ಕುಶಾಲನಗರ, ನ. ೧೭: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ನವಜೀವನ ಸಮಿತಿ ಪೋಷಕರ ಸಭೆ ನಡೆಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ ಬಾದಾಮಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸಮಾಜದ ಸ್ವಾಸ್ಥö್ಯ ಕಾಪಾಡಲು ವ್ಯಸನ ಮುಕ್ತ ಸಮಾಜ ನಿರ್ಮಾಣ ಅದರ ಅನುಪಾಲನೆಯನ್ನು ಯೋಜನೆಯ ಸೇವಾ ಪ್ರತಿನಿಧಿಗಳು ಮಾಡುತ್ತಿದ್ದು ಇದೊಂದು ಪ್ರಾಮಾಣಿಕ ಹಾಗೂ ದೇವರು ಮೆಚ್ಚುವ ಕಾರ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇಂತಹ ಚಟುವಟಿಕೆಗಳಲ್ಲಿ ತೊಡಗಿದ ಕ್ಷೇತ್ರ ಯೋಜನೆಯ ಸದಸ್ಯರ ಸಾಧನೆಯ ಬಗ್ಗೆ ಅಭಿನಂದಿಸಿದರು. ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಅವರು ಮಾತನಾಡಿ ಮಾತೃಶ್ರೀ ಹೇಮಾವತಿ ಹೆಗಡೆ ಅವರ ಕನಸಾದ ಮದ್ಯ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಯೋಜನೆಯ ಗುರಿ ಬಗ್ಗೆ ಮಾಹಿತಿ ನೀಡಿದರು. ಮದ್ಯವರ್ಜನ ಶಿಬಿರ ನಂತರ ಕಾರ್ಯಕ್ರಮ ಅನುಪಾಲನೆ ಮಾಡುವುದು ಜವಾಬ್ದಾರಿಯಾಗಿದೆ ಎಂದರು.ಕರಾವಳಿ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಗಣೇಶ ಆಚಾರ್ಯ ಮಾತನಾಡಿ ವಲಯಕ್ಕೆ ಒಂದು ನವಜೀವನ ಸಮಿತಿಗಳ ರಚನೆ. ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ನವಜೀವನೋತ್ಸವ ಕಾರ್ಯಕ್ರಮ, ವಿಶ್ವ ತಂಬಾಕು ವಿರೋಧಿ ದಿನಾಚರಣೆ, ಅಂತರರಾಷ್ಟಿçÃಯ ಮಾದಕ ವಸ್ತು ವಿರೋಧಿ ದಿನಾಚರಣೆ ಮುಂತಾದ ಬಗ್ಗೆ ತರಬೇತಿ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ನವ ಜೀವನ ಪೋಷಕರು ತಮ್ಮ ಅನುಭವ ಅನಿಸಿಕೆ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯಲ್ಲಿ ಟಾಪ್‌ಟೆನ್ ಶ್ರೇಣಿಗಳನ್ನು ಪಡೆದ ಸಾಧಕ ಸೇವಾ ಪ್ರತಿನಿಧಿ ಪೋಷಕರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ವಿವಿಧ ಕಡೆ ನಡೆದ ಕಾರ್ಯಕ್ರಮಗಳಲ್ಲಿ ಕೊಡಗು ಜಿಲ್ಲಾ ಯೋಜನಾ ವ್ಯಾಪ್ತಿಯ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ, ಪಿರಿಯಾಪಟ್ಟಣ, ಅರಕಲಗೂಡು ತಾಲೂಕಿನ ನವಜೀವನ ಸಮಿತಿ ಪೋಷಕರು ಪಾಲ್ಗೊಂಡಿದ್ದರು.