ಚೆಯ್ಯಂಡಾಣೆ, ನ. ೨೪: ನಾಪೋಕ್ಲುವಿನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಮಡಿಕೇರಿ ಝೋನ್ ಸಮಿತಿ ವತಿಯಿಂದ ಸುನ್ನಿ ಆದರ್ಶ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ನಾಪೋಕ್ಲು ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಮಡಿಕೇರಿ ಝೋನ್ ಸಮಿತಿಯ ಅಧ್ಯಕ್ಷ ಅಬ್ದುಲ್ಲ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಕೂರ್ಗ್ ಜಂಇಯ್ಯತುಲ್ ಉಲಮಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉದ್ಘಾಟಿಸಿ ಮಾತನಾಡಿದರು. ೪ಐದನೇ ಪುಟಕ್ಕೆ (ಮೊದಲ ಪುಟದಿಂದ) ನಾಪೋಕ್ಲು ಟೌನ್ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಎಚ್.ಅಬ್ದುಲ್ ರಹ್ಮನ್, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಸುಂಟಿಕೊಪ್ಪ ಸಮ್ಮೇಳನಕ್ಕೆ ಶುಭ ಹಾರೈಸಿ ಮಾತನಾಡಿದರು.

ಕೇರಳದ ಪ್ರಖ್ಯಾತ ಸುನ್ನಿ ವಾಗ್ಮಿ ಅಲವಿ ಸಖಾಫಿ ಕೊಳತ್ತೂರ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿ ಸುನ್ನತ್ ಜಮಾಅತ್‌ನ ತತ್ವ ಅಶಯಗಳನ್ನು ವಿವರಿಸಿ ಸುನ್ನಿ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕೆಂದರು. ನೂತನ ವಾದಿಗಳ ಸುಳ್ಳು ಭರವಸೆಗಳಿಗೆ ಮಾರುಹೋಗದಿರಿ ಎಂದು ಎಚ್ಚರಿಕೆ ನೀಡಿದರು. ಸಯ್ಯಿದ್ ಅನ್ವರ್ ಸಾದಾತ್ ತಂಙಳ್ ಸುನ್ನಿ ಆದರ್ಶಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಎಸ್ ವೈಎಸ್ ರಾಜ್ಯಾಧ್ಯಕ್ಷ ಬಷೀರ್ ಸಅದಿ, ಕೂರ್ಗ್ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ,ಕೆಎಂಜೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ, ಕೋಶಾಧಿಕಾರಿ ಖಾಲಿದ್ ಫೈಝಿ,ಎಸ್ ವೈಎಸ್ ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ, ಎಸ್ ಜೆಎಂ ಜಿಲ್ಲಾಧ್ಯಕ್ಷ ಅಬ್ದುಲ್ಲ ಸಖಾಫಿ, ನಾಪೋಕ್ಲು ಮಸೀದಿಯ ಖತೀಬ್ ಸೌಕತ್ ಆಲಿ ಸಖಾಫಿ, ಕುಂಜಿಲ ಮುದರಿಸ್ ನಿಝಾರ್ ಅಹ್ಸನಿ,ಕೊಳಕೇರಿ ಖತೀಬ್ ಅಶ್ರಫ್ ಅಹ್ಸನಿ,ಕೊಟ್ಟಮುಡಿ ಜಮಾಅತ್ ಅಧ್ಯಕ್ಷ ಹಂಝ, ಇಸ್ಮಾಯಿಲ್ ಸಖಾಫಿ, ಎಸ್ ವೈಎಸ್ ಜಿಲ್ಲಾಧ್ಯಕ್ಷ ಮುನೀರ್ ಮಲ್ಹರಿ, ಅಬ್ದುಲ್ ಖಾದರ್ ತಂಙಳ್, ಖಾತೀಂ ತಂಙಳ್,ಅಬೂಬಕ್ಕರ್ ಹಾಜಿ, ಇಸ್ಮಾಯಿಲ್ ಅಯ್ಯಂಗೇರಿ, ಅದ್ದು ಹಾಜಿ, ಅಬ್ದುಲ್ ಕರೀಂ ಹಾಜಿ, ಉಸ್ಮಾನ್, ಮೊಹಮ್ಮದ್ ಸಖಾಫಿ, ವಕೀಲ ರಿಯಾಜ್, ಉಮ್ಮರ್ ಸಖಾಫಿ ಎಡಪಾಲ, ಆರಾಫತ್, ಅಬ್ದುಲ್ ರಹ್ಮನ್ ಹಾಜಿ, ಕರ್ನಾಟಕ ಮುಸ್ಲಿಂ ಜಮಾಅತ್ ನಾಪೋಕ್ಲು ವಲಯಾಧ್ಯಕ್ಷ ಅಬ್ದುಲ್ ಅಜೀಜ್ ಹಾಜಿ, ಕೆಎಂಜೆ ಝೋನ್ ಸರ್ಕಲ್ ಯೂನಿಟ್ ಸಮಿತಿಯ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ಸಯ್ಯಿದ್ ಶಿಯಾಬುದ್ದೀನ್ ಅಲ್ ಹೈದರೂಸಿ ಕಿಲ್ಲೂರ್ ತಂಙಳ್ ಪ್ರಾರ್ಥಿಸಿ, ಹಸೈನಾರ್ ಸಖಾಫಿ ಸ್ವಾಗತಿಸಿ, ಪಿಎಸ್ ಮುಸ್ಲಿಯಾರ್ ವಂದಿಸಿದರು.