ಕುಶಾಲನಗರ, ನ. ೨೪: ಕುಶಾಲನಗರ ಎಚ್‌ಆರ್‌ಬಿ ಕಾಲೋನಿ ಶ್ರೀ ಉದ್ಭವ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಅಂಗವಾಗಿ ತಾ.೨೫ರಂದು (ಇಂದು) ಬೆಳಿಗ್ಗೆ ೭ ಗಂಟೆಯಿAದ ಪೂಜಾ ಕಾರ್ಯಕ್ರಮ ಆರಂಭಗೊಳ್ಳಲಿವೆ..
ಬೆಳಿಗ್ಗೆ ಗಣ ಹೋಮ ನಂತರ ಕಳಶಾಭಿಷೇಕ ಸಂಜೆ ೬ ಗಂಟೆಗೆ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. ಬೆಳಿಗ್ಗೆ ೯:೩೦ಕ್ಕೆ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲಗಳೊAದಿಗೆ ಆಗಮಿಸಿ ಸಾಮೂಹಿಕ ಪೂಜೆ ಸಲ್ಲಿಸಲಿದ್ದಾರೆ.
ಬುಧವಾರ ಬೆಳಿಗ್ಗೆ ೫ ಗಂಟೆಯಿAದ ಸ್ವಾಮಿಗೆ ಅಭಿಷೇಕ ಷಷ್ಠಿ ಪೂಜೆ ನಡೆಯಲಿದೆ. ೧೨:೩೦ಕ್ಕೆ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರುಗಲಿದೆ.