ಚೆಯ್ಯAಡಾಣೆ, ನ. ೨೨: ಇತ್ತೀಚಿನ ದಿನಗಳಲ್ಲಿ ಎಲ್ಲಾ ರೀತಿಯ ಕ್ರೀಡೆಗಳಲ್ಲಿ ಮಹಿಳೆಯರ ಸಾಧನೆ ಅತ್ಯಂತ ಶ್ಲಾಘನೀಯ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹೇಳಿದರು.

ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೋಕೇರಿ ಗ್ರಾಮದ ನೀಲ್ಯಾಟ್ ಲೇಡಿಸ್ ಕ್ಲಬ್ ಆಯೋಜಿಸಿದ್ದ ಮಹಿಳೆಯರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಗೆ ಹೆಸರುವಾಸಿಯಾಗಿರುವ ನಮ್ಮ ಜಿಲ್ಲೆಯು ಗ್ರಾಮೀಣ ಭಾಗದ ಕ್ರೀಡಾಕೂಟಗಳಿಗೂ ಹೆಚ್ಚು ಒತ್ತನ್ನು ನೀಡುತ್ತಿದೆ ಎಂದರು.

ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ನೀಲ್ಯಾಟ್ ಕ್ಲಬ್ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದ ಐಚೆಟ್ಟಿರ ಸುನಿತಾ ಮಾಚಯ್ಯ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಮಹಿಳೆಯರಿಗೆ ಕ್ರೀಡೆಯಲ್ಲಿ ಸೂಕ್ತ ಅವಕಾಶ, ಬೆಂಬಲ ಇದ್ದರೆ ರಾಜ್ಯ, ರಾಷ್ಟ, ಅಂತರರಾಷ್ಟಿçÃಯ ಮಟ್ಟದಲ್ಲೂ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಕೋಕೇರಿ ಸ್ಪೋಟ್ಸ್ ಅಂಡ್ ಕಲ್ಚರಲ್ ಅಧ್ಯಕ್ಷ ಪೆಮ್ಮಂಡ ನಂದ ನಾಣಯ್ಯ, ಮಚ್ಚಂಡ ಸೀಮಾ ಚಂಗಪ್ಪ, ಪೊನ್ನಚಂಡ ಮಂಜುಳಾ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿಮಲಾ ಕೆ.ಎಂ, ನೀಲ್ಯಾಟ್ ಲೇಡಿಸ್ ಕ್ಲಬ್‌ನ ಉಪಾಧ್ಯಕ್ಷೆ ಮೈನಾ, ಕಾರ್ಯದರ್ಶಿ ಪೆಮ್ಮಂಡ ಗೌರಮ್ಮ, ಶೈಲಾ ಕುಟ್ಟಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಸುಬೈರ್, ಮಮ್ಮದ್ ಕ್ಲಬ್‌ನ ಪದಾಧಿಕಾರಿಗಳು, ಗ್ರಾಮಸ್ಥರು, ಮತ್ತಿತರರು ಉಪಸ್ಥಿತರಿದ್ದರು. ಪಂದ್ಯಾಟದಲ್ಲಿ ೧೩ ತಂಡಗಳು ಭಾಗವಹಿಸಲಿವೆ.

-ಅಶ್ರಫ್