ಕಾಯಪಂಡ ಶಶಿ ಸೋಮಯ್ಯ
ಮಡಿಕೇರಿ, ನ. ೧೮: ವಿವಿಧ ಕ್ರೀಡೆಗಳ ಜತೆಗೆ ಕೊಡಗು ಜಿಲ್ಲೆಯಲ್ಲಿ ಈ ಹಿಂದೊಮ್ಮೆ ಸಂಚಲನ ಸೃಷ್ಟಿಸಿದ್ದ ರೋಲರ್ ಸ್ಕೇಟಿಂಗ್ ಕ್ರೀಡೆ ನಂತರದಲ್ಲಿ ಒಂದು ರೀತಿಯಲ್ಲಿ ಜಿಲ್ಲೆಯಿಂದ ಮರೆಯಾದಂತಾಗಿತ್ತು. ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕಚೇರಿಯ ಎದುರು ಭಾಗದಲ್ಲಿ ಸುಮಾರು ಎರಡು ದಶಕಗಳ ಹಿಂದೆ ಕೆಲವು ಕ್ರೀಡಾಸಕ್ತರು ಸೇರಿ ಕೊಡಗು ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಎಂಬ ಸಂಸ್ಥೆಯೊAದನ್ನು ಹುಟ್ಟುಹಾಕಿ ರೋಲರ್ ಸ್ಕೇಟಿಂಗ್ ರಿಂಕ್ ಅನ್ನು ನಿರ್ಮಿಸುವ ಮೂಲಕ ಕ್ರೀಡೆಯನ್ನು ಪ್ರೋತ್ಸಾಹಿಸುವ ಸಾಹಸಕ್ಕೆ ಇಳಿದಿದ್ದರು. ಈ ಪ್ರಯತ್ನ ಆ ಸಂದರ್ಭದಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿತ್ತು. ಈ ರಿಂಕ್ನಲ್ಲಿ ದಿನಂಪ್ರತಿ ಸ್ಕೇಟಿಂಗ್ ಕ್ರೀಡೆಯಲ್ಲಿ ಪುಟ್ಟ ಮಕ್ಕಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದರಲ್ಲದೆ, ಪೋಷಕರೂ ಉತ್ತೇಜನ ನೀಡುತ್ತಿದ್ದರು. ಈ ಕ್ರೀಡೆಯಲ್ಲಿ ಹಲವಷ್ಟು ಮಕ್ಕಳು ರಾಜ್ಯ-ರಾಷ್ಟçಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದರು. ಆದರೆ ಕೆಲವು ವರ್ಷಗಳ ಕಾಲ ಕ್ರಿಯಾಶೀಲವಾಗಿ ಸಂಚಲನ ಮೂಡಿಸಿದ್ದ ರೋಲರ್ ಸ್ಕೇಟಿಂಗ್ ರಿಂಕ್ ಕಾರಣಾಂತರಗಳಿAದ ಕಾಡು ಪಾಲಾಗುತ್ತಾ ಬಂದಿತು. ಈ ರಿಂಕ್ನಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳು ಸ್ಥಗಿತಗೊಂಡು ಗರಬಡಿದಂತಾಗಿತ್ತಲ್ಲದೆ ಈ ರಿಂಕ್ನ ಉಸ್ತುವಾರಿಯನ್ನು ವಹಿಸಿದ್ದ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಕೂಡ ತಮ್ಮ ಉಸ್ತುವಾರಿಯಲ್ಲಿದ್ದ ಈ ರಿಂಕ್ ಅನ್ನು ಜಿಲ್ಲಾಡಳಿತಕ್ಕೆ ಪತ್ರ ಬರೆದು ಮರು ಹಸ್ತಾಂತರ ಮಾಡಿದ್ದರು.
ಇದಾದ ಬಳಿಕ ಕಳೆದ ಸುಮಾರು ೧೨ ವರ್ಷಗಳಿಂದ ಈ ಸ್ಕೇಟಿಂಗ್ ರಿಂಕ್ನಲ್ಲಿ ಯಾವುದೇ ಚಟುವಟಿಕೆಗಳು ನಡೆಯದೆ ಬಹುತೇಕ ಕಾಡು ಪಾಲಾದಂತಾಗಿತ್ತು. ನಡುನಡುವೆ ಕ್ರೀಡಾ ಇಲಾಖೆ ಈ ಜಾಗವನ್ನು ಕಾಡು ಕಡಿದು ಸ್ವಚ್ಛ ಮಾಡಿದರೂ ಬಳಕೆಯಾಗದ ಕಾರಣದಿಂದ ಮತ್ತೆ ಕಾಡು ಆವರಿಸುತ್ತಿತ್ತು.
ಭಾನುವಾರ ಕಂಡುಬAದ ಕಲರವ
ಇದೀಗ ಅಪರೂಪಕ್ಕೆ ಎಂಬAತೆ ಭಾನುವಾರ ಈ ಸ್ಕೇಟಿಂಗ್ ರಿಂಕ್ನಲ್ಲಿ ಚಿಣ್ಣರ ಕಲರವ ಕಂಡುಬAದಿತು. ಕುಶಾಲನಗರದವರಾದ ಅಲ್ಲಿನ ಕೆಲವು ಶಾಲಾ ಮಕ್ಕಳಿಗೆ ಸ್ಕೇಟಿಂಗ್ ೪ಏಳನೇ ಪುಟಕ್ಕೆ (ಮೊದಲ ಪುಟದಿಂದ)ತರಬೇತಿಯೊAದಿಗೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯವರಾದ ಕೆ.ಎಚ್. ಚಾಂದಿನಿ ಅವರ ಉತ್ಸುಕತೆ ಆಸಕ್ತಿಯ ಫಲವಾಗಿ ಈ ರಿಂಕ್ನಲ್ಲಿ ಹಲವು ವರ್ಷಗಳ ಬಳಿಕ ರೋಲರ್ ಸ್ಕೇಟಿಂಗ್ ಸ್ಪರ್ಧೆ ಆಯೋಜಿತಗೊಂಡಿತ್ತು. ಇವರು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅನುಮತಿ ಪಡೆದು ಡಿವಿಷನಲ್ ಲೆವಲ್ ರೋಲರ್ ಸ್ಕೇಟಿಂಗ್ ಸ್ಪರ್ಧೆ ಏರ್ಪಡಿಸಿದ್ದರು. ಇವರ ಮನವಿಗೆ ಇಲಾಖೆಯ ಅಧಿಕಾರಿ ವಿಸ್ಮಯಿ ಅವರು ಸ್ಪಂದಿಸಿ ರಿಂಕ್ ಅನ್ನು ಸಮರ್ಪಕಗೊಳಿಸಿ ಸಹಕಾರ ನೀಡಿದ್ದರು. ಇದರಂತೆ ನಡೆದ ಸ್ಪರ್ಧೆಯಲ್ಲಿ ಕೊಡಗು ಸೇರಿದಂತೆ ಮೈಸೂರು, ಹಾಸನದಿಂದ ಸುಮಾರು ೯೨ ಸ್ಪರ್ಧಿಗಳು ಆಗಮಿಸಿದ್ದರು.
೩ ರಿಂದ ೬ ವರ್ಷ, ೬ ರಿಂದ ೯, ೯ ರಿಂದ ೧೨ ಹಾಗೂ ೧೨ ರಿಂದ ೧೫ರ ವಯೋಮಿತಿಯಲ್ಲಿ ಟೆನ್ಸಿಟಿ, ಕ್ವಾಡ್, ರೀಕ್ರಿಯೇಷನಲ್ ಇನ್ಲೈನ್, ವಿಭಾಗದಲ್ಲಿ ಸ್ಪರ್ಧೆ ನಡೆಸಿ ವಿಜೇತರಿಗೆ ಪಾರಿತೋಷಕ, ಸರ್ಟಿಫಿಕೇಟ್ ನೀಡಲಾಯಿತು. ಆಯೋಜಕರಾದ ಚಾಂದ್ನಿ ಅವರೊಂದಿಗೆ ಮೈಸೂರು ಡೆಕತ್ಲಾನ್ ಕೋಚ್ ಅನಿಲ್, ಹಾಸನದ ರವಿ ಅವರುಗಳು ತಮ್ಮ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡು ಸಹಕರಿಸಿದರು. ಕುಶಾಲನಗರ ವಿಭಾಗದ ಉದ್ಗಮ್, ಜ್ಞಾನಗಂಗಾ, ಭಾರತ್ಮಾತಾ ಶಾಲೆ ಹಾಗೂ ಪಿರಿಯಾಪಟ್ಟಣದ ಇಬ್ಬರು ಮಕ್ಕಳು ಸೇರಿದಂತೆ ೫೦ ಸ್ಪರ್ಧಿಗಳು, ಮೈಸೂರಿನ ೨೦ ಹಾಗೂ ಹಾಸನದ ೨೨ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಸ್ಕೇಟಿಂಗ್ಪಟುಗಳು ಹಾಗೂ ಇವರ ಪೋಷಕರ ಉತ್ತೇಜನದ ನಡುವೆ ಹಲವು ವರ್ಷಗಳ ಬಳಿಕ ಸ್ಕೇಟಿಂಗ್ ರಿಂಕ್ನಲ್ಲಿ ಉತ್ಸಾಹದಾಯಕ ಚಟುವಟಿಕೆ ನಡೆದಿದ್ದು, ಹಲವು ಸಾರ್ವಜನಿಕರೂ ಪ್ರೇಕ್ಷಕರಾಗಿದ್ದರು. ಮುಂದೆಯೂ ಇದನ್ನು ಮುಂದುವರಿಸುವ ಚಿಂತನೆ ಇರುವುದಾಗಿ ಚಾಂದ್ನಿ ಅವರು ಹೇಳಿದ್ದಾರೆ.
೨೦೦೧ರಲ್ಲಿ ಜಿಲ್ಲೆಯಲ್ಲಿ ರೋಲರ್ ಸ್ಕೇಟಿಂಗ್ ಕ್ರೀಡೆಯನ್ನು ಆರಂಭಿಸಲಾಗಿತ್ತು. ಆ ಸಂದರ್ಭ ದಿ ಹಿಂದೂ ಪತ್ರಿಕೆಯ ವರದಿಗಾರರಾಗಿದ್ದ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಕೆಲ ಕ್ರೀಡಾಸಕ್ತರು ಸೇರಿ ಇದನ್ನು ಪ್ರಾರಂಭಿಸಿದ್ದರು. ಚೀಯಕಪೂವಂಡ ಟಾಟಾ ಮಾದಪ್ಪ ಉಪಾಧ್ಯಕ್ಷರಾಗಿದ್ದರು. ಆರಂಭದಲ್ಲಿ ಜೂನಿಯರ್ ಕಾಲೇಜು ಆವರಣದಲ್ಲಿರುವ ಫೀ.ಮಾ. ಕಾರ್ಯಪ್ಪ ಒಳಾಂಗಣ ಸಭಾಂಗಣದಲ್ಲಿ ಈ ಕ್ರೀಡೆಗೆ ಚಾಲನೆ ನೀಡಲಾಗಿತ್ತು. ಕೆಲವು ಮಕ್ಕಳಿಂದ ಆರಂಭಗೊAಡ ಕ್ರೀಡೆ ನಂತರದಲ್ಲಿ ಜನಪ್ರಿಯಗೊಂಡು ಸುಮಾರು ೧೦೦ಕ್ಕೂ ಅಧಿಕ ಮಕ್ಕಳು ಸೇರ್ಪಡೆಗೊಂಡರು. ಬೆಳಿಗ್ಗೆ-ಸಂಜೆ ತರಬೇತಿ ನೀಡಲಾಗುತ್ತಿತ್ತು. ಪೋಷಕರೂ ಬೆಂಬಲ ನೀಡುತ್ತಿದ್ದರು.
ಇದರ ಪರಿಣಾಮವಾಗಿ ನಡೆದ ಪ್ರಯತ್ನದ ಫಲವಾಗಿ ಇದಕ್ಕೆ ಪ್ರತ್ಯೇಕ ಜಾಗ ಲಭ್ಯವಾಗಿತ್ತು. ಆಗ ಜಿಲ್ಲಾಧಿಕಾರಿಯಾಗಿದ್ದ ಶ್ರೀಕಾಂತ್ ವಾಲಗದ್ ಅವರು ಫುಟ್ಬಾಲ್ ಮೈದಾನದ ಬಳಿಯ ಜಾಗವನ್ನು ಒದಗಿಸುವಲ್ಲಿ ನೆರವಾಗಿದ್ದರು. ಇದಕ್ಕೆ ರಾಜಕೀಯ ಪ್ರಮುಖರಾದ ಸುನಿಲ್ ಸುಬ್ರಮಣಿ, ಕೆ.ಜಿ. ಬೋಪಯ್ಯ ಅವರುಗಳೂ ಸಹಕಾರ ನೀಡಿದ್ದರು. ಸಂಸದರಾಗಿದ್ದ ಧನಂಜಯಕುಮಾರ್ ಅವರ ನಿಧಿಯಿಂದ ಸೇರಿದಂತೆ ದೇಣಿಗೆಯೂ ಸಂಗ್ರಹವಾಗಿ ಜಿಲ್ಲೆಯಲ್ಲೇ ಪ್ರಥಮವಾಗಿ ರೋಲರ್ ಸ್ಕೇಟಿಂಗ್ ರಿಂಕ್ ಸ್ಥಾಪನೆಗೊಂಡಿತ್ತು.
ಕೊಡಗು ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಎಂದು ಪ್ರಾರಂಭಿಸಲಾದ ಈ ಸಂಸ್ಥೆಯ ಮೂಲಕ ಇದು ನಿರ್ವಹಣೆಯಾಗುತ್ತಿತ್ತು. ಕೆಲ ಅಡೆ-ತಡೆಗಳು ಎದುರಾದರೂ ನಂತರ ಸಮಸ್ಯೆ ಮುಂದುವರಿಯಲಿಲ್ಲ. ಜಿಲ್ಲೆ, ರಾಜ್ಯ, ರಾಷ್ಟçದ ವಿವಿಧೆಡೆಗೆ ಸ್ಕೇಟಿಂಗ್ ಪಟುಗಳು ತೆರಳಿ ಸಾಧನೆ ತೋರಿದ್ದರು.
ಪ್ರಮುಖ ಕ್ರೀಡಾಕೂಟಗಳು
ಜಿಲ್ಲಾಮಟ್ಟದಲ್ಲಿನ ಸ್ಪರ್ಧೆಗಳೊಂದಿಗೆ ಇದೇ ಸ್ಕೇಟಿಂಗ್ ರಿಂಕ್ನಲ್ಲಿ ಅಖಿಲ ಭಾರತ ಆಹ್ವಾನಿತ ಪಂದ್ಯಾಟ, ರಾಜ್ಯಮಟ್ಟದ ಪಂದ್ಯಾವಳಿ ಕೂಡ ಈ ಸಂದರ್ಭದಲ್ಲಿ ಜರುಗಿತ್ತು. ಜಿಲ್ಲಾ ಸಂಸ್ಥೆಯ ಅಂಗ ಸಂಸ್ಥೆಗಳಾಗಿ ಕುಶಾಲನಗರ, ವೀರಾಜಪೇಟೆ, ಗೋಣಿಕೊಪ್ಪದಲ್ಲೂ ಸಂಸ್ಥೆಗಳು ರಚನೆಗೊಂಡಿದ್ದವು. ಇತರೆಡೆ ರಿಂಕ್ ಪ್ರತ್ಯೇಕವಾಗಿಲ್ಲದಿದ್ದರೂ, ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಮಕ್ಕಳು ತರಬೇತಿ ಪಡೆಯುತ್ತಿದ್ದರು. ಮಕ್ಕಂದೂರಿನವರಾದ ಕುಂಬುಗೌಡನ ಜಗದೀಪ್ ಅವರು ತರಬೇತುದಾರರಾಗಿ ಸಾಕಷ್ಟು ಮಕ್ಕಳಿಗೆ ತರಬೇತಿ ನೀಡುತ್ತಿದ್ದರು. ಬೇಸಿಗೆ ಶಿಬಿರಗಳೂ ನಡೆಯುತ್ತಿದ್ದವು.
ಜೀವನ್ ಚಿಣ್ಣಪ್ಪ ಅವರ ನಂತರ ಕನ್ನಂಡ ಸಾಬು ಕರುಂಬಯ್ಯ ಅವರು ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನಂತರದಲ್ಲಿ ೨೦೦೯ರ ಬಳಿಕ ಆ ಸಂದರ್ಭದಲ್ಲಿ ಇದ್ದ ಮಕ್ಕಳು ಇತರೆಡೆ ತೆರಳಿದ ನಂತರ ಈ ಕ್ರೀಡೆ ಮಾತ್ರವಲ್ಲ, ಸ್ಕೇಟಿಂಗ್, ರಿಂಕ್ ಕೂಡ ಅಧಃಪತನದತ್ತ ಸಾಗಿತು. ಕೆಲವೇ ಸಮಯದಲ್ಲಿ ಎಲ್ಲಾ ಚಟುವಟಿಕೆಗಳು ನಿಂತೇ ಹೋದವು. ಜಿಲ್ಲಾ ಸಂಸ್ಥೆ, ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ನ ಸಹಭಾಗಿತ್ವವನ್ನೂ ಹೊಂದಿತ್ತು.
ಮರು ಹಸ್ತಾಂತರ
ಸ್ಕೇಟಿAಗ್ ಚಟುವಟಿಕೆಗಳು ಮರೆಯಾದ ನಂತರ ೨೦೧೪ರ ಸಂದರ್ಭದಲ್ಲಿ ಜಿಲ್ಲಾ ರೋಲರ್ ಸ್ಕೇಟಿಂಗ್ ಸಂಸ್ಥೆಯವರು ಈ ಜಾಗವನ್ನು (ಸ್ಕೇಟಿಂಗ್ ರಿಂಕ್) ಸಹಿತವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯವರು ಸುಮಾರು ೧೦ ಲಕ್ಷ ವೆಚ್ಚದಲ್ಲಿ ಈ ಸ್ಕೇಟಿಂಗ್ ರಿಂಕ್ ಅನ್ನು ಸಜ್ಜುಗೊಳಿಸಿದ್ದರು.