ಮದೆ, ನ. ೧೯: ಬೆಂಗಳೂರಿನಿAದ ಮಂಗಳೂರಿಗೆ ಕೋಕಾಕೋಲ ತಯಾರಿಸುವ ರಾಸಾಯನಿಕ ಸಾಗಿಸುತ್ತಿದ್ದ ಲಾರಿಯೊಂದು ಬ್ರೇಕ್ ವಿಫಲಗೊಂಡು ಜೋಡುಪಾಲದ ಅಬ್ಬಿಕೊಲ್ಲಿ ಬಳಿ ಮಗುಚಿಕೊಂಡಿದ್ದು ಬೆಂಕಿ ಹೊತ್ತಿಕೊಂಡಿದೆ.

ತಕ್ಷಣ ಸಾರ್ವಜನಿಕರ ಸಹಾಯದಿಂದ ಪೈಪ್ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿ ಹತೋಟಿಗೆ ಬಾರದ ಕಾರಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಮೇಲೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದು ಭಾರೀ ಅನಾಹುತ ತಪ್ಪಿದಂತಾಗಿದೆ.