ಕೂಡಿಗೆ, ನ. ೨೩: ರಾಜ್ಯ ಹಾಸನ ಹೆದ್ದಾರಿಯ ಕೂಡಿಗೆ - ಹೆಬ್ಬಾಲೆ ರಸ್ತೆ ರೂ. ೩.೮೦ ಕೋಟಿ ವೆಚ್ಚದಲ್ಲಿ ಮರುಡಾಂಬರೀಕರಣ ಮತ್ತು ರಸ್ತೆಯ ಅಗಲೀಕರಣ ಕಾಮಗಾರಿ ಕೂಡಿಗೆಯಿಂದ ಭರದಿಂದ ಸಾಗುತ್ತಿದೆ.
ಈಗಾಗಲೇ ಲೋಕೋಪಯೋಗಿ ಇಲಾಖೆಯ ನಿಯಮಾನುಸಾರ ರಸ್ತೆ ಅಪಘಾತ ವಲಯದ ಆಯ್ದ ಪ್ರಮುಖ ಭಾಗಗಳಲ್ಲಿ ಮೊದಲ ಹಂತದ ರಸ್ತೆಯ ಅಗಲೀಕರಣ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವ ಸ್ಧಳ ಪರಿಶೀಲನೆಯನ್ನು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅರ್ಬಾಜ್ ಸೇರಿದಂತೆ ಮೈಸೂರು ವಿಭಾಗದ ಕಾಮಗಾರಿ ಗುಣಮಟ್ಟ ಅಧಿಕಾರಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. ಮಳೆ ಬಿಡುವು ಇರುವುದರಿಂದ ಪ್ರಥಮ ಹಂತದ ಕಾಮಗಾರಿ ನಡೆದಿದೆ. ರಸ್ತೆಯ ಅಗಲೀಕರಣ ನಂತರ ಈಗಾಗಲೇ ನಿಗದಿಪಡಿಸುವ ಜಾಗಗಳಲ್ಲಿ ಡಾಂಬರೀಕರಣ ನಡೆಯಲಿದೆ ಎಂದು ಲೋಕೋಪಯೋಗಿ ಇಲಾಖೆಯ ಕುಶಾಲನಗರ ತಾಲೂಕು ಇಂಜಿನಿಯರ್ ಅರ್ಬಾಜ್ ತಿಳಿಸಿದ್ದಾರೆ.