ಚೆಯ್ಯಂಡಾಣೆ, ನ. ೨೩: ನಾಪೋಕ್ಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ವಾರಸುದಾರರಿಗೆ ಹಿಂತಿರುಗಿಸಿ ಅಸ್ಸಾಂ ಮೂಲದ ಟೈಲರ್ ಒಬ್ಬರು ಮಾನವೀಯತೆ ಮೆರೆದಿದ್ದಾರೆ.
ನವೆಂಬರ್ ೧೫ ರಂದು ಮಧ್ಯಾಹ್ನ ನಾಪೋಕ್ಲು ಪಟ್ಟಣದ ಶ್ರೀ ರಾಮ ಮಂದಿರದ ಮುಖ್ಯರಸ್ತೆಯಲ್ಲಿ ಬಿದ್ದಿದ್ದ ಹಣದ ಕಂತೆ ರಸ್ತೆಯ ಮರುಭಾಗದ ಮಳಿಗೆಯಲ್ಲಿ ಟೈಲರ್ ವೃತ್ತಿ ಮಾಡುತ್ತಿರುವ ಅಸ್ಸಾಂ ಮೂಲದ ಫಾರೂಕ್ ಅವರಿಗೆ ಸಿಕ್ಕಿದೆ. ಹಣದ ವಾರಸುದಾರರು ಯಾರೆಂದು ತಿಳಿಯದೆ ಫಾರೂಕ್ ಹಣವನ್ನು ತನ್ನಲ್ಲಿಟ್ಟುಕೊಂಡು ಈ ಬಗ್ಗೆ ಸಾಮಾಜಿಕ ಜಾಲತಾಣದ ವಾಟ್ಸಾö್ಯಪ್ ಗ್ರೂಪ್ಗಳಲ್ಲಿ ಹಂಚಿಕೊAಡಿದ್ದರು. ಇದನ್ನು ಗಮನಿಸಿದ ನಾಪೋಕ್ಲುವಿನ ನಿವಾಸಿ ಕೆ.ಎ. ಮನು ಅಯ್ಯಪ್ಪ ಅವರು ನವೆಂಬರ್ ೧೫ ರಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವ ಸಂದರ್ಭ ಹಣ ಕಳೆದುಕೊಂಡಿರುವ ಬಗ್ಗೆ ಸೂಕ್ತ ಮಾಹಿತಿ ನೀಡಿದ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಸಹಾಯಕ ಠಾಣಾಧಿಕಾರಿ ಮೋಹನ್ ಅವರ ಸಮ್ಮುಖದಲ್ಲಿ ಫಾರೂಕ್ ಅವರು ಮನು ಅಯ್ಯಪ್ಪ ಅವರಿಗೆ ಹಣವನ್ನು ಹಸ್ತಾಂತರಿಸಿದರು.
ಈ ಸಂದರ್ಭ ನಾಪೋಕ್ಲು ಠಾಣೆಯ ಮುಖ್ಯಪೇದೆ ವಿಜಯ್ ಕುಮಾರ್, ನಾಪೋಕ್ಲು ಶ್ರೀ ಪೊನ್ನುಮುತ್ತಪ್ಪ ದೇವಾಲಯದ ಅಧ್ಯಕ್ಷರು ಹಾಗೂ ಟೈಲರ್ ಮಳಿಗೆಯ ಮಾಲೀಕರಾದ ಎ.ಕೆ. ಚಂದ್ರನ್ ಉಪಸ್ಥಿತರಿದ್ದರು.