ಮಡಿಕೇರಿ, ನ. ೧೯ : ದುರಭ್ಯಾಸಗಳನ್ನು ಬಿಡಲು ದೃಢನಿಶ್ಚಯ ಅಗತ್ಯ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಂಜಯ್ ಜತ್ತಿ ಹೇಳಿದರು.

ರಾಷ್ಟಿçÃಯ ಅಪಸ್ಮಾರ (ಮೂರ್ಛೆರೋಗ) ದಿನಾಚರಣೆ ೨೦೨೫ ರ ಅಂಗವಾಗಿ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗು ಬೋಧಕ ಆಸ್ಪತ್ರೆ ಹಾಗೂ ಕೊಡಗು ಜಿಲ್ಲೆಯ ಕರ್ನಾಟಕ ಮಿದುಳಿನ ಆರೋಗ್ಯ ಉಪಕ್ರಮದ ವತಿಯಿಂದ ನಡೆದ ಅಪಸ್ಮಾರ ಅಥವಾ ಮೂರ್ಛೆರೋಗ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗ ಜೈಲಿನಲ್ಲಿರುವಾಗ ಯಾವುದೇ ದುರಭ್ಯಾಸ ಇಲ್ಲದೇ ಇದ್ದೀರಿ. ಇಲ್ಲಿಂದ ಬಿಡುಗಡೆಯಾದ ನಂತರವೂ ಇದೇ ರೀತಿ ದುರಭ್ಯಾಸ ಇಲ್ಲದೇ ಇದ್ದರೆ ಆರೋಗ್ಯಕರ ಜೀವನ ನಡೆಸಬಹುದು. ನಾವು ಭಾಷಣ ಮಾಡಿ ತೆರಳುತ್ತೇವೆ. ಆದರೆ, ದುರಭ್ಯಾಸ ಬಿಡಬೇಕು ಎನ್ನುವ ದೃಢನಿರ್ಧಾರವನ್ನು ನೀವು ಕೈಗೊಳ್ಳಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಾಂತಿ, ಅಪಸ್ಮಾರವು ಅನುವಂಶಿಯತೆ ಹಾಗೂ ಅನಾರೋಗ್ಯಕರ ಜೀವನಶೈಲಿಯಿಂದ ಬರುತ್ತದೆ. ಹೀಗಾಗಿ, ಉತ್ತಮವಾದ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಹಾಗೂ ಅಂಗಾAಗ ದಾನದ ಬಗ್ಗೆಯೂ ಅವರು ಅರಿವು ಮೂಡಿಸಿದರು.

ನಂತರ ಮಾತನಾಡಿದ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಕೊಡಗು ಜಿಲ್ಲಾ ಸಂಯೋಜಕ ಆರ್.ವಿಕ್ರಮ್ ಅವರು, ಮೂರ್ಛೆ ರೋಗ ಬಂದ ವ್ಯಕ್ತಿಗೆ ಬಾಯಿಯಲ್ಲಿ ನೊರೆ ಬಂದಾಗ, ದೀರ್ಘವಾದ ಸ್ನಾಯು ಸೆಳೆತದಂತಹ ಲಕ್ಷಣಗಳು ಬಂದ ಕೂಡಲೇ ಮೌಢ್ಯಕ್ಕೆ ಒಳಗಾಗದೆ ಕೂಡಲೇ ಅವರಿಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿದರು.

ಕೊಡಗು ಜಿಲ್ಲಾ ಕೆಎಬಿಎಚ್‌ಐ ಸಿಬ್ಬಂದಿಯಾದ ವಾಕ್ ಮತ್ತು ಶ್ರವಣ ಚಿಕಿತ್ಸಕಿ ಎಸ್. ಕಾವ್ಯಶ್ರೀ, ಮನಃಶಾಸ್ತçಜ್ಞರಾದ ಎಚ್.ಎಸ್. ಶ್ರುತಿ ಹಾಗೂ ಭೌತ ಚಿಕಿತ್ಸಕರಾದ ಆಫತಾಬ್ ಆಲಂ ಅವರು ನರಸಂಬAಧಿತಕಾಯಿಲೆಗಳಾದ ಅಪಸ್ಮಾರ, ಮರೆವು, ತಲೆನೋವು ಹಾಗೂ ಪಾರ್ಶ್ವವಾಯು ಕಾಯಿಲೆಗಳ ಕುರಿತು ಸಭಿಕರಿಗೆ ಮಾಹಿತಿ ನೀಡಿದರು.