆಗಾರರಿಗಿರುವುದಿಲ್ಲ. ಹೀಗಾಗಿ ವಿಮೆಯ ನೀತಿ-ನಿಯಮಗಳು, ಮಾಹಿತಿಯನ್ನು ನೀಡುವಲ್ಲಿ ಬೆಳೆಗಾರರನ್ನು ದೂರವಿಡಲಾಗಿದೆ. ಒಟ್ಟಾರೆ ಈ ವಿಮಾ ವ್ಯವಸ್ಥೆಯ ಅಸ್ಪಷ್ಟತೆಯಿಂದ ಕೂಡಿದ್ದು ಕರ್ನಾಟಕ ಬೆಳೆಗಾರರ ಒಕ್ಕೂಟವು ವಿಮಾ ವ್ಯವಸ್ಥೆ ಹಾಗೂ ಕಂಪನಿಯ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದೆ.

ರೈತ ಬೆಳೆಗಾರರಿಗೆ ಇದರ ಬಗ್ಗೆ ಸ್ಪಷ್ಟತೆಯ ಅವಶ್ಯಕತೆಯಿದ್ದು ೨೦೨೪-೨೫ ನೇ ಸಾಲಿನಲ್ಲಿಯೇ ಜಾರಿಗೆ ಬರುವಂತೆ ಸಂಬAಧಪಟ್ಟ ವಿಮಾ ಕಂಪನಿಯು ಕೂಡಲೆ ಇದನ್ನು ಗಂಭೀರವಾಗಿ ಪರಿಗಣಿಸಿ ಬೆಳೆಗಾರ ಸಂಘಟನೆಗಳ ಪ್ರತಿನಿಧಿಗಳು, ರೈತರು ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಭೆ ನೆಡೆಸಿ ವಿಮಾ ವ್ಯವಸ್ಥೆಯಲ್ಲಿನ ನೀತಿ-ನಿಯಮಗಳು ಹಾಗೂ ಪ್ರಕೃತಿ ವಿಕೋಪದಿಂದ ಉಂಟಾಗುವ ನಷ್ಟಕ್ಕೆ ವಿಮೆಯನ್ನು ನೀಡುವಾಗ ಅನುಸರಿಸುವ ಮಾನದಂಡಗಳ ಬಗ್ಗೆ ಮಾಹಿತಿ ನೀಡಬೇಕು. ವಿಮೆಯ ಪೇಔಟ್ ನೀಡುವ ಮುನ್ನವೇ ಪ್ರಕೃತಿ ವಿಕೋಪದಿಂದ ಉಂಟಾಗಿರುವ ನಷ್ಟ ಹಾಗೂ ನೀಡಲಾಗುವ ವಿಮೆಯ ಬಗ್ಗೆ ಸಂಬAಧಪಟ್ಟ ವಿಮಾ ಕಂಪನಿ ಮಾಹಿತಿ ಒದಗಿಸಿಕೊಡಬೇಕು.

ಈ ಕೆಲಸ ಶೀಘ್ರದಲ್ಲೇ ಆಗಬೇಕು. ಇದರ ಬಗ್ಗೆ ಸಂಬAಧಪಟ್ಟ ತೋಟಗಾರಿಕೆ ಇಲಾಖೆಯು ಕೂಡ ಮುತುವರ್ಜಿ ವಹಿಸಿ ಬೆಳೆಗಾರರಿಗೆ ಸ್ಪಷ್ಟ ಮಾಹಿತಿ ಒದಗಿಸಿಕೊಡುವಲ್ಲಿ ಮುಂದಾಗಬೇಕೆAದು ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಅಧ್ಯಕ್ಷ ಹೆಚ್.ಬಿ.ಶಿವಣ್ಣ ಆಗ್ರಹಿಸಿದ್ದಾರೆ. ಬೆಳೆಗಾರರ ಹಿತ ಕಾಯಲು ರಾಜ್ಯ/ಕೇಂದ್ರ ಸರ್ಕಾರಗಳು ವಿಮೆಯ ಪ್ರೀಮಿಯಂ ಹಣ ಪಾವತಿಸುವಲ್ಲಿ ಪಾಲುದಾರರೂ ಆಗಿರುವುದರಿಂದ ವಿಮಾ ಸಂಸ್ಥೆಗೆ ಕಟ್ಟುನಿಟ್ಟಾದ ಸೂಚನೆ ನೀಡುವುದು ಕೂಡ ಈ ನಿಟ್ಟಿನಲ್ಲಿ ಅತ್ಯಗತ್ಯವಾಗಿರುತ್ತದೆ. ಹೀಗಾಗದಿದ್ದಲ್ಲಿ ರೈತ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರದ ಮುತುವರ್ಜಿಯಿಂದ ರೂಪುಗೊಂಡಿರುವ ವಿಮಾ ವ್ಯವಸ್ಥೆಯ ಮೂಲ ಉದ್ದೇಶಕ್ಕೆ ಧಕ್ಕೆಯಾದಂತಾಗುತ್ತದೆ ಎಂದು ಕೆಜಿಎಫ ಕಾರ್ಯದರ್ಶಿ ಟಿ.ಪಿ. ಸುರೇಂದ್ರ ಅಭಿಪ್ರಾಯಪಟ್ಟಿದ್ದಾರೆ.