ಮಡಿಕೇರಿ, ನ. ೨೨: ರಾಜ್ಯದಲ್ಲಿನ ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಟ ವೇತನ ನೀಡುವಂತೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಎಲ್ಲಾ ಶಾಸಕರುಗಳಿಗೆ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿAದ ಮನವಿ ಮಾಡಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್ ಭರತ್ ಮಾಹಿತಿ ನೀಡಿದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೊಡಗಿನ ಇಬ್ಬರು ಎಂ.ಎಲ್.ಎ ಹಾಗೂ ಓರ್ವ ಎಂ.ಎಲ್.ಸಿಗೂ ಈ ಸಂಬAಧ ಮನವಿ ಮಾಡಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ನೌಕರರಿಗೆ ಸರಕಾರ ನೀಡುತ್ತಿರುವ ವೇತನ ಕಡಿಮೆ ಇದೆ. ಕನಿಷ್ಟ ವೇತನ ರೂ. ೨೫,೦೦೦ ನೀಡಬಹುದು ಎಂಬುದರ ಪ್ರಸ್ತಾವನೆಯ ಕಡತಗಳು ಸಿ.ಎಂ ಕಚೇರಿಯಲ್ಲಿಯೇ ಉಳಿದಿದೆ. ಇದರ ಅನುಮೋದನೆಗೆ ಸಂಬAಧಿಸಿದAತೆ ಅಧಿಕಾರಿಗಳು ಭರವಸೆ ನೀಡಿದ್ದಾರೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರಕ್ಕೆ ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲದಂತಾಗಿದ್ದು, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಶಾಸಕರು ಈ ಸಮಸ್ಯೆ ಬಗ್ಗೆ ಧ್ವನಿ ಎತ್ತಬೇಕು ಎಂದು ಅವರು ಒತ್ತಾಯಿಸಿದರು.

ತಾ. ೨೯ ರಂದು ಮುಖ್ಯಮಂತ್ರಿ ಅವರ ಮೈಸೂರಿನಲ್ಲಿನ ಮನೆಗೆ ಕೊಡಗು ಸೇರಿದಂತೆ ೫ ಜಿಲ್ಲೆಗಳ ಸಂಘದ ಪದಾಧಿಕಾರಿಗಳು ತೆರಳಿ ಕನಿಷ್ಟ ವೇತನ ನೀಡುವಂತೆ ಆಗ್ರಹಿಸಲಾಗುವುದು. ಡಿ.೨೧ ಕ್ಕೆ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳುತ್ತೇವೆ ಎಂದು ಅವರು ಮಾಹಿತಿ ನೀಡಿದರು.

ಕೆಲ ಗ್ರಾಪಂ ನೌಕರರ ಬಿ.ಪಿ.ಎಲ್ ಕಾರ್ಡ್ ರದ್ದು ಮಾಡುವ ಕ್ರಮಕ್ಕೂ ನಾವು ವಿರೋಧ ವ್ಯಕ್ತಪಡಿಸುತ್ತೇವೆ ಎಂದ ಭರತ್, ಕೇವಲ ರೇಷನ್ ಮಾತ್ರವಲ್ಲ, ಆರೋಗ್ಯ ತುರ್ತು ಸಂದರ್ಭವೂ ಕಾಮರ್ಸ್ ಸಹಕಾರಿಯಾಗಿದೆ ಎಂದರು.

ಜಿಲ್ಲೆಯ ೧೦೩ ಗ್ರಾಮ ಪಂಚಾಯಿತಿಗಳಲ್ಲಿ ೨೫೦ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ನಾಕೂರು ಶಿರಂಗಾಲ, ಅಮ್ಮತ್ತಿ - ಕಾರ್ಮಾಡು, ಚೆಂಬೆಬೊಳ್ಳೂರು ಪಂಚಾಯಿತಿಗಳಲ್ಲಿ ಸಿಬ್ಬಂದಿಯ ತೀವ್ರ ಕೊರತೆ ಇದ್ದು, ಇತರ ಕಾರ್ಮಿಕರಿಗೆ ಹೊರೆ ಹೆಚ್ಚಾಗಿದೆ. ಖಾಲಿ ಹುದ್ದೆಗಳನ್ನು ಕೂಡಲೇ ತುಂಬಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹದೇವ್ ಹಾಗೂ ರಂಗಸ್ವಾಮಿ, ಉಪ ಕಾರ್ಯದರ್ಶಿ ದಿಲೀಪ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಧುಸೂದನ್, ವೀರಾಜಪೇಟೆ ತಾಲೂಕು ಪದಾಧಿಕಾರಿ ಸೌಮ್ಯ ಎಂ.ಎಸ್ ಹಾಜರಿದ್ದರು.