ಕಣಿವೆ, ನ. ೧೯: ಪ್ರವಾಸಕ್ಕೆಂದು ಹೊರ ರಾಜ್ಯಗಳಿಂದ ಕುಶಾಲನಗರಕ್ಕೆ ಆಗಮಿಸುವ ಖಾಸಗಿ ಬಸ್ಸುಗಳಲ್ಲಿ ಅತಿಯಾದ ಡಿಜೆ ಶಬ್ದ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕುಣಿದು ಕುಪ್ಪಳಿಸಿ ಶಾಂತಿ ಭಂಗ ಮಾಡುವ ಪ್ರವಾಸಿಗರ ವಿರುದ್ಧ ಕಠಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕೊಡಗು ಅಭಿವೃದ್ದಿ ಸಮಿತಿ ವಾಟ್ಸಾö್ಯಪ್ ಗ್ರೂಪ್ ತಂಡ ಮಡಿಕೇರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಿತು.
ಕುಶಾಲನಗರ, ಕುಟ್ಟ ಹಾಗೂ ಪೆರುಂಬಾಡಿಗಳಲ್ಲಿ ಆರ್.ಟಿ.ಓ ಚೆಕ್‌ಪೋಸ್ಟ್ ತೆರೆಯಬೇಕು. ಹೊರ ರಾಜ್ಯಗಳಿಂದ ಆಗಮಿಸುವ ಬಸ್‌ಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರಿ ಕಿರಿ ಹಾಗೂ ಶಬ್ದ ಮಾಲಿನ್ಯ ತಡೆಗಟ್ಟಬೇಕೆಂದು ನಿಯೋಗದಲ್ಲಿದ್ದ ಸದಸ್ಯರು ಆಗ್ರಹಿಸಿದರು. ಸಮಸ್ಯೆಗಳ ಬಗ್ಗೆ ಈಗಾಗಲೇ ಮಾಹಿತಿ ಲಭ್ಯವಾಗಿದ್ದು, ಕೂಡಲೇ ಅಂತಹ ಬಸ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗಿದೆ. ಈಗಾಗಲೇ ಕಳೆದ ಅಕ್ಟೋಬರ್ ತಿಂಗಳಿAದ ನವೆಂಬರ್ ೧೪ ರವರೆಗೆ ೧.೨೩ ಕೋಟಿ ತೆರಿಗೆ ಹಣ ಸಂಗ್ರಹಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಟಿ. ಸತೀಶ್ ತಿಳಿಸಿದರು. ಈ ಸಂದರ್ಭ ಪ್ರಮುಖರಾದ ಪ್ರಸನ್ನಭಟ್, ಲವಕುಮಾರ್, ಸಂದೀಪ್, ವಿನೋದ್ ಹಾಗೂ ದಾವುದ್ ಇದ್ದರು.