ಸೋಮವಾರಪೇಟೆ, ನ. ೨೧: ಇಲ್ಲಿನ ನಂ. ೩೮೩ನೇ ಸೋಮವಾರಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಎಪಿಸಿಎAಎಸ್)ದ ಮುಂದಿನ ಸಾಲಿಗೆ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು.
ಕಳೆದ ತಾ. ೧೫ ರಂದು ಚುನಾವಣೆ ನಿಗದಿಯಾಗಿದ್ದು, ಎಲ್ಲಾ ನಿರ್ದೇಶಕರುಗಳ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆದಿತ್ತು. ಮಹೇಶ್ ತಿಮ್ಮಯ್ಯ, ಎಸ್.ಎ. ಪ್ರತಾಪ್, ಟಿ.ಕೆ. ರಮೇಶ್, ಎಂ.ಸಿ. ರಾಘವ, ಸುಖಾಂತ್, ಸಿ.ಎಸ್. ಧರ್ಮಪ್ಪ, ಜಿ.ಎಸ್. ರಾಜ್‌ಕುಮಾರ್, ಪಿ.ಡಿ. ಮೋಹನ್‌ದಾಸ್, ಸಿ.ಜಿ. ಮಿಥುನ್, ಎಂ.ವಿ. ಜೀವನ್, ಎಸ್.ಪಿ. ಸುಮಿತ್ರ, ಪಿ.ಎ. ಅನಿತಾ ಅವರುಗಳು ಆಯ್ಕೆಯಾಗಿದ್ದರು. ಸಂಘದ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಮಹೇಶ್ ತಿಮ್ಮಯ್ಯ ಅವರು ಅಧ್ಯಕ್ಷರಾಗಿ, ಎಸ್.ಎ. ಪ್ರತಾಪ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ರಿಟರ್ನಿಂಗ್ ಅಧಿಕಾರಿಯಾಗಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ಡಿ. ಮೋಹನ್ ಕಾರ್ಯನಿರ್ವಹಿಸಿದರು.