ನಾಪೋಕ್ಲು, ನ. ೨೩ : ನಾಪೋಕ್ಲುವಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ವತಿಯಿಂದ ೧೭೧ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ ಸಮಾರೋಪ ಸಮಾರಂಭ ನಡೆಯಿತು. ಭಾಗವಹಿಸಿದ್ದ ಅರ ಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಇರುವ ಪ್ರತಿ ಪ್ರಜೆಗೆ ಅಧ್ಯಾತ್ಮಿಕ ಅರಿವು ಮೂಡಿಸುವ ಅಗತ್ಯವಿಲ್ಲ. ಭರತ ಖಂಡದಲ್ಲಿ ಹುಟ್ಟಿದ ಪ್ರತಿಯೋರ್ವ ವ್ಯಕ್ತಿ ಧರ್ಮದಲ್ಲಿ ಜನಿಸಿ ಧರ್ಮದಲ್ಲೇ ಬೆಳೆದು ಧರ್ಮದಲ್ಲಿ ಬದುಕನ್ನು ಕೊನೆಗೊಳಿಸುತ್ತಾನೆ ಎಂದರು.
ನಾಪೋಕ್ಲು ಟೌನ್ ಜುಮ್ಮಾ ಮಸೀದಿಯ ಧರ್ಮ ಗುರು ಶೌಕತ್ ಆಲಿ ಸಖಾಫಿ, ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕೆ.ಎ. ಇಸ್ಮಾಯಿಲ್, ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಜಮಾಅತ್ ಅಧ್ಯಕ್ಷ ಎಮ್.ಎಚ್. ಅಬ್ದುಲ್ ರೆಹಮಾನ್, ಪೊನ್ನು ಮುತ್ತಪ್ಪ ದೇವಾಲಯದ ಅಧ್ಯಕ್ಷ ಚಂದ್ರನ್ ಮಾತನಾಡಿದರು.
ಎಸ್‌ಎನ್‌ಡಿಪಿ ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ. ಲವ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಜೆಡಿಎಸ್ ವಕ್ತಾರ ಮನ್ಸೂರ್ ಆಲಿ ಎಂ.ಎ., ವಕೀಲ ಕೊಡಿಮಣಿಯಂಡ ಶರಣು ಕುಟ್ಟಪ್ಪ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ, ವಿಎಸ್‌ಎಸ್‌ಎನ್ ನಿರ್ದೇಶಕ ಅರೆಯಡ ರತ್ನ ಪೆಮ್ಮಯ್ಯ, ಎಸ್‌ಎನ್‌ಡಿಪಿ ನಾಪೋಕ್ಲು ಶಾಖೆಯ ಉಪಾಧ್ಯಕ್ಷ ಹರಿದಾಸ್ ಸೇರಿದಂತೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಮಿತಿ ಸದಸ್ಯರು, ಸಾರ್ವಜನಿಕರು ಹಾಜರಿದ್ದರು. ಹರ್ಷ ಬಾಲಕೃಷ್ಣ ಪ್ರಾರ್ಥಿಸಿ, ರವಿ ಓಂಕಾರ್ ಸ್ವಾಗತಿಸಿ, ರೇಡಿಯೋ ಉದ್ಘೋಷÀಕಿ ಬಾಳೆಯಡ ದಿವ್ಯ ಮಂದಪ್ಪ ಹಾಗೂ ರವಿ ಓಂಕಾರ್ ನಿರೂಪಿಸಿದರು. ಬಳಿಕ ೭ ಬೀಟ್ಸ್ ಆರ್ಕೆಸ್ಟಾç ಕ್ಯಾಲಿಕೆಟ್ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ಇದಕ್ಕೂ ಮೊದಲು ಇಲ್ಲಿನ ಸಂತೆ ಮೈದಾನದಿಂದ ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಇರಿಸಿ ಕೇರಳದ ಚಂಡೆ ವಾದ್ಯದೊಂದಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾದ ಪುರುಷರ ಹಗ್ಗ ಜಗ್ಗಾಟದಲ್ಲಿ ಇಗ್ಗುತ್ತಪ್ಪ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ರೂ. ೩೦೦೦೦ ನಗದು ಹಾಗೂ ಟ್ರೋಫಿಯನ್ನು ಪಡೆಯಿತು. ಹಿಂದೂ ಮಲಯಾಳಿ ಸಂಘ ಕಾರ್ಗಿಲ್ ಕೊಡಗು ದ್ವಿತೀಯ ಸ್ಥಾನವನ್ನು ಪಡೆದು ರೂ. ೧೫೦೦೦ ನಗದು ಹಾಗೂ ಟ್ರೋಫಿಯನ್ನು ಸ್ವೀಕರಿಸಿದರು.
ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ಜಯಗಳಿಸಿ ರೂ. ೩೦೦೦೦ ನÀಗದು ಹಾಗೂ ಟ್ರೋಫಿ ಪಡೆಯಿತು. ಬಲಮುರಿ ಮಹದೇವ ಸ್ಪೋರ್ಟ್ಸ್ ಕ್ಲಬ್ ದ್ವಿತೀಯ ಸ್ಥಾನ ಪಡೆದು ರೂ. ೧೫೦೦೦ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಸಿದ್ದಾಪುರದ ಗ್ಯಾಲಕ್ಸಿ ನಲ್ವತೆಕರೆ ತಂಡ ಮುಡಿಗೇರಿಸಿಕೊಂಡಿತು. ಹಾಕತ್ತೂರಿನ ಅಟ್ಯಾಕ್ ಬಾಯ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿತು.
ವಿಜೇತ ತಂಡಕ್ಕೆ ೩೩,೩೩೩ ರೂ ನಗದು ಮತ್ತು ಆಕರ್ಷಕ ಟ್ರೋಫಿ, ರನ್ನರ್ ಅಪ್ ತಂಡಕ್ಕೆ ರೂ. ೧೫೫೫೫ ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಯಿತು. ಕ್ರಿಕೆಟ್‌ನಲ್ಲಿ ಮ್ಯಾನ್ ಆಫ್‌ದ ಸೀರಿಸ್ ಪ್ರಶಸ್ತಿಗೆ ಚಿಂಚು ನಲ್ವತೆಕರೆ, ಬೆಸ್ಟ್ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿಗೆ ಸಾಹುಲ್ ನಲ್ವತೆಕರೆ, ಬೆಸ್ಟ್ ಬೌಲರ್ ಪ್ರಶಸ್ತಿಗೆ ರಫೀಕ್ ಹಾಕತ್ತೂರು ಭಾಜನರಾದರು.
ತೃತೀಯ ಸ್ಥಾನವನ್ನು ಕೊಂಡAಗೇರಿ ತಂಡ ಹಾಗೂ ಅಯ್ಯಂಗೇರಿ ಫ್ರೆಂಡ್ಸ್ ತಂಡ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.
- ವರದಿ ದುಗ್ಗಳ ಸದಾನಂದ.