ಚೆಯ್ಯಂಡಾಣೆ, ನ. ೨೮: ಕರಡ ಗ್ರಾಮದ ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ವತಿಯಿಂದ ಆಯೋಜಿತ ತೃತೀಯ ವರ್ಷದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.
ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಾವಳಿಗೆ ನರಿಯಂದಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೆಬಾಸ್ಟಿನ್ ಪೆರೇರಾ ಹಾಗೂ ಗಣ್ಯರು ಚಾಲನೆ ನೀಡಿದರು.
ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಭಕೋರಿದರು.
ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಚೆಯ್ಯಂಡ ಲೀಲಾವತಿ ಅಪ್ಪಚ್ಚು ಮಾತನಾಡಿ, ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದ ಜನಕ ಪಾಂಡAಡ ಕುಟ್ಟಣಿ ಅವರು ಕೌಟುಂಬಿಕ ಪ್ರಾರಂಭಿಸಿದ ಮೈದಾನ ಇದಾಗಿದೆ. ಈ ಮೈದಾನದಲ್ಲಿ ಆಡಿದ ಎಷ್ಟೋ ಕ್ರೀಡಾಪಟುಗಳು ಇಂದು ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಮಟ್ಟದ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂದರು.
ಸಂಸದರು - ಶಾಸಕರು ಬಾಗಿ
ಸಂಸದ ಯದುವೀರ್ ಒಡೆಯರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ೩ನೇ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಗೆ ಕೊಡಗು ಹೆಸರುವಾಸಿ. ಕ್ರೀಡೆಯ ಮೂಲಕ ಜಿಲ್ಲೆ ಚಟುವಟಿಕೆ ಪೂರ್ಣವಾಗಿ ಕೂಡಿರುತ್ತದೆ. ಕೇಂದ್ರ ಸರ್ಕಾರ ಕ್ರೀಡೆಗೆ ಹೆಚ್ಚು ಮಹತ್ವವನ್ನು ನೀಡುವ ಉದ್ದೇಶದಿಂದ ಅನೇಕ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಇದರಿಂದ ಕ್ರೀಡಾ ಇಲಾಖೆಯ ಮುಖಾಂತರ ಸ್ಥಳೀಯವಾಗಿ ನಡೆಯುವ ಕ್ರೀಡೆಗಳಿಗೂ ಅನುದಾನ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದರ ಕ್ರೀಡಾ ಮಹೋತ್ಸವವನ್ನು ನಡೆಸಲು ಮುಂದಾಗಿದ್ದು ಈಗಾಗಲೇ ಮೈಸೂರಿನಲ್ಲಿ ಬ್ಯಾಡ್ಮಿಂಟನ್, ಹಗ್ಗಜಗ್ಗಾಟ, ಕ್ರೀಡೆಯನ್ನು ಆಯೋಜಿಸಲಾಗಿದೆ. ಅದರಂತೆ ಕೊಡಗಿನಲ್ಲೂ ಹಾಕಿ ಕ್ರೀಡಾಕೂಟವನ್ನು ಆಯೋಜಿಸಲಿದ್ದೇವೆ ಇದಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ವೀರಾಜಪೇಟೆ ಕೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಡಿಯತ್ ನಾಡ್ ಕಪ್ ಕ್ರೀಡಾಕೂಟ ಯಶಸ್ವಿಯಾಗಿ ಇದೆ ರೀತಿ ಮುಂದುವರಿಯಲಿ ಎಂದು ಆಶಿಸಿದರು.
ಇದೆ ಸಂದರ್ಭ ಯದುವೀರ್ ಒಡೆಯರ್ ಹಾಗೂ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ಬೇಪಡಿಯಂಡ ಬಿದ್ದಪ್ಪ, ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಮೇದುರ ಗಣು ಕುಶಾಲಪ್ಪ, ಉಪಾಧ್ಯಕ್ಷ ಐತಿಚಂಡ ಭೀಮಯ್ಯ, ಕಾರ್ಯದರ್ಶಿ ಬೇಪಡಿಯಂಡ ವಿಲಿನ್, ಕೋಶಾಧಿಕಾರಿ ಐತಿಚಂಡ ಪ್ರಕಾಶ್ ಕಾರ್ಯಪ್ಪ, ಗ್ರಾ.ಪಂ. ಸದಸ್ಯೆ ಪಾಂಡAಡ ರಾಣಿ ಗಣಪತಿ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.
ಫಲಿತಾಂಶದ ವಿವರ
ಕೋಕೇರಿ ತಂಡವನ್ನು ಸಡನ್ ಡೆತ್‌ನಲ್ಲಿ ಬಾವಲಿ ತಂಡ ಸೋಲಿಸುವ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ಕೋಕೇರಿ ತಂಡದ ಅತಿಥಿ ಆಟಗಾರ ಲಿಖಿತ್ ೨ ಹಾಗೂ ೨೮ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಬಾವಲಿ ತಂಡದ ಆಟಗಾರ ಶರಣ್ ೪೦ನೇ ನಿಮಿಷದಲ್ಲಿ ಹಾಗೂ ಸಫಾಸ್ ೪೭ ನಿಮಿಷದಲ್ಲಿ ಗೋಲು ದಾಖಲಿಸಿ ೨-೨ ಸಮಬಲದ ನಂತರ ನಡೆದ ಟೈಬ್ರೇಕರ್ ನಲ್ಲಿ ೪-೪ ಸಮಬಲದ ಹೋರಾಟ ಮುಂದುವರೆದು, ಎರಡು ಸಡೆನ್ ಡೆತ್‌ನಲ್ಲಿಯು ಸಮಬಲ ಹೊರಟ ನಡೆದು, ೩ನೇ ಸಡನ್ ಡೆತ್‌ನಲ್ಲಿ ಬಾವಲಿ ೧-೦ ಗೋಲು ದಾಖಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ಕೈಕಾಡು ತಂಡ ಕರಡ ತಂಡವನ್ನು ೩-೦ ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತು.
ಕೈಕಾಡು ತಂಡದ ಅತಿಥಿ ಆಟಗಾರ ಕುಶ ಗೌಡ ೨, ನಿರನ್ ೧ ಗೋಲು ಬಾರಿಸಿದರು. ೩ನೇ ಪಂದ್ಯದಲ್ಲಿ ಪಾಲಂಗಾಲ ತಂಡ ನರಿಯಂದಡ ತಂಡವನ್ನು ೪-೨ ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತು. ಕುಂಞಪ್ಪ ೨, ಮೋನಿ ೨ ಗೋಲು ದಾಖಲಿಸಿದರೆ, ನರಿಯಂದಡ ಆಟಗಾರ ವೀರಣ್ಣ ಪಾಟೀಲ್ ೧ ಗೋಲು ಹಾಗೂ ಚೇತನ್ ಪೆನಾಲ್ಟಿ ಸ್ಟೊçÃಕ್‌ನಲ್ಲಿ ೧ ಗೋಲು ಬಾರಿಸಿ ಗೋಲಿನ ಅಂತರ ತಗ್ಗಿಸಿದ್ದರು.
೪ನೇ ಪಂದ್ಯದಲ್ಲಿ ಅರಪಟ್ಟು ತಂಡವನ್ನು ಚೇಲಾವರ ತಂಡ ೧-೦ ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಚೇಲಾವರ ತಂಡದ ಆಟಗಾರ ಗಗನ್ ೧ ಗೋಲು ಗಳಿಸಿದರು.
ತೀರ್ಪುಗಾರರಾಗಿ ಕರವಂಡ ಅಪ್ಪಣ್ಣ, ಪಟ್ರಪಂಡ ಸಚಿನ್ ಮಂದಣ್ಣ, ಚಂದಪAಡ ಆಕಾಶ್, ಕೊಳುವಂಡ ಚಂಗಪ್ಪ, ಪಂದ್ಯಾಟದ ನಿರ್ದೇಶಕರಾಗಿ ಚೆಯ್ಯಂಡ ಲವ ಅಪ್ಪಚ್ಚು ಕಾರ್ಯನಿರ್ವಹಿಸಿದರು. ವೀಕ್ಷಕ ವಿವರಣೆಗಾರರಾಗಿ ನೆರ್ಪಂಡ ಹರ್ಷ ಮಂದಣ,್ಣ ಚೇನಂಡ ಸಂಪತ್ ಕಾರ್ಯನಿರ್ವಹಿಸಿದರು. - ಅಶ್ರಫ್