ಮಡಿಕೇರಿ, ನ. ೧೯: ಕೊಡಗು ವಿದ್ಯಾಲಯದ ಯೂತ್ ಕ್ಲಬ್ ವತಿಯಿದ ಸಾಲು ಮರದ ತಿಮ್ಮಕ್ಕ ಅವರ ಸ್ಮರಣಾರ್ಥವಾಗಿ ನಗರದ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಅರ್ಥಪೂರ್ಣವಾಗಿ ವೃಕ್ಷಾ ರೋಪಣಾ ಜರುಗಿತು.
ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ರವಿ ಪಿ, ಕ್ಲಬ್ ಉಸ್ತುವಾರಿ ಶಿಕ್ಷಕರು ಹಾಗೂ ಡಿಆರ್‌ಎಫ್‌ಒ ಸುನಿಲ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ತಿಮ್ಮಕ್ಕ ಅವರು ಜೀವನಪರ್ಯಂತ ಮರಗಳನ್ನು ನೆಟ್ಟು ಪೋಷಿಸಿದ ಮಹತ್ತರ ಸೇವೆಯನ್ನು ಸ್ಮರಿಸುವುದರೊಂದಿಗೆ, ಪರಿಸರ ಸಂರಕ್ಷಣೆಯ ಜವಾಬ್ದಾರಿ, ಪ್ರಕೃತಿಯ ಮೌಲ್ಯಗಳನ್ನು ಸಾರಿ ಹೇಳಿದು.
ವಿದ್ಯಾರ್ಥಿಗಳು ಉದ್ಯಾನವನದಲ್ಲಿ ಸಸಿಗಳನ್ನು ಉತ್ಸಾಹದಿಂದ ನೆಟ್ಟರು. ಜೊತೆಗೆ, ಶಾಲಾ ಆವರಣದಲ್ಲೂ ಮತ್ತೊಂದು ಸಸಿಯನ್ನು ಸಾಲು ಮರದ ತಿಮ್ಮಕ್ಕ ಸ್ಮರಣೆಯಲ್ಲಿ ನೆಡುವ ಮೂಲಕ ಹಸಿರು ಮತ್ತು ಆರೋಗ್ಯಕರ ಪರಿಸರ ನಿರ್ಮಾಣದತ್ತ ಸಂಸ್ಥೆಯ ಬದ್ಧತೆಯನ್ನು ಸ್ಪಷ್ಟಪಡಿಸಿದರು.
ಜೂನ್ ೫ ರಂದು ನೆಡಲಾದ ಸಸಿಗಳ ಸಂರಕ್ಷಣೆಯ ಭಾಗವಾಗಿ, ವಿದ್ಯಾರ್ಥಿಗಳು ಉದ್ಯಾನವನ ವ್ಯಾಪ್ತಿಯನ್ನು ಸ್ವಚ್ಛಗೊಳಿಸಿ ಸಂರಕ್ಷಣೆ ಕೈಗೊಂಡರು