ಮಡಿಕೇರಿ, ನ. ೨೪: ಥೈಲ್ಯಾಂಡ್ನ ಬುರಿರಾಮ್ನಲ್ಲಿ ನಡೆದ ಬ್ರಿಕ್ ಸೂಪರ್ ಬೈಕ್ ಚಾಂಪಿಯನ್ ಶಿಪ್ನಲ್ಲಿ ಮೂಲತಃ ಕೊಡಗಿನವರಾದ ತಸ್ಮೆöÊ ಕಾರ್ಯಪ್ಪ ಅವರು ಸಾಧನೆ ಗೈದಿದ್ದಾರೆ. ನವೆಂಬರ್ ೨೦ ರಿಂದ ೨೩ ರವರೆಗೆ ನಡೆದ ಚಾಂಪಿಯನ್ ಶಿಪ್ನ ೪ನೇ ಸುತ್ತಿನಲ್ಲಿ ತಸ್ಮೆöÊ ಅವರು ೩ನೇ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಈ ಚಾಂಪಿಯನ್ನಲ್ಲಿ ಗೆಲುವು ಸಾಧಿಸಿದ ಮೊದಲ ಭಾರತೀಯರಾಗಿದ್ದಾರೆ. ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ಮೊಣ್ಣಂಡ ನಳಿನಿ ಸೋಮಯ್ಯ ಅವರ ಪುತ್ರ.