ಕೂಡಿಗೆ, ನ. ೧೮ : ಗೊಂದಿಬಸವನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಸಾಲಿನ ನಿರ್ದೇಶಕರ ಅವಿರೋಧ ಆಯ್ಕೆ ನಡೆಯಿತು.
ಮುಂದಿನ ೫ ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ತಾ.೨೨ ಕ್ಕೆ ಚುನಾವಣೆ ನಿಗದಿಯಾಗಿತ್ತು. ೧೩ ಮಂದಿ ನಿರ್ದೇಶಕರ ಸ್ಥಾನಕ್ಕೆ ೧೨ ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದವು. ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಉಳಿದ ೧೨ ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿರುವ ಬಗ್ಗೆ ಚುನಾವಣಾಧಿಕಾರಿ ಆಶಾ ಘೋಷಣೆ ಮಾಡಿದರು. ನಿಕಟಪೂರ್ವ ಅಧ್ಯಕ್ಷ ಮಧುಕುಮಾರ್ ನೇತೃತ್ವದಲ್ಲಿ ನೂತನ ಸಾಲಿನ ನಿರ್ದೇಶಕರಾಗಿ ಶಿವಕುಮಾರ್, ಸೋಮಣ್ಣ, ಪ್ರಸನ್ನ, ದಿವಾಕರ, ಕಾಮಾಕ್ಷಿ, ಉಷಾ, ಪ್ರದೀಪ, ನವೀನ, ಲಕ್ಷö್ಮಣನಾಯಕ, ರಾಮೇಗೌಡ, ತಿಮ್ಮಪ್ಪ ಆಯ್ಕೆಯಾದರು. ಈ ಸಂದರ್ಭ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಚುನಾವಣೆ ಸಂದರ್ಭ ಡೈರಿ ಕಾರ್ಯದರ್ಶಿ ಶ್ರೀನಿವಾಸ ಸೇರಿದಂತೆ ಗ್ರಾಮಸ್ಥರಾದ ಮಹಮ್ಮದ್ ಇಬ್ರಾಹಿಂ ಟಿಲ್ಲು, ಗಿರೀಶ್ ಎಂ.ಪಿ, ದಿಲೀಪ್ ಕುಮಾರ್, ಪುನಿತ್, ಸತೀಶ್ ಮತ್ತಿತರರು ಇದ್ದರು.