ಜೀವನವೆಂಬ ಪಯಣದಲಿ ಪ್ರತಿನಿತ್ಯ ನೂರಾರು ಮಂದಿಯನ್ನು ಭೇಟಿ ಮಾಡುತ್ತೇವೆ., ಒಬ್ಬರನ್ನೊಬ್ಬರು ಪರಿಚಯವಿಲ್ಲದಿದ್ದರೂ ‘ಹಲೋ..’ ಎಂದು ನಗು ಬೀರುತ್ತೇವೆ., ಪರಿಚಯದವರಾದರೆ ಒಂದಿಷ್ಟು ಕುಶಲೋಪರಿಯೂ ಇರುತ್ತದೆ., ಈ ಪ್ರಕ್ರಿಯೆ ಔಪಚಾರಿಕವಾಗಿ ನಡೆದುಕೊಂಡು ಬಂದಿದೆಯಾದರೂ ಈ ‘ಹಲೋ..’ ಹೇಳುವದಕ್ಕೂ ಒಂದು ವಿಶೇಷತೆ ಇದೆ ಎಂದರೆ ಅಚ್ಚರಿಯಾಗುತ್ತದೆ..!

ಹೌದು., ನಮ್ಮ ಭಾರತೀಯ ಸಂಸ್ಕøತಿಯಲ್ಲಿ ‘ನಮಸ್ತೆ, ಶುಭೋದಯ., ಶುಭ ಸಂಜೆ..,’ ಹೀಗೆಲ್ಲ ಹೇಳುತ್ತೇವೆ. ಆದರೆ., ಪಾಶ್ಚಾತ್ಯ ಸಂಸ್ಕøತಿಯಲ್ಲಿ ‘ಹಲೋ., ಗುಡ್ ಮಾರ್ನಿಂಗ್, ಗುಡ್ ಈವ್ನಿಂಗ್..’ ಎಂದೆಲ್ಲ ಹೇಳಲಾಗುತ್ತದೆ. ಆದರಿಲ್ಲಿ ನಾ ಹೇಳ ಹೊರಟಿರುವದು ಈ ‘ಹಲೋ..’ ಎಂಬ ಪದದ ವಿಶೇಷತೆ ಹಾಗೂ ‘ವಿಶ್ವ ಹಲೋ ದಿನ’ ದ ಮಹತ್ವದ ಬಗ್ಗೆ..!

ಘರ್ಷಣೆ, ಹಿಂಸೆ, ಧ್ವೇಷ ಭಾವನೆಯನ್ನು ತೊಡೆದುಹಾಕಿ ಪರಸ್ಪರ ಸ್ನೇಹತ್ವದೊಂದಿಗೆ ಶಾಂತಿಯಿಂದ ಬಾಳುವೆ ನಡೆಸುವ ಸಲುವಾಗಿ ಈ ‘ಹಲೋ..’ ಎಂಬ ಪದದ ಜೋಡಣೆಯೊಂದಿಗೆ ವಿಶ್ವ ಹಲೋ ದಿನವನ್ನು ಜಾರಿಗೆ ತರಲಾಗಿದೆ. 1973ರಲ್ಲಿ ಈ ದಿನವನ್ನು ಜಾರಿಗೆ ತರಲಾಗಿದ್ದು, ಪ್ರತಿವರ್ಷ ನವೆಂಬರ್ 21ರಂದು ಆಚರಣೆ ಮಾಡಲಾಗುತ್ತದೆ..!

1970 ರ ದಶಕದಲ್ಲಿ, ಈಜಿಪ್ಟ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರವಾಗಿತ್ತು. 1973 ರ ಅಕ್ಟೋಬರ್‍ನಲ್ಲಿ ಕೊನೆಗೊಂಡ ಯುದ್ಧದಲ್ಲಿ ಸಾವಿರಾರು ಸೈನಿಕರು ಮತ್ತು ಅಮಾಯಕ ನಾಗರಿಕರು ಕೊಲ್ಲಲ್ಪಟ್ಟರು. ಕೆಲವು ಸೈನಿಕರನ್ನು ಸಹ ಚಿತ್ರಹಿಂಸೆಗೊಳಪಡಿಸಲಾಯಿತು. ಹಲವರನ್ನು ಗಲ್ಲಿಗೇರಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಲೋ ದಿನದ ಪರಿಕಲ್ಪನೆ ಬಗ್ಗೆ ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯ ಪಿಎಚ್‍ಡಿ ಪದವೀಧರ ಬ್ರಿಯಾನ್ ಮೆಕ್‍ಕಾಮ್ರ್ಯಾಕ್ ಮತ್ತು ಹಾರ್ವರ್ಡ್‍ನ ಪದವೀಧರ ಮೈಕೆಲ್ ಮೆಕ್‍ಕಾಮ್ರ್ಯಾಕ್ ಚಿಂತನೆ ಹರಿಸಿದರು. ಪರಸ್ಪರ ಹಲೋ ಹೇಳಿ ಮಾತನಾಡಿಸಿಕೊಂಡು ಶಾಂತಿ ಕಾಪಾಡುವದು ಅವರ ಉದ್ದೇಶವಾಗಿತ್ತು. 1973ರಲ್ಲಿ ಈ ದಿನವನ್ನು ಜಾರಿಗೆ ತರಲಾಯಿತು. ಇದರ ರಚನೆಯಾದ ಕಳೆದ 42 ವರ್ಷಗಳಲ್ಲಿ, 180 ದೇಶಗಳಲ್ಲಿ ವಿಶ್ವ ಹಲೋ ದಿನವನ್ನು ಆಚರಿಸಲಾಗುತ್ತಿದೆ.

ಹೇಗೆ ಆಚರಿಸುವುದು..?

ಈ ದಿನವನ್ನು ಆಚರಿಸುವದು ಕಷ್ಟವೇನಲ್ಲ., ಒಂದು ದಿನದಲ್ಲಿ ಎದುರಾಗುವ ಕನಿಷ್ಟ 10 ಜನರಿಗೆ ಹಲೋ ಹೇಳಿದರೆ ಸಾಕು ಅವರ ಮುಖದಲ್ಲೂ ನಗು ಬೀರಲಿದೆ. ಅಂದು ಯುದ್ಧದ ಸಂದರ್ಭದಲ್ಲಿ ರಚಿತವಾದ ಈ ದಿನ ಇಂದಿನ ದಿನಗಳಲ್ಲಿ ಪ್ರಸ್ತುತವೆನಿಸುತ್ತದೆ. ಪರಸ್ಪರ ಧ್ವೇಷ, ಘರ್ಷಣೆ, ಯುದ್ಧ, ವೈರತ್ವದ ನಡುವೆ ಭಂiÀiದ ವಾತಾವರಣದಲ್ಲಿ ಬದುಕು ಸಾಗಿಸುತ್ತಿರುವ ಈ ಕಾಲದಲ್ಲಿ ಪರಸ್ಪರ ಮುಖ ನೋಡಿ ಮಾತನಾಡುವದೇ ಕಡಿಮೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಕನಿಷ್ಟ ಒಂದು ‘ಹಲೋ..’ ಹೇಳಿದರೆ ನಾವು ಕಳೆದುಕೊಳ್ಳುವದೇನೂ ಇಲ್ಲವಲ್ಲ..!

ಶಾಂತಿ-ನೆಮ್ಮದಿಯ ಜೀವನ., ಉತ್ತಮ ಭವಿಷ್ಯಕ್ಕಾಗಿ ಜಾತಿ, ಧರ್ಮ., ಭೇದ ಮರೆತು ಎಲ್ಲರೂ ಒಂದು ‘ಹಲೋ..’ ಹೇಳುತ್ತಾ ಸಹೋದರತೆಯಿಂದ ಬಾಳುವೆ ನಡೆಸೋಣ ಅಲ್ಲವೇ..!?

- ಕುಡೆಕಲ್ ಸಂತೋಷ್