ಕುಶಾಲನಗರ, ನ. ೨೮: ಕುಶಾಲನಗರ ಸರಕಾರಿ ಬಸ್ ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದ ಪ್ರಯಾಣಿಕನೊಬ್ಬನ ಬ್ಯಾಗ್‌ನಿಂದ ರೂ. ೨.೫೦ ಲಕ್ಷ ಅಪಹರಿಸಿದ ಘಟನೆ ನಡೆದಿದೆ.

ಕುಶಾಲನಗರ ಸಮೀಪದ ಚಿಕ್ಕಕಮರಹಳ್ಳಿ ಗ್ರಾಮದ ನಿವಾಸಿ ಸೋಮಶೇಖರ ಎಂಬವರು ಮೈಸೂರು ಕಡೆಗೆ ತೆರಳಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.

ಸೋಮಶೇಖರ್ ಕುಶಾಲನಗರ ಬ್ಯಾಂಕ್ ಒಂದರಿAದ ರೂ. ೯,೫೦,೦೦೦ ಮತ್ತು ಮನೆಯಿಂದ ತಂದಿದ್ದ ರೂ. ೫೦,೦೦೦ ಸೇರಿದಂತೆ ಒಟ್ಟು ರೂ. ೧೦ ಲಕ್ಷಗಳನ್ನು ಬ್ಯಾಗಿನಲ್ಲಿರಿಸಿ ಮೈಸೂರಿನ ಸಂಬAಧಿಕರಿಗೆ ವಿವಾಹ ಸಲುವಾಗಿ ನೀಡಲು ಗುರುವಾರ ಸಂಜೆ ಕುಶಾಲನಗರ ಸರಕಾರಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವೇಳೆ ಕಳ್ಳರು ಬ್ಯಾಗ್‌ಅನ್ನು ಬ್ಲೇಡ್ ಮೂಲಕ ಕತ್ತರಿಸಿ ರೂ. ೨.೫೦ ಲಕ್ಷದ ಒಂದು ಬಂಡಲ್ ಹಣ ಅಪಹರಿಸಿರುವುದಾಗಿ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಉಳಿದಂತೆ ರೂ. ೭.೫೦ ಲಕ್ಷ ಬ್ಯಾಗಿನಲ್ಲಿ ಉಳಿದಿದೆ. ರೂ. ೨.೫೦ ಲಕ್ಷ ಕಳವಾದ ಬಗ್ಗೆ ಸೋಮಶೇಖರ್ ನೀಡಿದ ದೂರಿನ ಅನ್ವಯ ಕುಶಾಲನಗರ ಪೊಲೀಸರು ನಿಲ್ದಾಣದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದು, ಆರೋಪಿ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.