ಮಡಿಕೇರಿ, ನ. ೧೭: ವೀರಾಜಪೇಟೆ ತಾಲೂಕು ಕಂಡAಗಾಲ ಗ್ರಾಮದಲ್ಲಿ ಐನ್‌ಮನೆ ಹೊಂದಿರುವ ಮುಲ್ಲೇಂಗಡ ಕುಟುಂಬದ ವತಿಯಿಂದ ೨೦೨೬ರ ಏಪ್ರಿಲ್‌ನಲ್ಲಿ ಇದೇ ಮೊದಲ ಬಾರಿಗೆ ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆ ಹಮ್ಮಿಕೊಳ್ಳಲಾಗಿದೆ ಎಂದು ಮುಲ್ಲೇಂಗಡ ಕಬಡ್ಡಿ ನಮ್ಮೆಯ ಸಂಚಾಲಕ ಮುಲ್ಲೇಂಗಡ ಮಧೋಷ್ ಪೂವಯ್ಯ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಏಪ್ರಿಲ್ ೨, ೩ ಮತ್ತು ೪ ರಂದು ಕಂಡAಗಾಲ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ಕೊಡವ ಕುಟುಂಬಗಳ ನಡುವೆ ನಡೆಯುವ ಈ ಪಂದ್ಯಾಟದಲ್ಲಿ ೭+೩ ಆಟಗಾರರು ಒಂದು ತಂಡದAತೆ ಭಾಗವಹಿಸಬಹುದಾಗಿದೆ. ಕರ್ನಾಟಕ ಕಬಡ್ಡಿ ಫೆಡರೇಷನ್ ನಿಯಮಾವಳಿಯಂತೆ ನಡೆಯುವ ಈ ಮ್ಯಾಟ್ ಕಬಡ್ಡಿಯಲ್ಲಿ ನೋಂದಾಯಿತ ಕಬಡ್ಡಿ ತೀರ್ಪುಗಾರರು ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನಾಕೌಟ್ ಮಾದರಿಯಲ್ಲಿ ಪಂದ್ಯ ನಡೆಯಲಿದ್ದು, ಮೊದಲ ಬಹುಮಾನವಾಗಿ ರೂ. ೩೦ ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. ೨೦ ಸಾವಿರ ನಗದು, ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ.

ಹೆಚ್ಚಿನ ವಿವರಗಳಿಗೆ ಮೊ. ೯೪೮೦೫೫೬೬೬೭ ದೂರವಾಣಿಯನ್ನು ಸಂಪರ್ಕಿಸಬಹುದು. ಪಂದ್ಯಾಟಕ್ಕೆ ಹೆಸರು ನೋಂದಾಯಿಸಲು ಮಾರ್ಚ್ ೧೦ ಕೊನೆಯ ದಿನಾಂಕವಾಗಿದೆ ಎಂದು ಮಧೋಷ್ ಪೂವಯ್ಯ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಮುಲ್ಲೇಂಗಡ ಕುಟುಂಬದ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಕಾರ್ಯದರ್ಶಿ ಮುಲ್ಲೇಂಗಡ ಕಿಟ್ಟು ಕುಟ್ಟಪ್ಪ, ನಿರ್ದೇಶಕರಾದ ಮುಲ್ಲೇಂಗಡ ರಘು ದೇವಯ್ಯ, ಮುಲ್ಲೇಂಗಡ ಸುರೇಶ್ ಭೀಮಯ್ಯ ಉಪಸ್ಥಿತರಿದ್ದರು.