ಮಡಿಕೇರಿ, ನ. ೨೩: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ೨೦೨೫-೨೬ನೇ ಸಾಲಿನ ವಾರ್ಡ್ ಸಭೆಯನ್ನು ಆಯಾ ವಾರ್ಡ್ಗಳಲ್ಲಿ ಹಾಗೂ ಗ್ರಾಮಸಭೆಯನ್ನು ತಾ. ೨೮ ರಂದು ಪೂರ್ವಾಹ್ನ ೧೧ ಗಂಟೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಡಿ. ಪುಷ್ಪಾವತಿ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ. ಮಹೇಶ್ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.

ಗಾಳಿಬೀಡು ವಾರ್ಡ್ಸಭೆ ಗಾಳಿಬೀಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತಾ. ೨೫ ರಂದು ಪೂರ್ವಾಹ್ನ ೧೧ ಗಂಟೆಗೆ ಗಾಳಿಬೀಡು ಗ್ರಾ.ಪಂ. ಸದಸ್ಯೆ ಕೆ.ಸಿ. ಸರೋಜ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ. ೨೫ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ೨ನೇ ಮೊಣ್ಣಂಗೇರಿ ಸಭೆ ಅಪರಾಹ್ನ ೨.೩೦ ಗಂಟೆಗೆ ಗ್ರಾ.ಪಂ. ಸದಸ್ಯೆ ಪಿ.ಎಸ್. ಜಾನಕಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ. ೨೬ ರಂದು ಅಂಗನವಾಡಿ ಕೇಂದ್ರ ಕಡಮಕಲ್ಲಿನಲ್ಲಿ ಅಪರಾಹ್ನ ೩.೩೦ಕ್ಕೆ ಗ್ರಾ.ಪಂ. ಸದಸ್ಯ ಸುಭಾಷ್ ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ. ೨೭ ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಲೂರಿನಲ್ಲಿ ಪೂರ್ವಾಹ್ನ ೧೧ ಗಂಟೆಗೆ ಗ್ರಾ.ಪಂ. ಸದಸ್ಯ ಕೆ.ಪಿ. ಪ್ರದೀಪ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ. ೨೭ ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಮ್ಮಿಯಾಲದಲ್ಲಿ ಅಪರಾಹ್ನ ೨ ಗಂಟೆಗೆ ಗ್ರಾ.ಪಂ. ಸದಸ್ಯೆ ಕೆ.ಟಿ. ಧರ್ಮಾವತಿ ಅಧ್ಯಕ್ಷತೆಯಲ್ಲಿ ಹಾಗೂ ಅಂಗನವಾಡಿ ಕೇಂದ್ರ ಮುಟ್ಲುವಿನ ವಾರ್ಡ್ಸಭೆ ಅಪರಾಹ್ನ ೩ ಗಂಟೆಗೆ ನಡೆಯಲಿದೆ.

ಗಾಳಿಬೀಡು ಗ್ರಾಮಸಭೆ ತಾ. ೨೮ ರಂದು ಗಾಳಿಬೀಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಾಹ್ನ ೧೧ ಗಂಟೆಗೆ ಅಧ್ಯಕ್ಷೆ ಬಿ.ಡಿ. ಪುಷ್ಪಾವತಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.