ತನಿಖಾ ವರದಿ : ಚಂದ್ರಮೋಹನ್
ಕುಶಾಲನಗರ, ನ. ೨೮: ಪಟ್ಟಣದ ಹೃದಯ ಭಾಗದ ಕೋಟಿಗಟ್ಟಲೆ ಬೆಲೆ ಬಾಳುವ ಸುಮಾರು ೧.೫ ಎಕರೆ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಕುಶಾಲನಗರ ನಂ. ೪೭೦೨ ನೇ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ವಾಣಿಜ್ಯ ಕಟ್ಟಡದ ಮಳಿಗೆಗಳಲ್ಲಿ ಅವ್ಯವಹಾರ ಹಾಗೂ ಆಡಳಿತಾತ್ಮಕ ಲೋಪಗಳು ನಡೆದಿರುವ ಆರೋಪಗಳು ಕಂಡುಬAದಿದೆ.
ಈ ಬಗ್ಗೆ ಸಂಘದ ಸದಸ್ಯರುಗಳು ಸಹಕಾರ ಸಂಘಗಳ ಮಡಿಕೇರಿ ಉಪ ವಿಭಾಗದ ಸಹಾಯಕ ನಿಬಂಧಕರಿಗೆ ದೂರು ಸಲ್ಲಿಸಿದ್ದು, ಸಂಬAಧಿಸಿದAತೆ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ೧೯೫೯ರ ಪ್ರಕರಣ ೬೪ ರ ಅಡಿಯಲ್ಲಿ ವಿಚಾರಣೆ ಅಂತಿಮ ಹಂತದಲ್ಲಿದೆ.
ಸಂಘದಲ್ಲಿ ನಡೆಯುತ್ತಿರುವ ಅವ್ಯವಹಾರ ಮತ್ತು ನ್ಯೂನತೆಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆದಿದ್ದು ಮಳಿಗೆ ಸಂಬAಧ ಸಂಘಕ್ಕೆ ಲಕ್ಷಾಂತರ ರೂ. ಗಳ ಆದಾಯಕ್ಕೆ ಕುತ್ತು ಬಂದಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಈ ಬಗ್ಗೆ ಸಂಘದ ಕೆಲವು ಸದಸ್ಯರುಗಳು ಸಹಕಾರ ಸಂಘಕ್ಕೆ ದೂರು ನೀಡಿದ್ದು ಈ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ್ದು ಮೇಲ್ನೋಟಕ್ಕೆ ಸಹಕಾರ ಸಂಘದ ಆಡಳಿತ ಮಂಡಳಿ ಕಳೆದ ಹಲವು ವರ್ಷಗಳಿಂದ ಸಹಕಾರ ಸಂಘಗಳ ಅಧಿನಿಯಮ ಮತ್ತು ನಿಯಮ ಹಾಗೂ ಸುತ್ತೋಲೆಗಳನ್ನು ಉಲ್ಲಂಘಿಸಿರುವುದು ದೃಢಪಟ್ಟಿದೆ.
ಸಂಘದ ಕಟ್ಟಡದಲ್ಲಿ ಲಭ್ಯವಿರುವ ಒಟ್ಟು ೨೪ ಮಳಿಗೆಗಳನ್ನು ಸಂಘದ ಬಹುತೇಕ ಆಡಳಿತ ಮಂಡಳಿ ಅವರ ಕೆಲವು ಕುಟುಂಬದ ಸದಸ್ಯರುಗಳು ಮಳಿಗೆಯ ವ್ಯವಹಾರದಲ್ಲಿ ನಿಯಮಬಾಹಿರವಾಗಿ ಭಾಗಿದಾರರಾಗಿದ್ದು ಸಂಘಕ್ಕೆ ಬಾಡಿಗೆ ರೂಪದಲ್ಲಿ ಲಕ್ಷಾಂತರ ರೂ.ಗಳ ನಷ್ಟ ಉಂಟು ಮಾಡಿರುವುದು ಮೇಲ್ನೋಟಕ್ಕೆ ಖಚಿತಗೊಂಡಿದೆ ಎಂದು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಪಿ.ಬಿ. ಮೋಹನ್ ‘ಶಕ್ತಿ’ಗೆ ವಿವರಿಸಿದ್ದಾರೆ.
ಅಂಗಡಿಗಳನ್ನು ಪಡೆದಿರುವ ಕೆಲವು ಆಡಳಿತ ಮಂಡಳಿಯ ಕುಟುಂಬ ಸದಸ್ಯರು ಮಳಿಗೆಗಳನ್ನು ನಿಯಮಬಾಹಿರವಾಗಿ ಪರಭಾರೆ ನೀಡಿ ಅವರಿಂದ ತಿಂಗಳಿಗೆ ನಿಗದಿತ ಬಾಡಿಗೆಗಿಂತ ಹಲವು ಪಟ್ಟು ಬಾಡಿಗೆ ಸಂಗ್ರಹಿಸುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಈ ಬಗ್ಗೆ ತನಿಖೆ ನಡೆಸಿ ಈ ವರ್ಷದ ಜುಲೈ ತಿಂಗಳಲ್ಲಿ ಸಮಗ್ರ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ..
ಸಂಘದ ವಾಣಿಜ್ಯ ಮಳಿಗೆಗಳನ್ನು ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಯ ಬಹುತೇಕ ಸದಸ್ಯರ ಕುಟುಂಬ ಸದಸ್ಯರು ಮಳಿಗೆ ಬಾಡಿಗೆಗೆ ಪಡೆದು ವ್ಯವಹಾರದಲ್ಲಿ ಭಾಗಿದಾರರಾಗಿರುವ ಬಗ್ಗೆ ಮತ್ತು ಪರಬಾರೆ ಪಡೆದ ವ್ಯಾಪಾರಿಗಳಿಂದ ಹೆಚ್ಚುವರಿ ಮುಂಗಡ ಹಣ ಹಾಗೂ ಬಾಡಿಗೆ ಪಡೆದು ಸಂಘಕ್ಕೆ ಲಕ್ಷಾಂತರ ರೂ.ಗಳ ಬಾಡಿಗೆ ಮತ್ತು ಮುಂಗಡ ಹಣದ ನಷ್ಟ ಉಂಟು ಮಾಡಿರುವ ಸಂಬAಧ ೨೦೨೪ ಅಕ್ಟೋಬರ್ ತಿಂಗಳಲ್ಲಿ ದೂರು ಸಲ್ಲಿಸಿದ್ದರು. ಪರಬಾರೆ ಮಾಡುವುದರೊಂದಿಗೆ ಸಂಘದ ನಿಯಮಕ್ಕೆ ವಿರುದ್ಧವಾಗಿ ಒಪ್ಪಂದ ಮಾಡಿರುವುದು ಹಾಗೂ ನಕಲಿ ದಾಖಲೆಗಳ ಮೂಲಕ ಹಣಕಾಸು ಸಂಸ್ಥೆಗಳಿAದ ಲಕ್ಷಾಂತರ ಮೊತ್ತದ ಸಾಲ ಪಡೆದಿರುವ ಬಗ್ಗೆಯೂ ಕೆಲವು ಮಾಹಿತಿಗಳು ಹೊರ ಬಿದ್ದಿವೆ ಎನ್ನುವ ದೂರುಗಳು ಕೇಳಿ ಬಂದಿವೆ.
ಸಂಘದಲ್ಲಿ ನಡೆಯುತ್ತಿರುವ ಮಳಿಗೆಗಳ ಅವ್ಯವಹಾರಗಳ ಮತ್ತು ಲೋಪ ದೋಷಗಳ ಬಗ್ಗೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಅವರ ಬಳಿ ಕೂಡ ಸಂಘದ ಸದಸ್ಯರ ತಂಡ ತೆರಳಿ ಸಂಘದಲ್ಲಿ ನಡೆಯುತ್ತಿರುವ ಅವ್ಯವಹಾರ ಆಡಳಿತಾತ್ಮಕ ಲೋಪಗಳ ಬಗ್ಗೆ ಮಾಹಿತಿ ೪ಆರನೇ ಪುಟಕ್ಕೆ