ಸೋಮವಾರಪೇಟೆ, ನ. ೧೯: ಅರೆಭಾಷೆ ಗೌಡ ಸಮಾಜದ ವತಿಯಿಂದ ಸಮೀಪದ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಸಂತೋಷ ಕೂಟ ಕಾರ್ಯಕ್ರಮ ನಡೆಯಿತು. ಸಮಾಜದ ಅಧ್ಯಕ್ಷ ದಂಡಿನ ಉತ್ತಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಸೋಮವಾರಪೇಟೆಯ ವಿವಿಧ ಭಾಗಗಳಲ್ಲಿ ನೆಲೆಸಿರುವ ಅರೆಭಾಷೆ ಗೌಡ ಸಮುದಾಯವರು ಸಂಭ್ರಮದಿAದ ಭಾಗಿಯಾಗಿದ್ದರು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಓಟ ಸ್ಪರ್ಧೆ, ಪುರುಷರು-ಮಹಿಳೆಯರಿಗೆ ಹಗ್ಗ ಜಗ್ಗಾಟ ಸೇರಿದಂಯೆ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಶಾಲಾ ವ್ಯವಸ್ಥಾಪಕ ಮೂಡಗದ್ದೆ ಲಿಖಿತ್ ದಾಮೋದರ್, ಅಜಿರಂಗಲ ರಾಮಣ್ಣ ಅವರುಗಳು ಭಾಗಿಯಾಗಿದ್ದರು. ಎಂ.ಎಸ್. ಇಎನ್‌ಟಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ ಡಾ.ಮೋನಿಶ್ ಉತ್ತಯ್ಯ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಮಾಜಿ ಅಧ್ಯಕ್ಷ ಸೂದನ ಸೋಮಣ್ಣ, ಕಾರ್ಯದರ್ಶಿ ನಂಗಾರು ಟಿ. ವಸಂತ, ಉಪಾಧ್ಯಕ್ಷ ಮುಕ್ಕಾಟಿ ಚಂಗಪ್ಪ, ಖಜಾಂಚಿ ಕುದುಕುಳಿ ಗಜೇಂದ್ರ, ಸದಸ್ಯರಾದ ಕುದುಕುಳಿ ಚಂದ್ರಕಲಾ ಭೋಜರಾಜ್, ಚಿಲ್ಲನ ನಂದ, ಅಂಬ್ರಟಿ ಭಾಸ್ಕರ, ಕುದುಕುಳಿ ಭೋಜರಾಜ್, ಸುಳ್ಳೆಕೋಡಿ ವಿನೋದ್, ಕುಟ್ಟನ ಅನಿಲ್, ನಂಗಾರು ಚಂದ್ರಕುಮಾರ್, ಕೆನೆರ ಜಗದೀಶ್, ಮೂಲೆಮಜಲು ಪೂರ್ಣಿಮಾ ಸೇರಿದಂತೆ ಇತರರು ಇದ್ದರು.