ಸೋಮವಾರಪೇಟೆ : ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಸೋಮವಾರಪೇಟೆ ಕ್ಷೇತ್ರ ಸಂಪನ್ಮೂಲ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಿ.ಎಂ.ಶ್ರೀ. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸೋಮವಾರಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್. ಜೆ.ಎಂ. ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಾಥಮಿಕ ವಿಭಾಗದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗದಿಂದ ಎಚ್.ಎಸ್. ನಿಹಾಲ್-ದೇಶಭಕ್ತಿ ಗೀತೆ (ಪ್ರ), ಡಿ. ಕೃತಿಕಾ- ಅಭಿನಯ ಗೀತೆ (ಪ್ರ), ವಿಂದ್ಯಾ ಶ್ರೀ ರಾಮ್-ಇಂಗ್ಲೀಷ್ ಕಂಠಪಾಠ (ಪ್ರ), ಎಚ್.ಆರ್. ಚಂದನ್-ಛದ್ಮ ವೇಷ (ಪ್ರ), ಎಸ್.ಎಂ. ಪ್ರಣಮ್-ಚಿತ್ರಕಲೆ (ದ್ವಿ), ಆರ್. ದರ್ಶನ್- ಕನ್ನಡ ಕಂಠಪಾಠ (ದ್ವಿ), ಆಶಿನಿ- ಭಕ್ತಿಗೀತೆ (ದ್ವಿ), ಮಹಮದ್ ಸುಹೈಲ್- ಕಥೆ ಹೇಳುವುದು (ತೃ) ಸ್ಥಾನ ಗಳಿಸಿದರು.
ಹಿರಿಯ ಪ್ರಾಥಮಿಕ ವಿಭಾಗದಿಂದ ಎಚ್.ಎಸ್. ಅಹಲ್ಯ-ಇಂಗ್ಲೀಷ್ ಕಂಠ ಪಾಠ (ಪ್ರ), ಎಚ್.ಎಂ. ಹೇಮಾವತಿ-ಪ್ರಬಂಧ (ಪ್ರ), ಬಿ.ಬಿ. ಹಾಜಿರಾ-ಕನ್ನಡ ಕಂಠಪಾಠ (ಪ್ರ) ಎಚ್.ಆರ್. ಮೋಕ್ಷಿತ-ಭಕ್ತಿ ಗೀತೆ (ಪ್ರ), ಎಸ್.ಎಂ. ಪ್ರಣವಿ-ಕಥೆ ಹೇಳುವುದು (ಪ್ರ), ಕೆ.ಎಲ್. ಭಾರತಿ-ಅಭಿನಯ ಗೀತೆ (ಪ್ರ) ಹಾಗೂ ಆರ್. ಅರ್ಜುನ್-ಮಿಮಿಕ್ರಿಯಲ್ಲಿ (ತೃ) ಸ್ಥಾನ ಗಳಿಸಿದರು.
ವೀರಾಜಪೇಟೆ: ವಿವಿಧತೆಯಲ್ಲಿ ಏಕತೆ ಕಂಡ ಜಾನಪದ ಸೊಗಡು ಕಂಡ ಭಾಷೆ ಕನ್ನಡ. ಇತರ ಭಾಷೆಗಳನ್ನು ಗೌರವಿಸಿ ತಾಯಿ ಕನ್ನಡ ಭಾಷೆಯನ್ನು ಧೀಮಂತಗೊಳಿಸುವ ಪ್ರಯತ್ನ ನಿರಂತರವಾಗಿ ಸಾಗಬೇಕು ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಸೆಂಟ್ ಆನ್ಸ್ ಪದವಿ ಕಾಲೇಜು ಕನ್ನಡ ಭಾಷಾ ವಿಭಾಗ, ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು, ವೀರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನುಡಿ ನಡೆ ಯುವ ಜನರ ಕಡೆ ಶೀರ್ಷಿಕೆ ಅಡಿಯಲ್ಲಿ ನುಡಿ ಉತ್ಸವ ಅಂತರ್ ತರಗತಿ ಕನ್ನಡ ಗಾಯನ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಲಪತಿಗಳು ಧೀಮಂತ ಸಂಸ್ಕöÈತಿ ಹೊಂದಿರುವ ಕನ್ನಡ ಭಾಷೆಯನ್ನು ಮನೆಯಿಂದ, ವಿದ್ಯಾಲಯದಿಂದ ಕಲಿಸುವಂತಾಗಬೇಕು. ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಪಡೆದ ಹಲವು ವಿದ್ವಾಂಸರು ಧೀಮಂತ ಸಾಹಿತ್ಯ ರಚನೆ ಮಾಡಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಕನ್ನಡವಾಗಿದೆ. ಕನ್ನಡ ಭಾಷೆಯ ಮೇಲೆ ಹಲವು ಭಾಷೆಗಳ ಪ್ರಭಾವದಿಂದಾಗಿ ವಾಕ್ಯ ಬಳಕೆ ಮಾಡುವ ಸಂಧರ್ಭ ಒಂದು ಕನ್ನಡ ಪದವಾದರೇ ಇತರ ಭಾಷೆಗಳ ಬಳಕೆ ಅಧಿಕವಾಗಿ ಬಳಕೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು. ಸೆಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರು ಮತ್ತು ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರ್ಜುನ್ ಮೌರ್ಯ ಮಾತನಾಡಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಆಡಳಿತ, ಕಲಿಕೆ ಹಾಗೂ ಪ್ರಚಲಿತ ವಿದ್ಯಮಾನಗಳಲ್ಲಿ ಕನ್ನಡ ಭಾಷೆ ಯನ್ನು ಬಲಿಷ್ಟಗೊಳಿಸಲು ಕಾಲೇಜು ಯುವ ಸಮುದಾಯದಲ್ಲಿ ವಿಶೇಷ ಪ್ರಯತ್ನ ಅಂಗವಾಗಿ ನುಡಿ ಗೀತಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಪಿ. ರಾಜೇಶ್ ಪದ್ಮನಾಭ, ನುಡಿ ಉತ್ಸವ ಸಮಿತಿ ಸಂಚಾಲಕ ಅಬ್ದುಲ್ ರೆಹಮಾನ್, ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಯೋಜಕರಾದ ಹೇಮ ಬಿ.ಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಪದವಿ ಕಾಲೇಜಿನ ಎಲ್ಲಾ ವಿಭಾಗಗಳ ತಂಡ ಮತ್ತು ಎಂ.ಕಾA. ಸ್ನಾತಕೋತ್ತರ ಪದವಿ ವಿಭಾಗದ ೧೦ ತಂಡಗಳ ವಿಧ್ಯಾರ್ಥಿಗಳು ನುಡಿ ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೊಡಗಿನ ಜಾನಪದ ಕಲೆಗಳಾದ ಪರೆಯಕಳಿ ಮತ್ತು ಉಮ್ಮತ್ತಾಟ್ ಪ್ರದರ್ಶನ ವಿಧ್ಯಾರ್ಥಿಗಳಿಂದ ಮೂಡಿಬಂದಿತು. ಚಿತ್ರಕಲಾ ಶಿಕ್ಷಕರಾದ ಬಸವರಾಜ ಬಡಿಗೇರ್ ಮತ್ತು ಶಾಸ್ತಿçÃಯ ಸಂಗೀತ ಕಲಾವಿದರಾದ ಚಂದ್ರಶೇಖರ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ಅವರು ಕನ್ನಡ ಭಾಷೆ ಧೀಮಂತವಾಗಿ ಬೆಳೆಯಬೇಕಾದರೆ ಕನ್ನಡ ಭಾಷೆಯ ಮೇಲೆ ಇತರ ಭಾಷೆಗಳ ಪ್ರಭಾವ ಕಡಿಮೆಯಾಗಬೇಕು. ದೇಶ ವಿದೇಶಗಳಲ್ಲಿ ನಾವು ನೆಲೆ ಕಂಡರು ತಾಯಿ ಭಾಷೆಯನ್ನು ಮರೆತು ಜೀವಿಸಬಾರದು. ನಾಡು ನುಡಿ ಮತ್ತು ಸಂಸ್ಕöÈತಿಗಳ ಬಗ್ಗೆ ಅಭಿಮಾನ ಪ್ರೀತಿ ತೋರಿದಲ್ಲಿ ಮಾತ್ರ ಕನ್ನಡ ಭಾಷಾಭಿಮಾನ ಉತ್ತುಂಗಕ್ಕೇರುತ್ತದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಉತ್ತಮವಾಗಿ ಮೂಡಿಬಂದಿದೆ ಎಂದರು. ಸೆಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ವಿದ್ಯಾರ್ಥಿ ಬಳಗ, ನುಡಿ ಉತ್ಸವ ಸಮಿತಿಯ ಸದಸ್ಯರು, ಪದವಿ ಕಾಲೇಜಿನ ಉಪನ್ಯಾಸಕರುಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.ವೀರಾಜಪೇಟೆ : ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯು ವಿದ್ಯಾಸಂಸ್ಥೆಯೊAದರ ಬೆಳವಣಿಗೆಗೆ ಪೂರಕವಾಗಿದೆ ಎಂದು ವೀರಾಜಪೇಟೆಯ ಸರ್ಕಾರಿ ಪಿ.ಯು. ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಚಿಲ್ಲವಂಡ ಕಾವೇರಪ್ಪ ಅವರು ಅಭಿಪ್ರಾಯಪಟ್ಟರು. ಅವರು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪೋಷಕರ ಸಭೆ ೨೦೨೫-೨೬ರ ಅಧ್ಯಕ್ಷತೆಯನ್ನು ವಹಿಸಿ ಕೊಂಡು ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಸಾಧನೆಯನ್ನು ಮಾಡಬೇಕು. ಶಿಸ್ತನ್ನು ಮೈಗೂಡಿಸಿಕೊಳ್ಳುವುದರ ಮೂಲಕ ವಿದ್ಯಾಸಂಸ್ಥೆಗೂ ಪೋಷಕರಿಗೂ ಕೀರ್ತಿಯನ್ನು ತರಬೇಕು. ಶೈಕ್ಷಣಿಕ ಪ್ರಗತಿಯಿಂದ ಸಂಸ್ಥೆಯ ಬೆಳವಣಿಗೆ ಆಗಲು ಸಾಧ್ಯ ಎಂದರು. ಪೋಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಗಮನಿಸುತ್ತಿರಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್‌ಅವರು ಮಾತನಾಡಿ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದರು. ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರುಗಳನ್ನು ಅಭಿನಂದಿಸಿದ ಅವರು, ನೂತನ ಪ್ರಶ್ನೆ ಪತ್ರಿಕೆ ನೀಲಿ ನಕಾಶೆ ಹಾಗೂ ಪ್ರಾಯೋಗಿಕ ಪರೀಕ್ಷಾ ವಿಧಾನಗಳ ಬಗ್ಗೆ ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಸುಮಯ ಅವರು ಸಭೆಯಲ್ಲಿ ವಿದ್ಯಾರ್ಥಿ ವೇತನ ಹಾಗೂ ಇ ಬಯೋ ಮೆಟ್ರಿಕ್ ವ್ಯವಸ್ಥೆ ಮಾಡಿಸುವ ವಿಧಾನದ ಬಗ್ಗೆ ತಿಳಿಸಿದರು. ಈ ಸಂದರ್ಭ ಪೋಷಕರು ಹಾಗೂ ಉಪನ್ಯಾಸಕರ ನಡುವೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಕುರಿತು ಸಂವಾದ ನಡೆಯಿತು. ಉಪನ್ಯಾಸಕ ರೈಮಂಡ್ ಸ್ವಾಗತಿಸಿ, ಉಪನ್ಯಾಸಕಿ ಸುಮಲತಾ ರವರು ನಿರೂಪಿಸಿ, ಉಪನ್ಯಾಸಕಿ ದಮಯಂತಿ ವಂದಿಸಿದರು. ಉಪನ್ಯಾಸಕರಾದ ಕಾಂತಿ, ಪವಿತ್ರ ಕುಮಾರಿ, ತಿಮ್ಮಯ್ಯ, ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಪೊನ್ನಂಪೇಟೆ : ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ, ಗೋಣಿಕೊಪ್ಪಲು ಕಾವೇರಿ ಕಾಲೇಜು ಎನ್.ಎಸ್.ಎಸ್. ಘಟಕದ ವತಿಯಿಂದ ಆಯೋಜಿಸಲಾಗಿರುವ ವಿಶೇಷ ವಾರ್ಷಿಕ ಶಿಬಿರವನ್ನು ಕೊಡಗು ವಿಶ್ವವಿದ್ಯಾಲಯದ ಎಸ್ ನೋಡಲ್ ಅಧಿಕಾರಿ ಡಾ. ದಯಾನಂದ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿ ಗಳಿಗೆ ಸರಳತೆಯ ಪಾಠ, ಶಿಸ್ತು, ನಾಯಕತ್ವದ ಗುಣ, ಜೀವನಕ್ಕೆ ಬೇಕಾದ ಆದರ್ಶಗಳನ್ನು ಎನ್ ಎಸ್ ಎಸ್ ಕಳಿಸಿ ಕೊಡುವುದರ ಜೊತೆಗೆ, ನಾವೆಲ್ಲರೂ ಭಾರತೀಯರು ಎಂಬ ಏಕತಾ ಭಾವನೆಯನ್ನು ಮೂಡಿಸುತ್ತದೆ ಎಂದರು.
ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ. ಬಿ ಕಾವೇರಿಯಪ್ಪ ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಿಗೆ ಎನ್ ಎಸ್ ಎಸ್ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತ ಉತ್ತಮ ಗುಣಗಳನ್ನು ಬದುಕಿನಲ್ಲಿ ಅಳವಡಿಸಿ ಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದರು.
ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಕುಪ್ಪಣಮಾಡ ಕೆ.ಕಾವೇರಮ್ಮ ಮಾತನಾಡಿ ಜೀವನದಲ್ಲಿ ಸೋಲು ಗೆಲುವು ಅನಿವಾರ್ಯವಾಗಿದ್ದು, ಕೆಟ್ಟ ವಿಚಾರಗಳ ಕಡೆಗೆ ಮನಸ್ಸು ಹರಿಬಿಡದೆ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಎಜುಕೇಶನ್ ಸೊಸೈಟಿ ನಿರ್ದೇಶಕ ಕೊಂಗAಡ ಪಿ. ಅಚ್ಚಯ್ಯ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಸಾಧಿಸಬೇಕಾದರೆ ಕೇವಲ ಪದವಿಗಳನ್ನು ಪಡೆದುಕೊಂಡರೆ ಸಾಧ್ಯವಾಗುವುದಿಲ್ಲ, ಶಿಕ್ಷಣದ ಜೊತೆಗೆ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಬೇಕು. ವನ ಮಹೋತ್ಸವದ ದಿನ ಕೇವಲ ಗಿಡ ನೆಟ್ಟರೆ ಸಾಲದು ಅದನ್ನು ನೀರೆದು ಪೋಷಿಸಿ ಬೆಳೆಸಬೇಕು.ರಸ್ತೆ ಬದಿ ಬಿದ್ದಿರುವ ಕಸಗಳನ್ನು ಹೆಕ್ಕಿದ ಮಾತ್ರಕ್ಕೆ ಪರಿಸರ ಸ್ವಚ್ಛವಾಗುವುದಿಲ್ಲ, ಅದರ ಬದಲು ಸಾರ್ವಜನಿಕರಿಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಇಟ್ಟು ಕೊಳ್ಳುವಂತೆ ಅರಿವು ಮೂಡಿಸಬೇಕು ಎಂದರು. ಹುದಿಕೇರಿ ಸ.ಮಾ.ಪ್ರಾ. ಶಾಲೆ ಮುಖ್ಯ ಶಿಕ್ಷಕಿ ಜಯಮ್ಮ. ಹೆಚ್. ಎಂ, ಹುದಿಕೇರಿ ವಿ. ಎಸ್. ಎಸ್. ಎನ್ ಬ್ಯಾಂಕ್ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರವೀಣ, ಎನ್.ಎಸ್.ಎಸ್. ಅಧಿಕಾರಿಗಳಾದ ಮಂಡAಗಡ ಎ.ಕುಶಾಲಪ್ಪ, ಪುತ್ತಾಮನೆ ಪೂಜಾ ಶರಣು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ವೀರಾಜಪೇಟೆ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪೋಷಕರು ಉಪನ್ಯಾಸಕರ ಜೊತೆಗೆ ಸಂಪರ್ಕವನ್ನು ಇಟ್ಟು ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯ ಕುರಿತು ಗಮನಹರಿಸುತ್ತಿರಬೇಕೆಂದು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೋರನ ಸರಸ್ವತಿ ಅಭಿಪ್ರಾಯಪಟ್ಟರು.
ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪೋಷಕ ಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸ್ತುತ ಕಾಲೇಜಿನಲ್ಲಿ ೩೮೫ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಬಿ.ಎ, ಬಿಕಾಂ ಹಾಗೂ ಬಿಬಿಎ ಕೋರ್ಸ್ಗಳು ಲಭ್ಯವಿದೆ. ನುರಿತ ಪ್ರಾಧ್ಯಾಪಕ ವರ್ಗದಿಂದ ಉತ್ತಮ ಬೋಧನೆಯನ್ನು ನೀಡಲಾಗುತ್ತಿದೆ. ಎಂದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಂಸ್ಥೆ, ಭೋದಕರು ಹಾಗೂ ಪೋಷಕರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಪೋಷಕರು ಆಗಿಂದಾಗೆ ಕಾಲೇಜಿನೊಂದಿಗೆ ಸಂಪರ್ಕವನ್ನು ಇಟ್ಟುಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಘಟಕದ ಸಂಚಾಲಕರಾದ ಡಾ. ದಯಾನಂದ ಕೆ.ಸಿ. ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾಲೇಜಿನ ಪೋಷಕ ಶಿಕ್ಷಕರ ಸಂಘದ ಸಮಿತಿ ಸಂಚಾಲಕರಾದ ದಮಯಂತಿ, ಐಕ್ಯುಎಸಿ ಸಂಚಾಲಕರಾದ ಪ್ರೊ. ಬಸವರಾಜು ಕೆ. ಪೋಷಕ ಸದಸ್ಯರಾದ ಜೋಸೆಫ್, ಉಪನ್ಯಾಸಕರು, ಪೋಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳಿಂದ ಏಡ್ಸ್ ಜಾಗೃತಿ ಕುರಿತು ಕಿರು ಪ್ರಹಸನ ಕಾರ್ಯಕ್ರಮ ನಡೆಯಿತು. ಮಡಿಕೇರಿ : ವೀರಾಜಪೇಟೆಯ ಲಿಟಲ್ ಸ್ಕಾಲರ್ ಅಕಾಡೆಮಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ತಾ. ೧೩ ರಂದು ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ‘ಕರ್ನಾಟಕದ ಅರಣ್ಯ ಅಥವಾ ವನ್ಯಜೀವಿ' ಎಂಬ ವಿಷಯದ ಕುರಿತು ಏರ್ಪಡಿಸಿದ ಈ ಸ್ಪರ್ಧೆಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿ ಗಳು ಭಾಗವಹಿಸಿದರು. ಇದರಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಹನಿಯ ಎ. ಮೊದಲನೇ ಸ್ಥಾನ ಹಾಗೂ ಆರ್ನವ್ ವಿ. ಎರಡನೆಯ ಸ್ಥಾನವನ್ನು ಪಡೆದಿರುತ್ತಾರೆ. ಪ್ರಾಥಮಿಕ ಶಾಲೆಯ ವಿಭಾಗ ದಲ್ಲಿ ಚೋಳಂಡ ಜಿಯಾ ಅಕ್ಕಮ್ಮ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಮಡಿಕೇರಿ : ಎ.ಎಲ್.ಜಿ ಕ್ರೆಸೆಂಟ್ ಶಾಲೆಯಲ್ಲಿ "ಙouಟಿg ಒiಟಿಜ's ಈooಜ ಈesಣ – ೨೦೨೫" ಉತ್ಸವವು ವಿಜೃಂಭಣೆಯಿAದ ಜರುಗಿತು. ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಬಸವರಾಜು ಉದ್ಘಾಟಿಸಿದರು. ಅವರು ಮಾತನಾಡಿ ವಿದ್ಯಾರ್ಥಿಗಳ ಉತ್ಸಾಹ, ವಿವಿಧ ಹೋಟೆಲ್‌ಗಳ ಪರಿಕಲ್ಪನೆ, ವಿದ್ಯಾರ್ಥಿಗಳು ತಯಾರಿಸಿದ ರುಚಿಕರ ಖಾದ್ಯಗಳು ಹಾಗೂ ಪೋಷಕರು ಮತ್ತು ಶಿಕ್ಷಕರ ಶ್ರಮ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಮುಖರಾದ ಸೌಮ್ಯ ಪೊನ್ನಪ್ಪ, ಕ್ರೆಸೆಂಟ್ ಶಾಲೆಯ ಈooಜ ಈesಣ ಮಕ್ಕಳ ಸೃಜನಶೀಲತೆ, ರುಚಿ ಅರಿವು ಮತ್ತು ತಂಡಭಾವವನ್ನು ಒಟ್ಟಾಗಿ ಪ್ರದರ್ಶಿಸಿದ ಉತ್ಸವವಾಗಿದೆ. ವಿದ್ಯಾರ್ಥಿಗಳ ಆತಿಥ್ಯ ಸತ್ಕಾರ ಎಲ್ಲರ ಮನ ಗೆದ್ದಿದೆ ಎಂದರು.
ಶಾಲೆಯ ಪ್ರಾಂಶುಪಾಲರಾದ ಜೋಯಿಸಿ ವಿನಯ ಅವರು ಮಾತನಾಡುತ್ತ, 'ಪೋಷಕರ ಸಹಕಾರ ಮತ್ತು ಮಕ್ಕಳ ಉತ್ಸಾಹ ಈ ಆಹಾರ ಉತ್ಸವವನ್ನು ವಿಶೇಷವಾಗಿ ಮಧುರವಾಗಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಮಿನಿ ಹೋಟೆಲ್‌ಗಳ ಮೂಲಕ ಗ್ರಾಹಕರಿಗೆ ರುಚಿಕರ ಖಾದ್ಯಗಳನ್ನು ಬಡಿಸಿದರು.
ಈ ಹೋಟೆಲ್‌ಗಳಲ್ಲಿ ಬಿರಿಯಾನಿ, ಪರೋಟ, ಪಲಾವ್, ಜಾಮೂನ್, ಪುಡ್ಡಿಂಗ್, ಬಾಳೆಬಜ್ಜಿ, ಗೋಳಿ ಬಜ್ಜಿ, ವಡೆ, ಫ್ರೆಶ್ ಜ್ಯೂಸ್, ಪಾಯಸ, ಕಬಾಬ್, ಚಿಕನ್ ಲಾಲಿಪಾಪ್, ಪಾನಿ ಪುರಿ, ಮಸಾಲೆ ಪುರಿ, ಕೇಕ್ ಮೊದಲಾದ ವೈವಿಧ್ಯಮಯ ಆಹಾರಗಳನ್ನು ಮನೋಜ್ಞವಾಗಿ ಸವಿಯಲು ಅವಕಾಶ ಕಲ್ಪಿಸಲಾಯಿತು. ಮಡಿಕೇರಿ : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಪ್ರತಿ ವರ್ಷ ನಡೆಸುವಂತೆ ಅಂತರ್ ಶಾಲಾ ಚರ್ಚಾಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಶ್ವೇಶ್ವರನ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ವೇದಿಕೆಯಲ್ಲಿ ಶಾಲಾ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ, ಚರ್ಚಾಸ್ಪರ್ಧೆಗೆ ನಗದು ಬಹುಮಾನವನ್ನು ಅನುದಾನವಾಗಿ ನೀಡಿದ ಕಲಿಯಂಡ ಸರಸ್ವತಿ ಚಂಗಪ್ಪ, ಶಾಲಾ ಸಂಚಾಲಕರಾದ ಕನ್ನಂಡ ಕವಿತಾ ಬೊಳ್ಳಪ್ಪ, ಆಡಳಿತ ಮಂಡಳಿಯ ಸದಸ್ಯರಾದ ಮೂವೇರ.ಕೆ. ಜಯರಾಂ ಹಾಗೂ ನಂದಿನೆರವAಡ ಎಂ. ದಿನೇಶ್, ಶಾಲಾ ಪ್ರಾಂಶುಪಾಲರಾದ ಸವಿತಾ.ಎಂ.ಜಿ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಫೀಲ್ಡ್ ಮಾರ್ಷಲ್ ಕೆ. ಎಮ್ ಕಾರ್ಯಪ್ಪ ಕಾಲೇಜಿನ ಉಪನ್ಯಾಸಕರಾದ ಶರ್ಮಿಳ ಬಿದ್ದಪ್ಪ ಹಾಗೂ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಶಿಕ್ಷಣ ತಜ್ಞೆ ತಡಿಯಂಗಡ ಪ್ರೇಮಲತಾ ಆಗಮಿಸಿದರು. ಪ್ರಾಂಶುಪಾಲರು ತಮ್ಮ ಮಾತಿನಲ್ಲಿ “ಚರ್ಚಾ ಸ್ಪರ್ಧೆ ಕೇವಲ ಅಲಂಕಾರಿಕ ವಿಷಯವಲ್ಲ, ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವುದರ ಮೂಲಕ ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಜೀವನದಲ್ಲಿ ಮುಂದುವರಿಯಲು ಸಾಕಷ್ಟು ಸಂಶೋಧನೆ ಮತ್ತು ನಿರಂತರ ಕಲಿಕೆಯು ಅವಶ್ಯಕ'' ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಉತ್ತೇಜಿಸಲು ಇಂತಹ ಚರ್ಚಾ ಸ್ಪರ್ಧೆಗಳು ಶಾಲೆಯಲ್ಲಿ ಆಯೋಜಿಸುವುದು ಮುಖ್ಯ ಹಾಗೂ ಮಕ್ಕಳಿಗೆ ಅನೇಕ ಪಠ್ಯೇತರ ಚಟುವಟಿಕೆಗಳಿರುತ್ತದೆ. ಎಲ್ಲಾ ಮಕ್ಕಳು ಆ ಚಟುವಟಿಕೆಯಲ್ಲಿ ಪಾಲ್ಗೊಳ್ಳ ಬೇಕು. ಇದರಿಂದ ತಮ್ಮ ವೈಯುಕ್ತಿಕ ಅಭಿವೃದ್ಧಿಯು ಸಾಧ್ಯ ಎಂದು ಕಲಿಯಂಡ ಸರಸ್ವತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಚರ್ಚಾ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಎ.ಎಲ್.ಜಿ ಕ್ರೆಸೆಂಟ್ ಶಾಲೆ ಮಡಿಕೇರಿಯ ಸಮೀದಾ ಫರಿಯಾ ಹಾಗೂ ಜಮೀರತ್ ಔಫ. ದ್ವಿತೀಯ ಸ್ಥಾನವನ್ನು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ಮಡಿಕೇರಿಯ ಪಿ. ಲಕ್ಷ್ಯ ದಿನೇಶ್ ಹಾಗೂ ಸಾನ್ವಿ ಎಂ.ಪಿ, ತೃತೀಯ ಸ್ಥಾನವನ್ನು ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ ನಾಪೋಕ್ಲುವಿನ ಫಾತಿಮಾ ಸನ, ಫಾತಿಮಾ ನಿಶ ಹಾಗೂ ಉತ್ತಮ ವಾಗ್ಮಿಯಾಗಿ ಕಾಲ್ಸ್ ಶಾಲೆಯ ರಿತಿಕ ಕೆ. ಕೊತಾರಿ ಬಹುಮಾನವನ್ನು ಪಡೆದುಕೊಂಡರು. ಸ್ಪರ್ಧೆಯಲ್ಲಿ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ ನಾಪೋಕ್ಲು, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ಮಡಿಕೇರಿ, ಕಾಲ್ಸ್ ಶಾಲೆ ಗೋಣಿಕೊಪ್ಪ, ಜ್ಞಾನಜ್ಯೋತಿ ವಿದ್ಯಾಸಂಸ್ಥೆ ಮೂರ್ನಾಡು, ಎ.ಎಲ್.ಜಿ ಕ್ರೆಸೆಂಟ್ ಶಾಲೆ ಮಡಿಕೇರಿ ಒಟ್ಟು ಐದು ತಂಡಗಳು ಭಾಗವಹಿಸಿದ್ದವು. ಸುಮಿತ್ರ ಎ.ಪಿ ನಿರೂಪಿಸಿ, ಎಂ.ಪಿ ಸಬಿತಾ ರಾಣಿ ಸ್ವಾಗತಿಸಿ, ಬಬಿನ ವಂದಿಸಿದರು. ವೀರಾಜಪೇಟೆ: ಕನ್ನಡ ಭಾಷೆಯ ಶ್ರೇಷ್ಠತೆ ಪ್ರತಿಷ್ಠೆಯನ್ನು ಪ್ರತಿಯೊಬ್ಬ ಕನ್ನಡಿಗ ಅರಿತು ಬಾಳಬೇಕು ಎಂದು ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಹೇಮಂತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪರಭಾಷೆಗಳ ವ್ಯಾಮೋಹದಿಂದ ಕನ್ನಡ ಭಾಷೆಯು ಶೋಚನೀಯವಾದ ಸ್ಥಿತಿಯನ್ನು ತಲುಪುತಿದೆ. ಕನ್ನಡಿಗರಿಗೆ ಭಾಷೆಯ ಶ್ರೇಷ್ಠತೆ, ಅನನ್ಯತೆ ಅರಿವಿಲ್ಲದಿರುವುದರಿಂದ ಈ ಪರಿಸ್ಥಿತಿ ಎದುರಾಗಿದೆ. ಕನ್ನಡ ನಾಡು ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿತ್ತು. ಅದನ್ನು ಏಕೀಕರಣಗೊಳಿಸಿದ ನೆನಪಾಗಿ ಹಾಗೂ ಮೈಸೂರು ರಾಜ್ಯವೆಂದಿದ್ದ ಹೆಸರನ್ನು ಕರ್ನಾಟಕವೆಂದು ಮರು ನಾಮಕರಣ ಮಾಡಿದ ಸುದಿನವನ್ನು ಕನ್ನಡ ರಾಜ್ಯೋತ್ಸವ ವೆಂದು ಆಚರಿಸುತ್ತೇವೆ. ಕನ್ನಡ ಭಾಷೆ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಭಾಷೆ ಎಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನ ಪ್ರಸ್ತುತ ಸಮಾಜದಲ್ಲಿ ವ್ಯಾವಹಾರಿಕ ದೃಷ್ಟಿಯಿಂದ ವಿವಿಧ ಭಾಷೆಗಳನ್ನು ಕಲಿಯುವುದು ಹಾಗೂ ಬಳಸುವುದು ಅವಶ್ಯ. ಆದರೆ, ನಮ್ಮ ನಾಡಿನ ಮಾತೃ ಭಾಷೆ ಕನ್ನಡವನ್ನು ಎಂದಿಗೂ ನಿರ್ಲಕ್ಷಿಸಬಾರದು. ಭಾಷೆಯ ಹಿರಿಮೆ, ಇತಿಹಾಸ, ರಚನೆಯಾದಂತಹ ಶ್ರೇಷ್ಠ ಗ್ರಂಥಗಳು, ಸಾಹಿತ್ಯ, ಸಂಗೀತ ಇವೆಲ್ಲವನ್ನು ನಾವು ಅರಿತು ಮುಂದಿನ ಪೀಳಿಗೆಗೆ ಅರ್ಥೆÊಸಿ ಕೊಡಬೇಕು. ಎಂದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕಿ, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಮುಖ್ಯಸ್ಥೆ ಪ್ರಿಯ ಮುದ್ದಪ್ಪ, ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ನಾಗರಾಜು, ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ. ಸುನಿಲ್ ಕುಮಾರ್ ಉಪಸ್ಥಿತರಿದ್ದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕöÈತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು. ಸುಂಟಿಕೊಪ್ಪ : ಸಮಾಜ ಸೇವಕ ಬಾಪ್ಪುಟ್ಟಿ ಅವರು ಗದ್ದೆಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ೪೦ ವಿದ್ಯಾರ್ಥಿಗಳಿಗೆ ಟ್ರಾö್ಯಕ್‌ಸೂಟ್ ವಿತರಿಸಿದರು. ಬಳಿಕ ಮಾತನಾಡಿದ ಬಾಪುಟ್ಟಿ, ಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಟ್ರಾö್ಯಕ್‌ಸೂಟ್ ನೀಡಲಾಗಿದೆ. ಮಕ್ಕಳು ಸತ್ಪçಜೆಯಾಗಿ ರೂಪುಗೊಳ್ಳಬೇಕೆಂದು ಕರೆ ನೀಡಿದರು. ಪತ್ರಕರ್ತ ಬಿ.ಡಿ. ರಾಜುರೈ ಮಾತನಾಡಿದರು.
ಶಾಲಾ ಶಿಕ್ಷಕಿ ಮೀನಾಕುಮಾರಿ, ಮಹಮ್ಮದ್ ನಿಸಾರ್, ಕೆ.ಇ.ಬಶೀರ್, ಕೆ.ಎಸ್.ಅನಿಲ್‌ಕುಮಾರ್, ಮತ್ತಿತರರು ಇದ್ದರು.