ಮಡಿಕೇರಿ, ನ. ೧೮: ಭಾಗಮಂಡಲದ ಜಾನ್ ಡ್ಯಾನ್ಸ್ ಗ್ಯಾಲರಿ ನೃತ್ಯ ತರಬೇತಿ ಸಂಸ್ಥೆ ಮತ್ತು ಚೈನೀಸ್ ಕೆನ್ ಪೊ ಕರಾಟೆ ಸಂಸ್ಥೆಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭಾಗಮಂಡಲದಲ್ಲಿ ಕನ್ನಡ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಕಿರುಭಾಷಣ ಸ್ಪರ್ಧೆಯಲ್ಲಿ ಜಿತಿಕಾ ಹೆಚ್.ಎಂ., ಸ್ಪರ್ಷ ಹೆಚ್.ಜಿ., ವಿದ್ಯಾ ಎಂ.ಪಿ., ಡಿಂಪಾ ಎಂ.ಡಿ., ಜೆಶಿಕಾ ಪಿ.ಬಿ. ಹಾಗೂ ಜನ್ಯ ಬಿ.ಸಿ. ಕನ್ನಡ ನಾಡು-ನುಡಿಯ ಬಗ್ಗೆ ಭಾಷಣವನ್ನು ಪ್ರಸ್ತುತಪಡಿಸಿ ಬಹುಮಾನ ಪಡೆದರು.

ಜಾನ್ ಡ್ಯಾನ್ಸ್ ಗ್ಯಾಲರಿ ಸಂಸ್ಥೆಯ ವಿದ್ಯಾರ್ಥಿಗಳು ನೃತ್ಯದ ಮೂಲಕ ಕನ್ನಡ ನಾಡಿನ ವರ್ಣನೆಯನ್ನು ಮಾಡಿದರು.

ನೃತ್ಯ ಮತ್ತು ಕರಾಟೆ ತರಬೇತುದಾರರಾದ ಪೃಥ್ವಿ ನಾಯಕ್, ಬೃಂದಾ ಕವನ್, ಇಮ್ಯಾನ್ವುಲ್ ಕೆ.ಜೆ., ರಾಯ್ ಜೋಸೆಫ್ ಹಾಗೂ ನಾಗರಾಜ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.