ಚೆಯ್ಯಂಡಾಣೆ, ನ. ೨೩: ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನೀಲ್ಯಾಟ್ ಲೇಡಿಸ್ ಕ್ಲಬ್ ಕೊಕೇರಿ ಆಯೋಜಿಸಿದ್ದ ಪ್ರಥಮ ವರ್ಷದ ಮಹಿಳಾ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಬ್ಲಾö್ಯಕ್ ಪ್ಯಾಂಥರ್ಸ್ ಕಟ್ಟೆಮಾಡು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ನೀಲ್ಯಾಟ್ ಕೊಕೇರಿ ತಂಡವನ್ನು ಬ್ಲಾö್ಯಕ್ ಪ್ಯಾಂಥರ್ಸ್ ಕಟ್ಟೆಮಾಡು ತಂಡ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ನೀಲ್ಯಾಟ್ ಕೊಕೇರಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬ್ಲಾö್ಯಕ್ ಪ್ಯಾಂಥರ್ಸ್ ಕಟ್ಟೆಮಾಡು ತಂಡದ ಬಿರುಸಿನ ಬೌಲಿಂಗ್ ದಾಳಿಗೆ ನೀಲ್ಯಾಟ್ ತಂಡ ೫ ಓವರ್ನಲ್ಲಿ ೩೪ ರನ್ ಕಲೆ ಹಾಕಿತ್ತು ನಂತರ ಬ್ಯಾಟ್ ಮಾಡಿದ ಬ್ಲಾö್ಯಕ್ ಪ್ಯಾಂಥರ್ಸ್ ತಂಡ ೩.೫ ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೆ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ನಲ್ಲಿ ಬ್ಲಾö್ಯಕ್ ಪ್ಯಾಂಥರ್ಸ್ ಕಟ್ಟೆಮಾಡು ತಂಡ ೮ ವಿಕೆಟ್ ಗಳಿಂದ ಇಲೆವೆನ್ ಈಗಲ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಪಡೆಯಿತು. ಎರಡನೇ ಸೆಮಿಫೈನಲ್ನಲ್ಲಿ ನೀಲ್ಯಾಟ್ ಕೊಕೇರಿ ತಂಡ ಗುಂಬಳೆಮಾಡು ಕ್ವೀನ್ಸ್ ತಂಡವನ್ನು ೧೪ ರನ್ಗಳಿಂದ ಸೋಲಿಸಿ ಫೈನಲ್ಗೆ ಅರ್ಹತೆ ಗಿಟ್ಟಿಸಿಕೊಂಡರು.
ಚಾAಪಿಯನ್ ಬ್ಲಾö್ಯಕ್ ಪ್ಯಾಂಥರ್ಸ್ ಕಟ್ಟೆಮಾಡು ತಂಡಕ್ಕೆ ೨೨ ಸಾವಿರ ನಗದು ರನ್ನರ್ಸ್ ನೀಲ್ಯಾಟ್ ಕೊಕೇರಿ ತಂಡಕ್ಕೆ ೧೧ ಸಾವಿರ ನಗದು ಹಾಗೂ ತೃತೀಯ ಸ್ಥಾನ ಪಡೆದ ಇಲೆವೆನ್ ಈಗಲ್ಸ್ ತಂಡಕ್ಕೆ ೬ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು.
ವೈಯಕ್ತಿಕ ಬಹುಮಾನ
ಉತ್ತಮ ಬ್ಯಾಟ್ಸ್ಮ್ಯಾನ್ ಪ್ರಶಸ್ತಿಯನ್ನು ಬ್ಲಾö್ಯಕ್ ಪ್ಯಾಂಥರ್ಸ್ ಕಟ್ಟೆಮಾಡು ತಂಡದ ಪ್ರೀತು,ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಬ್ಲಾö್ಯಕ್ ಪ್ಯಾಂಥರ್ಸ್ ಕಟ್ಟೆಮಾಡು ತಂಡದ ಜ್ಯೋತಿ, ಹೆಚ್ಚು ಸಿಕ್ಸರ್ ಬಾರಿಸಿದ ಪ್ರಶಸ್ತಿಯನ್ನು ನೀಲ್ಯಾಟ್ ತಂಡದ ನಮೃತ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗುಂಬಳಮಾಡ ಕ್ವೀನ್ಸ್ ತಂಡದ ವರ್ಷ, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಬ್ಲಾö್ಯಕ್ ಪ್ಯಾಂಥರ್ಸ್ ಕಟ್ಟೆಮಾಡು ತಂಡದ ವರುಣ, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ನೀಲ್ಯಾಟ್ ಕೊಕೇರಿ ತಂಡದ ಕೌಶಿ ಕಾವೇರಮ್ಮ ಪಡೆದುಕೊಂಡರು.
ಪAದ್ಯಾಟದ ತೀರ್ಪುಗಾರರಾಗಿ ಗಗನ್, ಬಿಪಿನ್ ಹಾಗೂ ಸುಜನ್ ಕಾರ್ಯ ನಿರ್ವಹಿಸಿದರೆ, ಸ್ಕೋರರ್ರಾಗಿ ವಿಪಿನ್ ಗಣಪತಿ ಹಾಗೂ ವೀಕ್ಷಕ ವಿವರಣೆಯನ್ನು ಕಾಳಪ್ಪ,ವಿನೋದ್ ಜೆಸಿಬಿ ನಡೆಸಿಕೊಟ್ಟರು. ಫೈನಲ್ ಪಂದ್ಯಾಟವನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ ಕ್ರೀಡಾಪಟುಗಳನ್ನು ಪರಿಚಯಿಸಿದರು.
ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ಕೊಕೇರಿ ನೀಲ್ಯಾಟ್ ಲೇಡಿಸ್ ಕ್ಲಬ್ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷತೆಯಲ್ಲಿ ನಡೆಯಿತು. ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ನಿಕಟ ಪೂರ್ವ ಅಧ್ಯಕ್ಷ ಬಿದ್ದಂಡ ರಾಜೇಶ್ ಆಚಯ್ಯ, ಕೊಕೇರಿ ಸ್ಪೋಟ್ಸ್ ಆ್ಯಂಡ್ ಕಲ್ಚರಲ್ ಅಧ್ಯಕ್ಷ ನಂದ ನಾಣಯ್ಯ, ದಾನಿಗಳಾದ ಪ್ರಜ್ವಲ್ ಗಣೇಶ್, ಮಚ್ಚಂಡ ರಂಜು ಚಂಗಪ್ಪ, ಪೊನ್ನಚಂಡ ಮಂಜುಳಾ, ಕ್ಲಬ್ನ ಕಾರ್ಯದರ್ಶಿ ಚೇನಂಡ ಗಾಯತ್ರಿ, ಉಪಾಧ್ಯಕ್ಷರಾದ ಕುಮ್ಮಂಡ ಮೈನಾ, ಕೋಶಾಧಿಕಾರಿ ಪೆಮ್ಮಂಡ ಗೌರಿ, ಚೇನಂಡ ಸಂಪತ್, ಲವೀನ್, ಅನಂತ್ ಕುಮಾರ್, ದಕ್ಷತ್ ಸುಬ್ಬಯ್ಯ, ಮಮತಾ ನಾಣಯ್ಯ, ಗೌರಮ್ಮ, ಪೆಮ್ಮಂಡ ಉಷಾ, ಜನತಾ, ಮೂಡೆರ ಸುಮತು, ಮಚ್ಚಂಡ ಅಪಿನಾ, ನೀಲ್ಯಾಟ್ ಲೇಡಿಸ್ ಕ್ಲಬ್ ಪದಾಧಿಕಾರಿಗಳು , ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.