ಮಡಿಕೇರಿ, ನ. 20: ಜಮ್ಮಾ ವಿಧೇಯಕ ತಿದ್ದುಪಡಿ ಬದಲಾವಣೆ ವಿಚಾರವಾಗಿ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ ಕುರಿತು ವಿಧಾನ ಸಭಾ ಅಧಿವೇಶನದಲ್ಲಿ ರಚನೆಯಾಗಿರುವ ಪರಿ ಶೀಲನಾ ಸಮಿತಿಯ ಮತ್ತೊಂದು ಸಭೆ ಇಂದು ಬೆಂಗಳೂರಿನ ವಿಧಾನ ಸೌಧದ ಕೊಠಡಿಯಲ್ಲಿ ನಡೆಯಿತು.
ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಎ.ಎಸ್. ಪೆÇನ್ನಣ್ಣ ಅವರು ಭಾಗವಹಿಸಿದ್ದರು. ಸಭೆಯಲ್ಲಿ ಜಮ್ಮಾ ವಿಧೇಯಕ ತಿದ್ದುಪಡಿ ಬಗ್ಗೆ ಸುಧೀರ್ಘ ಚರ್ಚೆ ನಡೆದು ಜಮ್ಮಾ ಬಾಣೆಗೆ ಸಂಬಂಧಿಸಿದಂತೆ ಯಾವ ರೀತಿಯ ತಿದ್ದುಪಡಿ ಮಾಡಬೇಕು ಎಂಬ ಕರಡನ್ನು ಸಿದ್ಧಪಡಿಸಲಾಯಿತು.ತಿದ್ದುಪಡಿ ಆದ ಬಳಿಕ ಅದನ್ನು ಮುಂದಿನ ಬೆಳಗಾವಿ ಅಧಿವೇಶನದ ಮುಂದಿಡಲು ತೀರ್ಮಾನಿಸಲಾಗಿದ್ದು ಅಧಿವೇಶನದಲ್ಲಿ ತಿದ್ದುಪಡಿ ಬಗ್ಗೆ ಚರ್ಚೆಯಾಗಿ ಅದು ಜಾರಿಗೆ ಬರುವ ವಿಶ್ವಾಸವಿದೆ ಎಂದು ಎ.ಎಸ್.ಪೆÇನ್ನಣ್ಣ ತಿಳಿಸಿದ್ದಾರೆ. ಸಭೆಯಲ್ಲಿ ಸಮಿತಿಯ ಸದಸ್ಯರುಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.