ಸೋಮವಾರಪೇಟೆ, ನ. ೨೧: ಜಿಲ್ಲೆಯ ಗಡಿ ಭಾಗದಲ್ಲಿರುವ ಹೊಸೂರು ಗ್ರಾಮದ ಬೆಟ್ಟದ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯಕ್ಕೆ ಪಟ್ಟಣದ ಉದ್ಯಮಿ ಹೆಚ್.ಬಿ. ಹೃಷಿಕೇಶ್ ಅವರು ಬೆಳ್ಳಿ ಬಿಂಬ ಸಮರ್ಪಣೆ ಮಾಡಿದರು.
ದೇವಾಲಯದಲ್ಲಿ ವಿಜೃಂಭಣೆಯಿAದ ಆಯೋಜನೆಗೊಂಡಿದ್ದ ಕೌಟೆಕಾಯಿ ಜಾತ್ರಾ ಮಹೋತ್ಸವದಲ್ಲಿ ದೇವರಿಗೆ ೨.೮ ಕೆ.ಜಿ. ತೂಕದ ಬಿಂಬ ಸಮರ್ಪಿಸಲಾಯಿತು. ಸಂಪ್ರದಾಯದAತೆ ತಿರುಳು ತೆಗೆದ ಕೌಟೆ ಕಾಯಿ ಹಣತೆಗೆ ದೀಪ ಹಚ್ಚಿ ಜಾತ್ರೆಗೆ ಚಾಲನೆ ನೀಡಲಾಯಿತು
ಜಾತ್ರಾ ಮಹೋತ್ಸವದಲ್ಲಿ ಹೃಷಿಕೇಶ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಮುರುಳಿ ಮೋಹನ್, ಪ್ರತಿಭಾ ಮಂಜು, ರಮೇಶ್, ಹೆಚ್. ಟಿ. ಪುಟ್ಟೇಗೌಡ, ಜಗದೀಶ್ ಸೇರಿದಂತೆ ದೇವಾಲಯದ ಪದಾಧಿಕಾರಿಗಳು ಭಾಗಿಯಾಗಿದ್ದರು.