ಆಂಧ್ರಪ್ರದೇಶ, ನ. ೧೮ : ಕುಖ್ಯಾತ ನಕ್ಸಲ್ ನಾಯಕ, ಹಲವು ಭದ್ರತಾ ಪಡೆಗಳ ಮೇಲಿನ ದಾಳಿಗಳ ರೂವಾರಿಯಾಗಿದ್ದ ಮಾದ್ವಿ ಹಿಡ್ಮಾ ಇಂದು ಬೆಳಗ್ಗಿನ ಜಾವ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ. ಈ ಘಟನೆಯು ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳ ತ್ರಿ-ಜಂಕ್ಷನ್ ಬಳಿ, ಹಲವಾರು ಮಾವೋವಾದಿ ಅಡಗುತಾಣಗಳನ್ನು ಹೊಂದಿರುವ ಸೂಕ್ಷö್ಮ ಪ್ರದೇಶದಲ್ಲಿ ನಡೆದಿದೆ.

ಉನ್ನತ ಮೂಲಗಳ ಪ್ರಕಾರ, ಭದ್ರತಾ ಪಡೆಗಳು ನಡೆಸಿದ ಈ ಮಹತ್ವದ ಕಾರ್ಯಾಚರಣೆಯಲ್ಲಿ ಹಿಡ್ಮಾ ಮತ್ತು ಆತನ ಪತ್ನಿ ರಾಜೆ ಅಲಿಯಾಸ್ ರಾಜಕ್ಕಾ ಸೇರಿ ಕನಿಷ್ಟ ಆರು ಬಂಡುಕೋರರ ಮೃತದೇಹಗಳು ಪತ್ತೆಯಾಗಿವೆ. ಪ್ರದೇಶದಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಹಿಡ್ಮಾ ೨೬ ಸಶಸ್ತç ದಾಳಿಗಳ ರೂವಾರಿಯಾಗಿದ್ದು, ೧೫೦ಕ್ಕೂ ಅಧಿಕ ಸೈನಿಕರ ಸಾವಿಗೆ ಕಾರಣನಾಗಿದ್ದ.

೧೯೮೧ರಲ್ಲಿ ಸುಕ್ಕಾದಲ್ಲಿ ಜನಿಸಿದ ಹಿಡ್ಮಾ ಕೇವಲ ೧೭ನೇ ವಯಸ್ಸಿನಲ್ಲಿ ಅಂದರೆ ೧೯೯೬ ರಲ್ಲಿ ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ.

ಈತ ‘ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ’ಯ ಬೆಟಾಲಿಯನ್ ಅನ್ನು ಮುನ್ನಡೆಸುತ್ತಿದ್ದ. ಸಿಪಿಐ (ಮಾವೋವಾದಿ)ಯ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕೇಂದ್ರ ಸಮಿತಿಯ ಏಕೈಕ ಬಸ್ತಾರ್ ಪ್ರದೇಶದ ಬುಡಕಟ್ಟು ಸದಸ್ಯನಾಗಿದ್ದ. ೨೦೨೧ರ ಏಪ್ರಿಲ್ ೩ ರಂದು ನಡೆದ ಬಿದಾಪುರ ಈ ದಾಳಿಯಲ್ಲಿ ೨೨ ಸೈನಿಕರು ಹುತಾತ್ಮರಾಗಿದ್ದರು.೨೦೧೭ ರ ಬುರ್ಕಪಾಲ್ ದಾಳಿ ಏಪ್ರಿಲ್ ೨೦೧೭ರಲ್ಲಿ ೨೪ ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮ ರಾಗಿದ್ದರು. ದಂತೇವಾಡ ದಾಳಿ ೭೬ ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದ ಈ ದಾಳಿಯಲ್ಲಿ ಹಿಡ್ಮಾ ಪ್ರಮುಖ ಪಾತ್ರ ವಹಿಸಿದ್ದ. ೪ಏಳನೇ ಪುಟಕ್ಕೆ (ಮೊದಲ ಪುಟದಿಂದ) `ಹಿದ್‌ಮಾಲು’ ಹಾಗೂ ‘ಸಂತೋಷ್ ಎಂದೂ ಕರೆಯಲ್ಪಡುತ್ತಿದ್ದ ಹಿಡ್ಮಾನನ್ನು ಹಿಡಿದುಕೊಟ್ಟವರಿಗೆ ೧ ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು.

ಈ ಎನ್‌ಕೌಂಟರ್ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಿಗೆ ಒಂದು ಪ್ರಮುಖ ತಿರುವು ನೀಡಿದೆ ಮತ್ತು ಆಂಧ್ರ-ತೆಲAಗಾಣ-ಛತ್ತೀಸ್‌ಗಢ ಗಡಿ ಪ್ರದೇಶದಲ್ಲಿ ನಕ್ಸಲ್ ಸಂಘಟನೆಗೆ ದೊಡ್ಡ ಹೊಡೆತ ನೀಡಿದೆ.