ಮಡಿಕೇರಿ, ನ. ೧೮: ಸಾಮಾಜಿಕ ಜಾಲತಾಣ ಹಾಗೂ ವಾಟ್ಸಾö್ಯಪ್ ಗ್ರೂಪ್ಗಳಲ್ಲಿ ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳ ಬಗ್ಗೆ ಅವಹೇಳನಕಾರಿಯಾದ ಬರಹದ ಮೂಲಕ ನಿಂದಿಸಿದ್ದಾರೆ ಎಂಬ ಆರೋಪದಂತೆ ಬಿಜೆಪಿಯಿಂದ ತೆನ್ನಿರ ಮೈನಾ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಕೆಲದಿನಗಳ ಹಿಂದೆ ಮೈನಾ ಅವರು ಸುದ್ದಿ ಹರಿಯಬಿಟ್ಟಿದ್ದಾರೆ. ಈ ಹಿಂದೆಯೂ ಇವರು ಇಂತಹ ಕೃತ್ಯ ಮಾಡಿದ್ದು, ಸಮಾಜದಲ್ಲಿ ಅಶಾಂತಿ ಮೂಡಿಸಲು ಕಾರಣರಾಗಿದ್ದು, ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಿಜೆಪಿ ಜಿಲ್ಲಾ ಖಜಾಂಚಿ ಕನ್ನಂಡ ಸಂಪತ್ ಅವರು ಈ ಬಗ್ಗೆ ಎಸ್ಪಿಗೆ ದೂರು ನೀಡಿದ್ದಾರೆ. ಈ ಸಂದರ್ಭ ಇವರೊಂದಿಗೆ ಬಿಜೆಪಿ ನಗರ ಅಧ್ಯಕ್ಷ ಉಮೇಶ್ ಸುಬ್ರಮಣಿ, ಮಹಿಳಾ ಅಧ್ಯಕ್ಷೆ ಸೌಮ್ಯ ಸುನಿಲ್, ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಹಾಜರಿದ್ದರು.
ವೀರಾಜಪೇಟೆ
ಇದೇ ವಿಷಯದ ಕುರಿತು ವೀರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪುಕಾರು ನೀಡಲಾಗಿದೆ.
ಈ ಹಿಂದೆ ಕೂಡ ಸಾಮಾಜಿಕ ಜಾಲತಾಣದ ಮುಖ್ಯಸ್ಥರ ಮೇಲೆ ಆರೋಪ ಹೊರಿಸಿ ಅವರು ಆತ್ಮಹತ್ಯೆಗೆ ಕಾರಣರಾಗಿದ್ದರು. ಮತ್ತೆ ಈ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಬಿಜೆಪಿ ಎಸ್.ಸಿ. ಮೋರ್ಚದ ವೀರಾಜಪೇಟೆ ಮಂಡಲದ ಅಧ್ಯಕ್ಷ ಅಭಿಜಿತ್ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವೀರಾಜಪೇಟೆ ಮಂಡಲದ ಅಧ್ಯಕ್ಷ ಸುವಿನ್ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್, ವೀರಾಜಪೇಟೆ ನಗರದ ಮಾಜಿ ಅದ್ಯಕ್ಷ ಸಚ್ಚಿನ್ ಕುಟ್ಟಯ್ಯ, ಒ.ಬಿ.ಸಿ. ಮೋರ್ಚಾದ ಅಧ್ಯಕ್ಷ ಸುರೇಶ್, ಮುತ್ತಪ್ಪನ್ ಮಲೆಯಾಳಂ ಸಂಘದ ಅಧ್ಯಕ್ಷ ಸುಮೇಶ್, ಬಿಜೆಪಿ ಕಾರ್ಯಕರ್ತರಾದ ಸಾಯಿನಾಥ್ ನಾಯ್ಕ, ಮಹೇಶ್, ಉನ್ನಿ, ಸ್ನೇಕ್ ಸತೀಶ್, ಕಿರಣ್, ವಿಜಯ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.