ಕೂಡಿಗೆ, ನ. ೨೬: ಜಿಲ್ಲೆಯ ರಾಷ್ಟಿçÃಯ ಭ್ರಷ್ಟಾಚಾರ ನಿರ್ಮೂಲನಾ ಕಾರ್ಯಾಚರಣೆ ಸಮಿತಿ, ಕುಶಾಲನಗರ ತಾಲೂಕು ಸಮಿತಿ ವತಿಯಿಂದ ಕುಶಾಲನಗರದ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಕುಶಾಲನಗರದ ಅಂಬೇಡ್ಕರ್ ವಸತಿ ವಿದ್ಯಾರ್ಥಿ ನಿಲಯಕ್ಕೆ, ಕುಶಾಲನಗರ ಪುರಸಭೆಗೆ ಭೇಟಿ ನೀಡಿ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಕ್ರಮಕೊಳ್ಳಲು ತಿಳಿಸಲಾಗಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನೊಂದಾವಣಿ ಕಚೇರಿಗೂ ಭೇಟಿ ನೀಡಿ, ಭ್ರಷ್ಟಾಚಾರ ತಡೆಯುವಂತೆ ಮುಖ್ಯಸ್ಥರಿಗೆ ತಿಳಿಸಲಾಯಿತು. ಜಿಲ್ಲಾಧ್ಯಕ್ಷ ಎಂ.ಎಸ್ .ಮಹೇಶ್, ಉಪಾಧ್ಯಕ್ಷ ಸುಬ್ರಹ್ಮಣ್ಯ ಎಚ್.ಎಲ್., ಕಾರ್ಯದರ್ಶಿ ಡಿ.ವಿ. ಗಣೇಶ್, ಕುಶಾಲನಗರ ತಾಲೂಕು ಅಧ್ಯಕ್ಷ ಗುರುಪಾದ ಸ್ವಾಮಿ, ಉಪಾಧ್ಯಕ್ಷ ಶ್ರೀನಿವಾಸ್, ಕಾರ್ಯಾಧ್ಯಕ್ಷ ಕುಶಾಲಪ್ಪ , ಖಜಾಂಚಿ ಶಿವಾನಂದ ಇದ್ದರು.