ಗೋಣಿಕೊಪ್ಪಲು. ನ.೨೩: ಬೊಟ್ಯತ್‌ನಾಡ್ ಹಾಕಿ ಕ್ಲಬ್ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಆಯೋಜಿಸಿದ್ದ ೩ ದಿನಗಳ ಹಾಕಿ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಬೊಟ್ಯತ್‌ನಾಡ್ ಕುಂದ ತಂಡವು ಕೋಣನಕಟ್ಟೆ ಇಲೆವನ್ ತಂಡವನ್ನು ಸಡನ್‌ಡೆತ್‌ನಲ್ಲಿ ಸೋಲಿಸುವ ಮೂಲಕ ಈ ಬಾರಿಯ ಚಾಂಪಿಯನ್ ಆಗಿ ಹೊರಹೊಮ್ಮಿತು.

ಪಂದ್ಯದ ಆರಂಭದಿAದಲೂ ೨ ಬಲಿಷ್ಠ ತಂಡಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದವು. ನಿಗದಿತ ಸಮಯದಲ್ಲಿ ಗೋಲಾಗದೇ ಇದ್ದ ಪರಿಣಾಮ ತೀರ್ಪುಗಾರರು ಪೆನಾಲ್ಟಿ ಸ್ಟೊçÃಕ್ ಅವಕಾಶ ನೀಡಿದರು. ಇದರಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ನಿಯಮಾನುಸಾರ ಸಡನ್‌ಡೆತ್‌ನಲ್ಲಿ ಬೊಟ್ಯತ್‌ನಾಡ್ ತಂಡ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಪೊನ್ನಂಪೇಟೆ ಟರ್ಪ್ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪಂದ್ಯಾವಳಿಯಲ್ಲಿ ಪ್ರತಿಷ್ಠಿತ ೮ ತಂಡಗಳು ಭಾಗವಹಿಸಿದ್ದವು. ಪ್ರತಿ ತಂಡದಲ್ಲಿ ೩ ಅತಿಥಿ ಆಟಗಾರರು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು. ವಿಜೇತ ತಂಡಕ್ಕೆ ರೂ ೫೫,೫೫೫ ಹಾಗೂ ರನ್ನರ್ ಅಪ್ ತಂಡಕ್ಕೆ ರೂ. ೪೪,೪೪೪ ನಗದು ಹಾಗೂ ಪಾರಿತೋಷಕ ನೀಡಲಾಯಿತು.

ಮ್ಯಾನ್ ಆಫ್ ದ ಸೀರಿಸ್ ಪ್ರಶಸ್ತಿಯಾದ ಆನ್ ಟ್ರಿಯೊ ಸೈಕಲ್ ಅನ್ನು ಬೊಟ್ಯತ್‌ನಾಡ್ ತಂಡದ ಆಟಗಾರ ಆರ್ಯನ್ ಮುತ್ತಣ್ಣ ಪಡೆದುಕೊಂಡರು. ಸೆಮಿಫೈನಲ್ಸ್ನಲ್ಲಿ ಸೋಲು ಕಂಡ ಚಾರ್ಮಸ್ ಮಡಿಕೇರಿ ಹಾಗೂ ಮಹಾದೇವ ಸ್ಪೋರ್ಟ್ಸ್ ಕ್ಲಬ್ ಬಲಂಬೇರಿಯ ೨ ತಂಡಗಳಿಗೆ ಪಾರಿತೋಷಕ ನೀಡಲಾಯಿತು.

ಬೊಟ್ಯತ್‌ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಗುಮ್ಮಟೀರ ಕಿಲನ್ ಗಣಪತಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಡೆಪAಡ ಸುಜಾ ಕುಶಾಲಪ್ಪ, ಭಾರತ ಕ್ರಿಕೆಟ್ ತಂಡ ಮಾಜಿ ಆಟಗಾರ ಜಾವಗಲ್ ಶ್ರೀನಾಥ್, ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗಡ ಲವಕುಮಾರ್, ಉಪಾಧ್ಯಕ್ಷೆ ಯಮುನಾ ಚಂಗಪ್ಪ, ಒಲಿಂಪಿಯನ್ ಸಿ.ಎಸ್.ಪೂಣಚ್ಚ, ಅಂತರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ರಾಷ್ಟಿçÃಯ ಹಾಕಿ ಆಟಗಾರ ಮೇಕೆರಿರ ನಿತಿನ್ ತಿಮ್ಮಯ್ಯ, ದಾನಿಗಳಾದ ಪಟ್ರಂಗಡ ಶೋಭ ರಂಜನ್, ಗಣ್ಯರಾದ ಎ.ಎಸ್. ಸುರೇಶ್, ಕೂಕಂಡ ಮಂಗಳ ಉತ್ತಪ್ಪ ಸೇರಿದಂತೆ ಅತಿಥಿ ಗಣ್ಯರು ಪಾಲ್ಗೊಂಡಿದ್ದರು.

ಎAಎಲ್‌ಸಿ ಸುಜಾ ಕುಶಾಲಪ್ಪ ಮಾತನಾಡಿ, ಕೊಡಗಿನಲ್ಲಿ ಹಾಕಿ ಕ್ರೀಡೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇದರ ಪ್ರಯೋಜನ ಯುವಕ, ಯುವತಿಯರು ಪಡೆಯುವ ಮೂಲಕ ಭಾರತ ತಂಡವನ್ನು ಪ್ರತಿನಿಧಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ವೀಕ್ಷಕ ವಿವರಣೆಯನ್ನು ಚೆಪ್ಪುಡೀರ ಕಾರ್ಯಪ್ಪ ಹಾಗೂ ಅಜ್ಜೆಟ್ಟಿರ ವಿಕ್ರಂ ಉತ್ತಪ್ಪ ನೀಡಿದರು. ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ ಮೂರನೆಯ ತೀರ್ಪುಗಾರಿಕೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ)

ಒಡಿಕತ್ತಿ ನೀಡಿ ಗೌರವ ಸನ್ಮಾನ

ಅಂತಿಮ ಪಂದ್ಯಾವಳಿಗೆ ಆಗಮಿಸಿದ್ದ ಖ್ಯಾತ ಕ್ರಿಕೆಟ್ ಬೌಲರ್ ಜಾವಗಲ್ ಶ್ರೀನಾಥ್ ರವರಿಗೆ ಕೊಡಗಿನ ಸಾಂಪ್ರದಾಯಿಕ ಒಡಿಕತ್ತಿ ನೀಡಿ ಹಾಕಿ ಆಯೋಜಕರು ಗೌರವಿಸಿದರು.

ಈ ವೇಳೆ ಬೊಟ್ಯತ್ ನಾಡು ಹಾಕಿ ತಂಡದ ಸ್ಥಾಪಕರಾದ ಮದ್ರಿರ ಗಣಪತಿ, ಅಂತರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಹಾಗೂ ಅಂತರಾಷ್ಟಿçÃಯ ಹಾಕಿ ಆಟಗಾರ ಮೇಕೆರಿರ ನಿತಿನ್ ತಿಮ್ಮಯ್ಯ ಅವರನ್ನು ಪಂದ್ಯಾವಳಿಯ ಆಯೋಜಕರು ಹಾಗೂ ಅತಿಥಿ ಗಣ್ಯರು ಸನ್ಮಾನಿಸಿ, ಗೌರವಿಸಿದರು.

ಪುಸ್ತಕ ಉಡುಗೊರೆ

ಜಾವಗಲ್ ಶ್ರೀನಾಥ್ ಅವರಿಗೆ ಹಾಕಿ ವೀಕ್ಷಕ ವಿವರಣೆಗಾರ ಚೆಪ್ಪುಡೀರ ಕಾರ್ಯಪ್ಪ ಅವರು ಬರೆದ ‘ಕೊಡಗಿನ ಕ್ರೀಡಾಪಟುಗಳು’ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

ಅಂತಿಮ ಪಂದ್ಯ ಉದ್ಘಾಟನೆ

ಜಾವಗಲ್ ಶ್ರೀನಾಥ್ ಅವರು ಮೈದಾನಕ್ಕೆ ತೆರಳಿ ಐಸಿಸಿ ಬಳಸುವ ನಾಣ್ಯವನ್ನು ಚಿಮ್ಮಿಸುವ ಮೂಲಕ ಅಂತಿಮ ಪಂದ್ಯವನ್ನು ಉದ್ಘಾಟಿಸಿದರು. ಭಾರತ ತಂಡದ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಕೆಎಸ್‌ಸಿಎ ಅಧ್ಯಕ್ಷರಾಗಿ ಆಯ್ಕೆಯಾದಲ್ಲಿ ಕೊಡಗಿನಲ್ಲಿ ಉತ್ತಮ ಗುಣಮಟ್ಟದ ಆಧುನಿಕ ಶೈಲಿಯ ಕ್ರಿಕೆಟ್ ಮೈದಾನ ನಿರ್ಮಿಸುವುದಾಗಿ ಜಾವಗಲ್ ಶ್ರೀನಾಥ್ ಭರವಸೆ ನೀಡಿದರು.

-ಹೆಚ್.ಕೆ. ಜಗದೀಶ್