ಮಡಿಕೇರಿ, ನ. ೨೭: ಸದಾ ತನಿಖೆ ಹಿಂದೆ ಬೀಳುತ್ತಿದ್ದವರು ಇಂದು ಮೈದಾನದಲ್ಲಿ ಗೆಲುವಿಗಾಗಿ ಮಿಂಚಿನ ವೇಗದಲ್ಲಿ ಓಡುತ್ತಿದ್ದರು. ಖಾಕಿ ಸಮವಸ್ತçದಲ್ಲಿ ಶಿಸ್ತುಬದ್ಧವಾಗಿ ಕಾಣಿಸಿಕೊಳ್ಳುತ್ತಿ ದ್ದವರು ಬಣ್ಣ ಬಣ್ಣದ ಟ್ರಾö್ಯಕ್ ಸೂಟ್‌ನಲ್ಲಿ ಮಿಂಚುತ್ತಿದ್ದರು. ಅಪರಾಧ ಪ್ರಕರಣಗಳನ್ನು ಭೇದಿ ಸಲು ತವಕಿಸುತ್ತಿದ್ದವರು ಕ್ರೀಡಾ ಪಟುಗಳನ್ನು ಹುರಿದುಂಬಿಸು ವುದರಲ್ಲಿ ನಿರತರಾಗಿದ್ದರು. ಒತ್ತಡದ ಬದುಕಿಗೆ ಅಲ್ಪ ವಿರಾಮ ಹಾಕಿದ ಆರಕ್ಷಕರು ಕ್ರೀಡಾ ಹಬ್ಬದಲ್ಲಿ ಸಂಭ್ರಮ ಸಡಗರದಿಂದ ಭಾಗಿಯಾಗಿ ಉತ್ಸಾಹ ತೋರಿದರು.

ಹೌದು..ಕೊಡಗು ಜಿಲ್ಲಾ ಪೊಲೀಸರು ಶಿಸ್ತು, ಪ್ರಾಮಾಣಿಕತೆಗೆ ಹೆಸರುವಾಸಿ. ಕಬ್ಬಿಣದ ಕಡಲೆಯಂತಹ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ನಿಸ್ಸೀಮರು. ಅದೇ ರೀತಿ ಸಾಂಸ್ಕೃತಿಕ ಚಟುವಟಿಕೆಯಲ್ಲಿಯೂ ಮೇಲುಗೈ ಎಂದು ತೋರಿಸಿಕೊಟ್ಟವರು. ಇದೀಗ ಕ್ರೀಡಾ ಹಬ್ಬದಲ್ಲಿ ಮಿಂದೇಳುವ ಮೂಲಕ ಆಡಲು, ಓಡಲು ಸೈ ಎನಿಸಿಕೊಳ್ಳುತ್ತಿದ್ದಾರೆ.

ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ ದೊರೆಯಿತು. ಬೆಳಿಗ್ಗಿನಿಂದಲೇ ಜಿಲ್ಲೆಯ ಎಲ್ಲೆಡೆಯಿಂದ ಕರ್ತವ್ಯನಿರತ ಪೊಲೀಸರು ಆಟೋಟ ಗಳಲ್ಲಿ ಪಾಲ್ಗೊಂಡರು. ಉನ್ನತ ಅಧಿಕಾರಿಗಳು, ಕೆಳಹಂತದ ಸಿಬ್ಬಂದಿಗಳೆAಬ ಬೇಧ-ಬಾವವಿಲ್ಲದೆ ಕ್ರೀಡಾಕೂಟದಲ್ಲಿ ಪರಸ್ಪರ ಒಂದಾಗಿ ಸಂಭ್ರಮಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲೆಯ ಡಿವೈಎಸ್‌ಪಿಗಳು, ವೃತ್ತ ನಿರೀಕ್ಷಕರು, ಉಪನಿರೀಕ್ಷಕರುಗಳು ಪಂದ್ಯಾವಳಿಗೆ ಸಾಕ್ಷಿಯಾದರು. ೮೦೦ ಮೀಟರ್, ೨೦೦ ಮೀಟರ್ ಓಟ, ಲಾಂಗ್ ಜಂಪ್, ಹೈ ಜಂಪ್, ವಿಕೆಟ್‌ಗೆ ಗುರಿ ಮಾಡಿ ಬಾಲ್‌ನಲ್ಲಿ ಹೊಡೆಯುವುದು, ಪಾಸಿಂಗ್ ದ ಬಾಲ್, ಲೆಮೆನ್ ಆ್ಯಂಡ್ ಸ್ಪೂನ್, ಕ್ರಿಕೆಟ್, ಭಾರದ ಗುಂಡು ಎಸೆತ, ತಟ್ಟೆ ಎಸೆತ, ಜಾವಲಿನ್ ಎಸೆತ, ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ ಹೀಗೆ ನಾನಾ ರೀತಿಯ ಆಟೋಟಗಳು ನಡೆದವು. ತಾ. ೨೯ರ ತನಕ ಕ್ರೀಡಾಕೂಟ ಮುಂದುವರೆಯಲಿದೆ.

ಪಥ ಸಂಚಲನ

ಪAದ್ಯಾಟ ಅತ್ಯಂತ ಶಿಸ್ತುಬದ್ಧವಾಗಿ ಆಯೋಜನೆ ಗೊಂಡಿತ್ತು. ಕ್ರೀಡಾಕೂಟ ಆರಂಭಕ್ಕೂ ಮುನ್ನ ಅತಿಥಿ ಗಣ್ಯರನ್ನು ಪೊಲೀಸ್ ಗೌರವದೊಂದಿಗೆ ವೇದಿಕೆಗೆ ಕರೆ ತರಲಾಯಿತು. ಆನಂತರ ಮಂಜುನಾಥ್ ಅವರ ನೇತೃತ್ವದಲ್ಲಿ ಸಶಸ್ತç ಮೀಸಲು ಪಡೆ, ರಾಘವೇಂದ್ರ ಮುಂದಾಳತ್ವದಲ್ಲಿ ಮಡಿಕೇರಿ ಉಪವಿಭಾಗ ತಂಡ, ಜಿ. ನವೀನ್ ನೇತೃತ್ವದಲ್ಲಿ ವೀರಾಜಪೇಟೆ ಉಪ ವಿಭಾಗ ತಂಡ, ಲತಾ ನೇತೃತ್ವದ ಮಹಿಳಾ ಪೊಲೀಸ್ ತಂಡ, ಸುಬ್ರಮಣ್ಯ ನೇತೃತ್ವದ ಸೋಮವಾರಪೇಟೆ ಉಪವಿಭಾಗ ತಂಡ ಹಾಗೂ ಕುಟ್ಟಪ್ಪ ನೇತೃತ್ವದ ವಿಶೇಷ ಘಟಕ ತಂಡದಿAದ ಮೈದಾನದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.

ಕಳೆದ ಬಾರಿಯ ಕ್ರೀಡಾಕೂಟದ ವೈಯಕ್ತಿಕ ಚಾಂಪಿಯನ್ ಸಂಜು ಕ್ರೀಡಾ ಜ್ಯೋತಿ ತಂದು ಅತಿಥಿ ಗಣ್ಯರಿಗೆ ಹಸ್ತಾಂತರಿಸಿದರು. ಬಳಿಕ ಬಲೂನ್ ಅನ್ನು ಹಾರಿ ಬಿಡುವ ಮೂಲಕ ವಾರ್ಷಿಕ ಕ್ರೀಡಾಕೂಟಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.

ಪದಕ ಪ್ರದಾನ

ಇತ್ತೀಚಿಗೆ ನಡೆದ ೭ನೇ ದಕ್ಷಿಣ ವಲಯ ಕರ್ತವ್ಯ ಕೂಟದಲ್ಲಿ ಪಾಲ್ಗೊಂಡ ವಿಜೇತರಿಗೆ ಪದಕವನ್ನು ಸಮಾರಂಭದಲ್ಲಿ ಅತಿಥಿ ಗಣ್ಯರು ಪ್ರದಾನ ಮಾಡಿದರು.

ಚಿನ್ನದ ಪದಕ ಪಡೆದ ಜಿತೇಂದ್ರ ರೈ, ಕೆ.ಕೆ. ಸ್ವಾಮಿ, ಬೆಳ್ಳಿ ಪದಕ ಪಡೆದ ಎಂ. ಶಿವ, ೪ಐದನೇ ಪುಟಕ್ಕೆ (ಮೊದಲ ಪುಟದಿಂದ)

ಕಿರಣ್, ಪರಮೇಶ್, ಲೀಲಾಂಬಿಕ, ಕಂಚಿನ ಪದಕ ಪಡೆದ ಮುದ್ದುಮಹದೇವ, ಆಯುಷ, ಎನ್.ಆರ್. ಹರೀಶ್ ಅವರುಗಳಿಗೆ ಪದಕ ಪ್ರದಾನ ಮಾಡಲಾಯಿತು.

ಕುಟುಂಬ ಸಹಿತ ಎಸ್.ಪಿ. ಭಾಗಿ

ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಪತ್ನಿ, ಮಗ ಹಾಗೂ ತಾಯಿ ಅವರೊಂದಿಗೆ ಭಾಗಿಯಾದರು. ಎಸ್.ಪಿ. ಕುಟುಂಬ ಕೂಡ ಲವಲವಿಕೆಯಿಂದ ಮೈದಾನದಲ್ಲಿ ಕ್ರೀಡಾಕೂಟಗಳನ್ನು ವೀಕ್ಷಿಸಿ ಹುರಿದುಂಬಿಸಿದರು.

ಮಾನಸಿಕವಾಗಿ ಸದೃಢತೆ ಸಾಧಿಸಬೇಕಾದರೆ ಕ್ರೀಡಾ ಚಟುವಟಿಕೆಗಳು ಸಹಕಾರಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಹೇಳಿದರು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನಿಗೆ ದೈಹಿಕ ಕ್ಷಮತೆ ಹಾಗೂ ಮಾನಸಿಕ ಸದೃಢತೆ ಅತೀ ಮುಖ್ಯವಾಗಿರುತ್ತದೆ. ಕ್ರೀಡೆÀಯಿಂದ ಉತ್ತಮ ಗುಣಗಳು ಬೆಳೆಯಲು ಸಾಧ್ಯವಾಗುತ್ತದೆ. ಮಾನಸಿಕ ಆರೋಗ್ಯವೂ ವೃದ್ಧಿಯಾಗುತ್ತದೆ. ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ. ಆದರೆ, ಭಾಗವಹಿಸುವಿಕೆ ಅತೀ ಮುಖ್ಯವಾಗುತ್ತದೆ. ಕ್ರೀಡಾಪಟುಗಳು ಕ್ರೀಡಾ ಹಾಗೂ ತಂಡ ಸ್ಫೂರ್ತಿಯಿಂದ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಪೊಲೀಸರು ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ನಿಟ್ಟಿನಲ್ಲಿ ವಿವಿಧ ಹಂತ ವಾರ್ಷಿಕ ಕ್ರೀಡಾಕೂಟ ನಡೆಯುತ್ತದೆ. ಮಡಿಕೇರಿಯಲ್ಲಿ ಈ ಬಾರಿ ೩ ದಿನ ಪಂದ್ಯಾಟ ಆಯೋಜಿಸಲಾಗಿದೆ. ಪೊಲೀಸರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಆರೋಗ್ಯವೂ ಕಾರಣವಾಗುತ್ತದೆ. ಮಾನಸಿಕ ಕ್ಷಮತೆ ಹೆಚ್ಚಳಕ್ಕೆ ದೈಹಿಕ ಸಾಮರ್ಥ್ಯವೂ ಕಾರಣವಾಗುತ್ತದೆ. ಎಲ್ಲರಲ್ಲೂ ಕ್ರೀಡಾ ಸ್ಫೂರ್ತಿ ಇರಬೇಕು. ಕೊಡಗು ಪೊಲೀಸರು ಕುಟುಂಬವಿದ್ದAತೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ ಸದಸ್ಯರುಗಳಾದ ಅನಿತಾ ಪೂವಯ್ಯ, ಅರುಣ್ ಶೆಟ್ಟಿ, ಮಡಿಕೇರಿ ಡಿವೈಎಸ್‌ಪಿ ಸೂರಜ್, ಸೋಮವಾರಪೇಟೆ ಡಿವೈಎಸ್‌ಪಿ ಚಂದ್ರಶೇಖರ್, ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್, ವಿಶೇಷ ಘಟಕ ಇನ್ಸ್ಪೆಕ್ಟರ್ ಎಸ್.ಜಿ. ಮೇದಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.