ಶನಿವಾರಸಂತೆ; ನ. ೨೩ : ಸಮೀಪದ ನಿಲುವಾಗಿಲು-ಬೆಸೂರು ಅವಳಿ ಗ್ರಾಮಗಳ ಶ್ರೀಬಾಲತ್ರಿಪುರ ಸುಂದರಿ ಕ್ಷೇತ್ರದಲ್ಲಿ ಅಮ್ಮನವರ ೧೩ನೇ ವಾರ್ಷಿಕ ಮಹೋತ್ಸವ ತಾ..೨೬ ಮತ್ತು ೨೭ ರಂದು ನಡೆಯಲಿದೆ.

ದೇವಾಲಯದಲ್ಲಿ ತಾ. ೨೬ ರಂದು ಸಂಜೆ ೬ ರಿಂದ ಪೂಜಾ ಕಾರ್ಯಕ್ರಮಗಳು ಆರಂಭವಾಗಿ ಸ್ವಸ್ತಿವಾಚನ, ಸಭಾ ಪ್ರಾರ್ಥನೆ, ಆಗ್ರೋದಕ ಗಣಪತಿ ಪೂಜೆ, ಪುಣ್ಯಾಹವಾಚನ, ರಕ್ಷಾಬಂಧನ, ಪಂಚಗವ್ಯ ಆರಾಧನೆ, ಕಲಶ ಸ್ಥಾಪನೆ, ಅಗ್ನಿಕಾರ್ಯ, ನಿತ್ಯಹೋಮ, ಪರಿವಾರ ಹೋಮ, ವಾಸ್ತುಶಾಂತಿ, ಬಲಿಹರಣ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗವಾಗಲಿದೆ.

ತಾ. ೨೭ರಂದು ಬೆಳಿಗ್ಗೆ ೭ ರಿಂದ ಗಣಪತಿ ಹೋಮ, ಪೂಜೆ, ಪುಣ್ಯಾಹವಾಚನ, ಕಲಶಾರಾಧನೆ, ಅಗ್ನಿಕಾರ್ಯ, ಮಹಾಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪರಿವಾರ ಹೋಮ, ಧ್ವಜಸ್ತಂಭ ಪ್ರತಿಷ್ಠಾಂಗ ಹೋಮ, ಬಾಲತ್ರಿಪುರ ಸುಂದರಿ ಮೂಲಮಂತ್ರ ಹೋಮ, ಪಂಚಸೂಕ್ತ ಹೋಮ, ಪ್ರಾಯಶ್ಚಿತ್ತ ಶಾಂತಿ ಹೋಮ, ಮಹಾಕುಂಬಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.ದೇವಸ್ಥಾನದ ಪ್ರಧಾನ ಅರ್ಚಕರು ಮತ್ತು ತಂಡದವರಿAದ ಪೂಜಾ ಕಾರ್ಯಕ್ರಮ ನಡೆಸಲಾಗುವುದು.

ಗುರುವಾರ ಕುನಿಗನಹಳ್ಳಿ ಸುರೇಂದ್ರ ಮತ್ತು ತಂಡದವರಿAದ ರಸಮಂಜರಿ ಕಾರ್ಯಕ್ರಮ ಹಾಗೂ ಉದ್ದೂರು ರವಿ ಮತ್ತು ತಂಡದವರಿAದ ವೀರಗಾಸೆ ನೃತ್ಯವಿರುತ್ತದೆ

ಪೂಜಾ ಕಾರ್ಯಕ್ರಮಗಳನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಮಂತರ್ ಗೌಡ, ಮಾಜಿ ಸಚಿವ ಅಪ್ಪಚ್ಚು ರಂಜನ್, ಬೆಂಗಳೂರಿನ ಶ್ರೀ ಸಂಪೂರ್ಣ ವರಮಹಾಲಕ್ಷಿö್ಮÃ ಮಹಾಸಂಸ್ಥಾನದ ಶ್ರೀಬ್ರಹ್ಮಾಂಡ ಗುರೂಜಿ ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ತಿಳಿಸಿದ್ದಾರೆ.