ವೀರಾಜಪೇಟೆ, ನ, 20 : ನಗರದ ಸುಂಕದಕಟ್ಟೆ ಮಲೆತಿರಿಕೆ ಬೆಟ್ಟದಲ್ಲಿ ಶ್ರೀ ಮುತ್ತಪ್ಪನ್ ಕಾವ್ ದೇವಾಲಯ ನಿರ್ಮಾಣ ಕಾಮಗಾರಿಗೆ ದಾನಿಗಳಾದ ಚುಪ್ಪ ನಾಗರಾಜ್ ಮತ್ತು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಭೂಮಿ ಪೂಜೆ ನೆರವೇರಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಹಾಗೂ ಸ್ಥಳೀಯರಾದ ಟಿ.ವಿ. ಅನಿಲ್ ಕುಮಾರ್ ಮಾತನಾಡಿ, ಸ್ಥಳೀಯ ಯುವಕರು ಹಾಗೂ ಗ್ರಾಮಸ್ಥರು ಸೇರಿ ದಾನಿಗಳ ಸಹಾಯದೊಂದಿಗೆ ದೇವಸ್ಥಾನದ ನಿರ್ಮಾಣ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ. ಎರಡು ವರ್ಷದೊಳಗೆ ನಿರ್ಮಾಣ ಕಾರ್ಯ ಮುಗಿಸಲು ತೀರ್ಮಾನಿಸಲಾಗಿದೆ. ಸರ್ವರ ಸಹಕಾರ ಮುಖ್ಯ ಎಂದರು. ಈ ಸಂದರ್ಭ ಶ್ರೀ ಮುತ್ತಪ್ಪನ್ ಕಾವ್ ದೇವಸ್ಥಾನ ಆಡಳಿತ ಮಂಡಳಿಯ ಅರುಣ್, ಸಂತೋಷ್, ಸಂಪತ್, ಗೋಪಾಲಕೃಷ್ಣ, ಗಣೇಶ್, ರೂಪೇಶ್, ಅಭಿನವ್, ಪ್ರಶಾಂತ್, ವಿನೋದ್, ಸುನಿಲ್, ಯತೀಶ್, ಭರತ್, ಅಶೋಕ್, ಪ್ರಕಾಶ್, ಮಣಿಕಂಠ, ಶರವಣನ್, ಮುತ್ತಮ್ಮ, ಸುನಿತಾ, ಮಧುರ, ರುಕ್ಮಿಣಿ, ವೀಣಾ, ಶೃತಿ, ಶಿಲ್ಪಾ, ಯಶೋಧ, ನಿಶಾ, ಜ್ಯೋತಿ, ಇನ್ನಿತರರು ಹಾಗೂ ಸ್ಥಳೀಯರು ಹಾಜರಿದ್ದರು.