ಮಡಿಕೇರಿ, ನ. ೨೬: ಟ್ರೇಡ್ಸ್ ಯೋಜನೆಯಡಿ ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳಿಗೆ ಹಲವು ಯೋಜನೆಗಳಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

೨೦೨೫-೨೬ ನೇ ಸಾಲಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಹಾಗೂ ವೇಗಗೊಳಿಸುವ (ಆರ್‌ಎಎಂಪಿ) ಯೊಜನೆಯಡಿ ಕೊಡಗು ಜಿಲ್ಲೆಯಲ್ಲಿ ಉದ್ಯಮ ನೋಂದಣಿ ಪಡೆದಿರುವ ನೋಂದಾಯಿತ ಉದ್ಯಮಿಗಳಿಗೆ ಟ್ರೇಡ್ ರಿಸಿವೇಬಲ್ಸ್ ಡಿಸ್ಕೌಂಟಿAಗ್ ಸಿಸ್ಟಮ್ (ಟಿಆರ್‌ಎಡಿಎಸ್) (ಟ್ರೆಡ್ಸ್ ಎಂದರೆ ವ್ಯಾಪಾರ ಹಣ ರಿಯಾಯಿತಿ ವ್ಯವಸ್ಥೆ) ಆನ್‌ಲೈನ್ ಪ್ಲಾಟ್‌ಫಾರ್ಮ್ಗೆ ಸಂಬAಧಿಸಿದAತೆ ನಗರದ ಹೊಟೇಲ್ ರೆಡ್‌ಬ್ರಿಕ್ಸ್ನಲ್ಲಿ ನಡೆದ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯುವ ಜನರಿಗೆ ಉದ್ಯೋಗ ಒದಗಿಸುವಲ್ಲಿ ಬೃಹತ್ ಮತ್ತು ಸಣ್ಣ ಕೈಗಾರಿಕೆಗಳ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಹಾಗೂ ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪಾತ್ರ ಹೆಚ್ಚಿನದ್ದಾಗಿದೆ ಎಂದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಟ್ರೇಡ್ಸ್ ಅನುಕೂಲವಿದ್ದು, ಟ್ರೇಡ್ ವ್ಯವಸ್ಥೆಯಲ್ಲಿ ನೋಂದಣಿ ಮಾಡಿಕೊಂಡು ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗೆ ಉತ್ತೇಜನ ನೀಡುವಂತಾಗಬೇಕು ಎಂದು ನಾಗೇಂದ್ರ ಪ್ರಸಾದ್ ಅವರು ವಿವರಿಸಿದರು.

ಇದೊಂದು ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ ಲಾಭದಾಯಕವಾಗಿದ್ದು, ಪೂರೈಕೆದಾರರಿಗೂ ಸಹ ಅನುಕೂಲವಿದೆ. ಆ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಅವರು ನುಡಿದರು.

ಟೆಕ್ಸಾಕ್ ಸಂಸ್ಥೆಯ ಸಿಇಒ ಹಾಗೂ ಮುಖ್ಯ ಸಲಹೆಗಾರ ಸಿದ್ದರಾಜು ಮಾತನಾಡಿ, ಟ್ರೇಡ್ಸ್ ರಿಸಿವೇಬಲ್ ಎಲೆಕ್ಟಾçನಿಕ್ಸ್ ಡಿಸ್ಕೌಂಟಿAಗ್ ವ್ಯವಸ್ಥೆಯು ಗ್ರಾಹಕರು ಮತ್ತು ಉದ್ಯಮದಾರರಿಗೆ ಅನುಕೂಲವಿದ್ದು, ಇದರಲ್ಲಿ ನೋಂದಣಿ ಮಾಡಿಕೊಂಡು ವ್ಯಾಪಾರ, ವಹಿವಾಟು ನಡೆಸುವಂತಾಗಬೇಕು ಎಂದು ಹೇಳಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ್ ಮಾತನಾಡಿ, ಬ್ಯಾಂಕ್‌ಗಳ ಮೂಲಕ ಹಲವು ಯೋಜನೆಗಳಿದ್ದು, ಅವುಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದರು.

ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯಧನ ಕಲ್ಪಿಸಲಾಗುತ್ತದೆ. ಸಣ್ಣ ಸಣ್ಣ ವ್ಯಾಪಾರಿಗಳಿಗೆ ಹಲವಾರು ಸೌಲಭ್ಯಗಳಿದ್ದು, ಅವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುವತ್ತ ಗಮನಹರಿಸಬೇಕು ಎಂದು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಕೆ. ಹನುಮಂತರಾಯ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಸೂಕ್ಷ್ಮ, ಸಣ್ಣ ಪ್ರಮಾಣದ ಕೈಗಾರಿಕೆ, ಆರೋಗ್ಯ ಮತ್ತು ಆತಿಥ್ಯ ಸೇವಾ ಘಟಕಗಳಿಗೆ ಹಾಗೂ ನಿರ್ಮಾಣ - ರಿಯಲ್ ಎಸ್ಟೇಟ್ ಚಟುವಟಿಕೆಗಳ ಘಟಕಗಳಿಗೆ ರೂ. ೧೦ ಲಕ್ಷದಿಂದ ೧೦ ಕೋಟಿ ರೂ.ಗಳವರೆಗೆ ಬಡ್ಡಿ ಸಹಾಯಧನ ಸಾಲ ಯೋಜನೆ ಒದಗಿಸಲಾಗುತ್ತದೆ ಎಂದು ಹೇಳಿದರು.

ಮಂಗಳೂರು ಬ್ರಾಂಚ್ ಇನ್ ಚಾರ್ಜ್ ಬಿ.ಆರ್ ಎಂ.ಎಸ್.ಎA.ಇ.ಡಿ ಎಫ್.ಓ ಯಯ್ಯಾಡಿ ಕೈಗಾರಿಕಾ ವಸಾಹತು ವಿಭಾಗದ ಸಹಾಯಕ ನಿರ್ದೇಶಕ ಎಂ.ಸುAದರ ಸೆರಿಗಾರ್ ಮಾತನಾಡಿ, ಸೃಜನಶೀಲವಾಗಿ ವಿಷಯಗಳ ಬಗ್ಗೆ ಆಲೋಚನೆ ಮಾಡಿದರೆ ಸಾರ್ವಜನಿಕರಿಗೆ ನಿಖರವಾಗಿ ಸೌಲಭ್ಯ ಒದಗಿಸಲು ಅನುಕೂಲ ಆಗಲಿದೆ ಎಂದರು.

ಕೆಎಸ್‌ಎಫ್‌ಸಿ ಎಜಿಎಂ ರವಿ ಮಾತನಾಡಿ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಆಕರ್ಷಕ ಬಡ್ಡಿದರದಲ್ಲಿ ಸಾಲ ಯೋಜನೆಗಳು ದೊರೆಯಲಿವೆ. ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕಾ ಚಟುವಟಿಕೆಗಳ ಘಟಕಗಳಿಗೆ ರೂ. ೫ ಲಕ್ಷದಿಂದ ೫ ಕೋಟಿ ರೂ.ಗಳವರೆಗೆ ಶೇ. ೫.೫ ರಷ್ಟು ಬಡ್ಡಿ ಸಹಾಯಧನ ಸಾಲ ಯೋಜನೆ. ಮಹಿಳಾ ಉದ್ಯಮಿಗಳಿಗೆ ಆರೋಗ್ಯ ಹಾಗೂ ಆತಿಥ್ಯ ಸೇವಾ ಚಟುವಟಿಕೆಗಳ ಘಟಕಗಳಿಗೆ ರೂ. ೫ ಲಕ್ಷದಿಂದ ೫ ಕೋಟಿ ರೂ.ಗಳವರೆಗೆ ಶೇ. ೪ ರಷ್ಟು ಬಡ್ಡಿ ಸಹಾಯಧನ ಸಾಲ ಯೋಜನೆ ಎಂದರು.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಸೂಕ್ಷ್ಮ, ಸಣ್ಣ ಪ್ರಮಾಣದ ಕೈಗಾರಿಕಾ, ಆರೋಗ್ಯ ಮತ್ತು ಆತಿಥ್ಯ ಸೇವಾ ಘಟಕಗಳಿಗೆ ಹಾಗೂ ನಿರ್ಮಾಣ/ ರಿಯಲ್ ಎಸ್ಟೇಟ್ ಚಟುವಟಿಕೆಗಳ ಘಟಕಗಳಿಗೆ ರೂ. ೧೦ ಲಕ್ಷದಿಂದ ೧೦ ಕೋಟಿ ರೂ.ಗಳವರೆಗೆ ಶೇ.೪ ರಷ್ಟು ಬಡ್ಡಿ ಸಹಾಯಧನ ಸಾಲ ಯೋಜನೆ.

ಹಿಂದುಳಿದ ವರ್ಗಗಳ ಪ್ರವರ್ಗ-೧ ಮತ್ತು ಪ್ರವರ್ಗ-೨(ಎ) ಜಾತಿಗಳ ಉದ್ಯಮಿಗಳಿಗೆ ಸೂಕ್ಷ್ಮ, ಸಣ್ಣ ಪ್ರಮಾಣದ ಕೈಗಾರಿಕಾ, ಆರೋಗ್ಯ ಹಾಗೂ ಆತಿಥ್ಯ ಸೇವಾ ಚಟುವಟಿಕೆಗಳ ಘಟಕಗಳಿಗೆ ರೂ.೫ ಲಕ್ಷದಿಂದ ೧೦ ಕೋಟಿ ರೂ.ಗಳವರೆಗೆ ಶೇ.೫.೫ ರಷ್ಟು ಬಡ್ಡಿ ಸಹಾಯಧನ ಸಾಲ ಯೋಜನೆ ದೊರೆಯಲಿದೆ ಎಂದು ಅವರು ತಿಳಿಸಿದರು.

ಅಲ್ಪಸಂಖ್ಯಾತ ಸಮುದಾಯಗಳ ಉದ್ಯಮಿಗಳಿಗೆ ಸೂಕ್ಷ್ಮ, ಸಣ್ಣ ಪ್ರಮಾಣದ ಕೈಗಾರಿಕಾ, ಆರೋಗ್ಯ ಹಾಗೂ ಆತಿಥ್ಯ ಸೇವಾ ಚಟುವಟಿಕೆಗಳ ಘಟಕಗಳಿಗೆ ರೂ. ೫ ಲಕ್ಷದಿಂದ ೧೦ ಕೋಟಿ ರೂ.ಗಳವರೆಗೆ ಶೇ. ೫.೫ ರಷ್ಟು ಬಡ್ಡಿ ಸಹಾಯಧನ ಸಾಲ ಯೋಜನೆ ಇದೆ ಎಂದು ಮಾಹಿತಿ ನೀಡಿದರು.

ಲೀಡ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ ಕಾರ್ಯಾಗಾರದಲ್ಲಿ ವಿಶೇಷ ತರಬೇತಿ ನೀಡಿದರು. ಕುಶಾಲನಗರ ತಾಲೂಕು ಒಕ್ಕೂಟ ಆರ್.ಸಿ. ಕೂಡಿಗೆ ನಿರ್ದೇಶಕ ಕೆ. ಪ್ರಕಾಶ್ ಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಸಿ.ಎನ್. ರಘು, ಮಾತನಾಡಿದರು.