ಚೆಯ್ಯಂಡಾಣೆ, ನ. ೨೩ : ನರಿಯಂದಡ ಗ್ರಾಮ ಪಂಚಾಯಿತಿಯ ೨೦೨೫-೨೬ನೇ ಸಾಲಿನ ಕರಡ, ಅರಪಟ್ಟು-ಪೊದವಾಡ, ಎಡಪಾಲ, ಚೇಲಾವರ, ನರಿಯಂದಡ, ಕೋಕೇರಿ ಗ್ರಾಮಗಳ ವಾರ್ಡ್ಸಭೆ ತಾ. ೨೪ ರಿಂದ ೨೫ವರೆಗೆ ನಡೆಯಲಿದೆ.

ತಾ. ೨೪ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕರಡ ಗ್ರಾಮದ ವಾರ್ಡ್ಸಭೆ ಸ.ಹಿ.ಪ್ರಾ ಶಾಲೆ ಕರಡದಲ್ಲಿ ಗ್ರಾ.ಪಂ ಸದಸ್ಯರಾದ ವಿಲಿನ್ ಬೇಪಡಿಯಂಡ ಅಧ್ಯಕ್ಷತೆಯಲ್ಲಿ, ೧೨ ಗಂಟೆಗೆ ಅರಪಟ್ಟು- ಪೊದವಾಡ ಬ್ಲಾಕ್‌ನ ವಾರ್ಡ್ಸಭೆ ಸ.ಹಿ.ಪ್ರಾ. ಶಾಲೆ ಕಡಂಗದಲ್ಲಿ ಗ್ರಾ.ಪಂ. ಸದಸ್ಯ ಸುಬೈರ್ ಸಿ.ಇ. ಅಧ್ಯಕ್ಷತೆಯಲ್ಲಿ, ಅಪರಾಹ್ನ ೨.೩೦ಕ್ಕೆ ಎಡಪಾಲ ವಾರ್ಡ್ಸಭೆ ಸ.ಹಿ.ಪ್ರಾ. ಶಾಲೆ ಎಡಪಾಲದಲ್ಲಿ ಗ್ರಾ.ಪಂ. ಸದಸ್ಯ ಕೆ.ಈ. ಮಮ್ಮದ್ ಅಧ್ಯಕ್ಷತೆಯಲ್ಲಿ, ತಾ.೨೫ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಚೇಲಾವರ ವಾರ್ಡ್ಸಭೆ ಸ.ಕಿ.ಪ್ರಾ.ಶಾಲೆ ಪೊನ್ನೋಲ ಚೇಲಾವರದಲ್ಲಿ ಗ್ರಾ.ಪಂ. ಸದಸ್ಯ ಮುಂಡ್ಯೋಳAಡ ಈರಪ್ಪ ಅಧ್ಯಕ್ಷತೆಯಲ್ಲಿ, ಮಧ್ಯಾಹ್ನ ೧೨ ಗಂಟೆಗೆ ನರಿಯಂದಡ ವಾರ್ಡ್ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ. ಸದಸ್ಯ ಬಿದ್ದಂಡ ರಾಜೇಶ್ ಅಚ್ಚಯ್ಯ ಅಧ್ಯಕ್ಷತೆಯಲ್ಲಿ, ಅಪರಾಹ್ನ ೨.೩೦ ಗಂಟೆಗೆ ಕೊಕೇರಿ ವಾರ್ಡ್ಸಭೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗ್ರಾ.ಪಂ. ಸದಸ್ಯ ರಾಜು ಎಚ್.ಎಂ. ಅಧ್ಯಕ್ಷತೆಯಲ್ಲಿ ನಡೆಯಲಿದೆ.