ಪೊನ್ನಂಪೇಟೆ, ನ. ೧೯: ಪೊನ್ನಂಪೇಟೆಯ ಕಾರು ನಿಲ್ದಾಣದ ಬಳಿ ಹಾಗೂ ರಾಮಕೃಷ್ಣ ಆಶ್ರಮದ ಮುಂಭಾಗ ಮುಖ್ಯ ರಸ್ತೆಯ ಗುಂಡಿಯನ್ನು ಜಲ್ಲಿಕಲ್ಲು ಹಾಗೂ ಸಿಮೆಂಟ್ ಹಾಕಿ ಮುಚ್ಚುವ ಮೂಲಕ ಪೊನ್ನಂಪೇಟೆಯ ಶ್ರೀ ಭಗವತಿ ಸ್ನೇಹಿತರ ಬಳಗ ಶ್ರಮದಾನದಲ್ಲಿ ತೊಡಗಿಸಿಕೊಂಡಿದ್ದರು.

ರಸ್ತೆಯಲ್ಲಿನ ಗುಂಡಿ ದೊಡ್ಡದಾಗಿ ಅಪಘಾತ ಸಂಭವಿಸುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಶ್ರೀ ಭಗವತಿ ಸ್ನೇಹಿತರ ಬಳಗದ ಸದಸ್ಯರು ತಾವೇ ಹಣ ವ್ಯಯಿಸಿ ಗುಂಡಿ ಮುಚ್ಚುವ ಕಾರ್ಯ ನಿರ್ವಹಿಸಿದ್ದು ಇವರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತವಾಗಿದೆ.