ಮಡಿಕೇರಿ, ನ. ೨೭: ಡಿಸೆಂಬರ್ ೯ ರಿಂದ ೧೪ ರವರೆಗೆ ಚೆನ್ನೆöÊನಲ್ಲಿ ಸ್ಕಾ÷್ವಶ್ ವಿಶ್ವಕಪ್ ನಡೆಯಲಿದ್ದು ಮೂಲತಃ ಕೊಡಗಿನವರಾದ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಟೂರ್ನಿಯಲ್ಲಿ ಇರಾನ್, ಜಪಾನ್, ಮಲೇಷಿಯಾ, ರಿಪಬ್ಲಿಕ್ ಆಫ್ ಕೊರಿಯಾ, ಹಾಂಗ್ ಕಾಂಗ್, ಚೀನಾ, ಈಜಿಪ್ಟ್, ದಕ್ಷಿಣ ಆಫ್ರಿಕಾ, ಪೋಲ್ಯಾಂಡ್, ಸ್ವಿಟ್ಜರ್ ಲ್ಯಾಂಡ್, ಆಸ್ಟೆçÃಲಿಯಾ ಹಾಗೂ ಬ್ರೆಸಿಲ್ ತಂಡಗಳು ಭಾಗವಹಿಸಲಿವೆ. ಭಾರತವನ್ನು ಜೋಶ್ನಾ ಸೇರಿದಂತೆ ಅನಾಹತ್ ಸಿಂಗ್, ಅಭಯ್ ಸಿಂಗ್, ವೆಲಾವನ್ ಎಸ್ ಅವರುಗಳು ಪ್ರತಿನಿಧಿಸಲಿದ್ದಾರೆ.

ಚೆನ್ನೆöÊನಲ್ಲಿ ಭಾರತ ತಂಡದ ವಿಶ್ವಕಪ್ ಜರ್ಸಿ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶ್ನಾ ಅವರು, ೨೦೨೮ರಲ್ಲಿ ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಂಪಿಕ್ಸ್ನಲ್ಲಿ ಆಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಸ್ಕಾ÷್ವಶ್ ಆಟ ಇದೇ ಮೊದಲ ಬಾರಿಗೆ ಒಲಂಪಿಕ್ಸ್ನಲ್ಲಿ ಸ್ಥಾನ ಪಡೆದಿದ್ದು, ಚಿಕ್ಕಂದಿನಿAದಲೇ ಒಲಂಪಿಕ್ಸ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬ ಕನಸು ಕಂಡಿದ್ದ ಜೋಶ್ನಾ ಅವರು ಆಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಜೋಶ್ನಾ ಅವರು ೨೨ ವರ್ಷಗಳ ಕಾಲ ವೃತ್ತಿಪರ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ದೇಹದ ಫಿಟ್ನೆಸ್ ಅನುಮತಿಸಿದರೆ ಒಲಂಪಿಕ್ಸ್ನಲ್ಲಿ ಆಡುವುದಾಗಿ ಹೇಳಿದ್ದಾರೆ. ಆದರೆ ಸದ್ಯದ ಮಟ್ಟಿಗೆ ವಿಶ್ವಕಪ್ ಹಾಗೂ ಮುಂಬರುವ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುವುದಕ್ಕೆ ಸಿದ್ಧತೆ ನಡೆಸುವುದಕ್ಕೆ ಆದ್ಯತೆ ನೀಡುವುದಾಗಿಯೂ ಹೇಳಿದ್ದಾರೆ.